ETV Bharat / state

ಚಿಕ್ಕೋಡಿಯಲ್ಲಿ ಜಾರ್ಖಂಡ್ ಮೂಲದ ಕಾರ್ಮಿಕ ಸಾವು: ಹಸಿವಿನಿಂದ ಅಸುನೀಗಿರುವ ಶಂಕೆ - ಕಾರ್ಮಿಕ ಸಾವು

ಹಸಿವು ತಡೆಯಲಾಗದೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬಿಹಾರ್​ ಮೂಲದ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

migrant-labour-from-jarkhand-death
ಜಾರ್ಖಂಡ್ ಮೂಲದ ಕಾರ್ಮಿಕ ಸಾವು
author img

By

Published : May 7, 2020, 5:18 PM IST

ಚಿಕ್ಕೋಡಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಾರ್ಖಂಡ್​ ಮೂಲದ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾನೆ.

ಜಾರ್ಖಂಡ್ ಮೂಲದ ಕಾರ್ಮಿಕ ಸಾವು

ಹಸಿವು ತಾಳಲಾರದೆ ಅಸ್ವಸ್ಥಗೊಂಡು ಸತ್ತಿರಬಹುದೆಂಬ‌ ಶಂಕೆ ವ್ಯಕ್ತವಾಗಿದೆ. ಬಾಬುಲಾಲ್ ಸಿಂಗ್ (45) ಸಾವನ್ನಪ್ಪಿದ ಕಾರ್ಮಿಕ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾಲ್ನಡಿಗೆಯಲ್ಲೇ ಖಾನಾಪುರದಿಂದ ಜಾರ್ಖಂಡ್​​ಗೆ ಹೊರಟಿದ್ದ 13 ಕಾರ್ಮಿಕರು, ಚಿಕ್ಕೋಡಿ ಬಳಿ ಆಗಮಿಸಿದಾಗ ಅವರನ್ನು ತಪಾಸಣೆಗಾಗಿ ಪೊಲೀಸರು ಆಸ್ಪತ್ರೆಗೆ ಕರೆ ತಂದಿದ್ರು. ಈ ವೇಳೆ ಬಾಬುಲಾಲ್ ಸಿಂಗ್‌ಗೆ ಸರಿಯಾಗಿ ಊಟ ಸಿಗದೆ ಅಸ್ವಸ್ಥನಾಗಿ ಸಾವನ್ನಪ್ಪಿರಬಹುದು ಎನ್ನಲಾಗ್ತಿದೆ.

ಆದರೆ, ಏಕಾಏಕಿ ಆತ ಸಾವನ್ನಪ್ಪಿದ್ದರಿಂದ ಜನರಲ್ಲಿ ಆತಂಕ ಮೂಡಿದ್ದು, ಸ್ಥಳಕ್ಕೆ ಚಿಕ್ಕೋಡಿ ತಹಶೀಲ್ದಾರ್​​ ಶುಭಾಷ ಸಂಪಗಾಂವಿ, ಚಿಕ್ಕೋಡಿ ಸಿಪಿಐ‌ ಹಾಗೂ ಆರೋಗ್ಯಾಧಿಕಾರಿಗಳು ಭೇಟಿ ನೀಡಿ, ಉಳಿದ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.