ಚಿಕ್ಕೋಡಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರೂ ಶಾಸಕರಾಗಿ ಉಳಿದಿರುವ ಮಹೇಶ್ ಕುಮಟಳ್ಳಿಗೆ ಜನಸಾಮಾನ್ಯರಿಂದ ತ್ರೀವ್ರ ಆಕ್ರೋಶವ್ಯಕ್ತವಾಗುತ್ತಿದೆ.
ಬಿಜೆಪಿ ಕಚೇರಿ ಕಸಗುಡಿಸುವ ಕೆಲಸ ಮುಗಿದಿದ್ದರೆ ದಯವಿಟ್ಟು ಅಥಣಿ ಮತಕ್ಷೇತ್ರಕ್ಕೆ ಬನ್ನಿ. ಇನ್ನಾದರೂ ಪ್ರವಾಹ ಸಂತ್ರಸ್ತರ ಗೋಳು ಕೇಳಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ವಾಕ್ಸಮರ ಮಾಡಿದ ಅಥಣಿ ಮತದಾರ ಪ್ರಮೋದ ಹಿರೇಮನಿ ನ್ಯಾಯವಾದಿ ಎಂಬುವವರು ತಮ್ಮ ಅಭಿಪ್ರಾಯಗಳನ್ನು ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.
ಕಳೆದ ಒಂದು ವಾರದಿಂದಲೂ ಕ್ಷೇತ್ರದ ಜನತೆಗೆ ನಾಟ್ ರಿಚಬಲ್ ಆಗಿರುವ ಮಹೇಶ್ ಕುಮಟಳ್ಳಿಯವರೇ, ಕೃಷ್ಣಾ ನದಿ ಪ್ರವಾಹದಿಂದ ತತ್ತರಿಸಿ ಹೋಗಿರುವ ಅಥಣಿ ತಾಲೂಕಿನ ವಿವಿಧ ಗ್ರಾಮಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಅವರಿಗೆ ಸ್ಪಂದನೆ ಹಾಗೂ ಅವರಿಗೆ ಬರಬೇಕಾದ ಪರಿಹಾರ ಬಂದಿಲ್ಲ, ಇದರಿಂದ ನೆರೆ ಸಂತ್ರಸ್ತರು ಅಕ್ಷರಶಃ ಬೀದಿಗೆ ಬಂದಿದ್ದು, ಅವರ ಬಗ್ಗೆ ಕಾಳಜಿ ವಹಿಸಿ. ಸಚಿವ ಸ್ಥಾನಕ್ಕಾಗಿ ದೆಹಲಿ, ಬೆಂಗಳೂರು ಸುತ್ತಾಡಿದ್ದು ಸಾಕು, ನಿಮಗೆ ಸಚಿವ ಸ್ಥಾನ ಸಿಕ್ಕಿಲ್ಲ ಈಗಲಾದರೂ ಮತಕ್ಷೇತ್ರಕ್ಕೆ ಬಂದು ಜನರ ನೋವಿಗೆ ನೆರವಾಗಿ ಎಂದರು.
ಡಿಸಿಎಂ ಲಕ್ಷಣ ಸವದಿ ಅವರು ಮಾರ್ಗದರ್ಶನದಲ್ಲಿ ಅಥಣಿ ಜನತೆ ಮಹೇಶ ಕುಮಟಳ್ಳಿ ಅವರಿಗೆ ಮತ ನೀಡಿ ವಿಜಯಶಾಲಿಯನ್ನಾಗಿ ಮಾಡಿದ್ದಾರೆ. ಇನ್ನೂ ಅವರಿಗೆ ಸರಿಯಾಗಿ ಮಾರ್ಗದರ್ಶನ ಮಾಡಬೇಕು ಎಂದು ನ್ಯಾಯವಾದಿ ಪ್ರಮೋದ್ ಹಿರೇಮನಿ ತಮ್ಮ ಅನಿಸಿಕೆಗಳನ್ನು ಈಟಿವಿ ಭಾರತ ಜೊತೆಗೆ ಹಂಚಿಕೊಂಡಿದ್ದಾರೆ.