ETV Bharat / state

ಕೃಷ್ಣಾಗೆ ತಡೆಗೋಡೆ ನಿರ್ಮಿಸಿ ಗಾಯದ ಮೇಲೆ ಬರೆ ಎಳೆದ ಮಹಾರಾಷ್ಟ್ರ..! - Maharashtra

ಮಹಾರಾಷ್ಟ್ರ ವ್ಯಾಪ್ತಿಯ ಕೃಷ್ಣಾ ನದಿ ತೀರದ ಗ್ರಾಮಸ್ಥರು ತಾತ್ಕಾಲಿಕ ತಡೆಗೋಡೆ ನಿರ್ಮಿಸಿ ರಾಜ್ಯದ ರೈತರ ಗಾಯದ ಮೇಲೆ ಬರೆ ಎಳೆದಿದ್ದಾರೆ.

ಕೃಷ್ಣಾ ನದಿಗೆ ತಾತ್ಕಾಲಿಕ ತಡೆಗೋಡೆ ನಿರ್ಮಿಸಿದ ಸ್ಥಳ
author img

By

Published : May 18, 2019, 2:30 PM IST

ಚಿಕ್ಕೋಡಿ : ರಾಜ್ಯದಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಏತನ್ಮಧ್ಯೆ ಮಹಾರಾಷ್ಟ್ರ ವ್ಯಾಪ್ತಿಯ ಸಾರ್ವಜನಿಕರು ಹತ್ತಾರು ತಾಲೂಕಿನ ರೈತರ ದಾಹ ತೀರಿಸುವ ಕೃಷ್ಣಾ ನದಿಗೆ ಅಡ್ಡಲಾಗಿ ತಾತ್ಕಾಲಿಕ ಮಣ್ಣಿನ ತಡೆಗೋಡೆಯೊಂದನ್ನು ನಿರ್ಮಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಿದ್ದಾರೆ. ಇದರಿಂದ ರಾಜ್ಯದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಾಪುರ ಬ್ಯಾರೇಜ್​ನಿಂದ ಕೃಷ್ಣಾ ನದಿಗೆ ಹರಿಸಿರುವ ನೀರನ್ನು ಮಹಾರಾಷ್ಟ್ರದ ಸೈನಿಕ ಟಾಕಳಿ ಗ್ರಾಮಸ್ಥರು ಚಂದೂರ ಟೇಕ್​​ ಬಳಿ ಕಲ್ಲು ಹಾಗೂ ಮಣ್ಣುಮಿಶ್ರಣ ಮಾಡಿ ಸುಮಾರು 4 ಅಡಿ ಎತ್ತರದ ತಾತ್ಕಾಲಿಕ ಗೋಡೆ ನಿರ್ಮಿಸಿ ನೀರು ತಡೆ ಹಿಡಿದಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯೇ ಕೃಷ್ಣಾ ನದಿ ಬತ್ತಿ ಹೋಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನದಿ ತೀರದ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಮಿತಿ ಮೀರಿದೆ. ತಮ್ಮ ಕ್ಷೇತ್ರದ ಜನರಿಗೆ ನೀರು ಸಿಗಲಿ ಎಂದು ಮಹಾರಾಷ್ಟ್ರದ ಶಿರೋಳ ಶಾಸಕ ಉಲ್ಲಾಸ್​ ಪಾಟೀಲ್​ ಕಳೆದ ವಾರ ರಾಜಾಪುರ ಬ್ಯಾರೇಜ್​ನಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿಸಿಕೊಂಡಿದ್ದರು. ಆ ನೀರು ಖಿದ್ರಾಪುರ, ಸೈನಿಕ ಟಾಕಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳತ್ತ ಹರಿದಿತ್ತು.

ಕೃಷ್ಣಾ ನದಿಗೆ ತಾತ್ಕಾಲಿಕ ತಡೆಗೋಡೆ ನಿರ್ಮಿಸಿದ ಸ್ಥಳ

ಚಂದೂರ ಟೇಕ್​ ಬಳಿ ಗ್ರಾಮಸ್ಥರು ಇದೀಗ ತಾತ್ಕಾಲಿಕ ತಡೆಗೋಡೆ ನಿರ್ಮಿಸಿ, ಗಾಯದ ಮೇಲೆ ಬರೆ ಎಳೆದಿದ್ದಾರೆ. ಕಾರಣ ತಡೆಗೋಡೆ ಇಲ್ಲದಿದ್ದರೆ ಅಥಣಿ ತಾಲೂಕಿನ ಮಂಗಾವತಿ, ಜೂಗೂಳ, ಚಿಕ್ಕೋಡಿಯ ಚಂದೂರ ಹಾಗೂ ಕಲ್ಲೋಳದತ್ತ ನೀರು ಹರಿಯುತ್ತಿತ್ತು. ಆದರೆ, ತಡೆಗೋಡೆ ನಿರ್ಮಿಸಿದ್ದರಿಂದ ನೀರು ಕರ್ನಾಟಕ ರಾಜ್ಯದ ಕಡೆ ಹರಿದು ಬರುತ್ತಿಲ್ಲ. ಇದರಿಂದ ನೀರಿನ ಅಭಾವ ಹೆಚ್ಚಾಗಿದೆ. ಈ ಪರಿಸ್ಥಿತಿಯಲ್ಲಿ ಸೈನಿಕ ಟಾಕಳಿ ಗ್ರಾಮಸ್ಥರು ತಡೆಗೋಡೆ ನಿರ್ಮಿಸಿರುವುದು ಖಂಡನೀಯ. ಇದರ ಬಗ್ಗೆ ತಾಲೂಕು ಆಡಳಿತದ ಗಮನಕ್ಕೆ ತಂದಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Intro:ಕೃಷ್ಣಾ ನದಿಗೆ ಮಹಾರಾಷ್ಟ್ರ ಗ್ರಾಮಸ್ಥರಿಂದ ತಡೆಗೋಡೆ ನಿರ್ಮಾಣ
Body:
ಚಿಕ್ಕೋಡಿ :

ಇತ್ತ ಕರ್ನಾಟಕದಲ್ಲಿ ಕ್ರಷ್ಣಾನದಿಗೆ ನೀರಿಲ್ಲದೆ ಜನ ಕಂಗಾಲಿದ್ದರೆ, ಅತ್ತ ಮಹಾರಾಷ್ಟ್ರದ ವ್ಯಾಪ್ತಿಯ ರೈತರು ಕ್ರಷ್ಣಾನದಿಗೆ ಅಡ್ಡಲಾಗಿ ಮಣ್ಣಿನ ಬಾಂಧಾರವನ್ನು ಹಾಕಿ. ಕರ್ನಾಟಕಕ್ಕೆ ನೀರು ಬಾರದಂತೆ ಅಮಾನವೀಯ ಕೆಲಸಕ್ಕೆ ಮುಂದಾಗಿದ್ದಾರೆ..

ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ ಹರಿಸಿರುವ ನೀರನ್ನು ಮಹಾರಾಷ್ಟ್ರದ ಸೈನಿಕ–ಟಾಕಳಿ ಗ್ರಾಮಸ್ಥರು ಚಂದೂರ ಟೇಕ್‌ ಬಳಿ ಕಲ್ಲು ಮಣ್ಣುಗಳಿಂದ ಸುಮಾರು 4 ಅಡಿ ಎತ್ತರದ ತಾತ್ಕಾಲಿಕ ಗೋಡೆ ನಿರ್ಮಿಸಿ ತಡೆ ಹಿಡಿದಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆಯೇ ಕೃಷ್ಣಾ ಬತ್ತಿ ಹೋಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನದಿ ತೀರದ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ತಮ್ಮ ಕ್ಷೇತ್ರದ ಜನರಿಗೆ ನೀರು ಸಿಗಲಿ ಎಂದು ಮಹಾರಾಷ್ಟ್ರದ ಶಿರೋಳ ಶಾಸಕ ಉಲ್ಲಾಸ ಪಾಟೀಲ ಕಳೆದ ವಾರ ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿಸಿಕೊಂಡಿದ್ದರು. ಆ ನೀರು ಖಿದ್ರಾಪುರ, ಸೈನಿಕ– ಟಾಕಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳತ್ತ ಹರಿದಿತ್ತು.

ಚಂದೂರ ಟೇಕ್‌ ಬಳಿ ಗ್ರಾಮಸ್ಥರು ತಾತ್ಕಾಲಿಕ ತಡೆಗೋಡೆ ನಿರ್ಮಿಸಿ, ನೀರು ತಡೆಹಿಡಿದಿದ್ದಾರೆ. ತಡೆಗೋಡೆ ಇಲ್ಲದಿದ್ದಿದ್ದರೆ ಅಥಣಿ ತಾಲ್ಲೂಕಿನ ಮಂಗಾವತಿ, ಜೂಗೂಳ, ಚಿಕ್ಕೋಡಿಯ ಚಂದೂರ ಹಾಗೂ ಕಲ್ಲೋಳದತ್ತ ಹರಿಯುತ್ತಿತ್ತು. ಆದರೆ, ತಡೆಗಿಡೆ ಕಟ್ಟಿದ್ದರಿಂದ ನೀರು ಕರ್ನಾಟಕ ರಾಜ್ಯದ ಕಡೆ ಹರಿದು ಬರುತ್ತಿಲ್ಲ.

ಕೃಷ್ಣಾ ನದಿ ಬತ್ತಿ ಹೋಗಿದೆ. ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಸೈನಿಕ–ಟಾಕಳಿ ಗ್ರಾಮಸ್ಥರು ತಡೆಗೋಡೆ ನಿರ್ಮಿಸಿರುವುದು ಖಂಡನೀಯ. ಇದರ ಬಗ್ಗೆ ತಾಲ್ಲೂಕು ಆಡಳಿತದ ಗಮನಕ್ಕೆ ತಂದಿದ್ದರೂ ಏನೂ ಪ್ರಯೋಜನವಾಗಿಲ್ಲ. ತಡೆಗೋಡೆ ನಿರ್ಮಾಣ ಆಗದೇ ಇದ್ದಿದ್ದರೆ ಅಥಣಿ, ಚಿಕ್ಕೋಡಿ, ರಾಯಬಾಗ ತಾಲ್ಲೂಕಿನ ಕುಡಚಿವರೆಗೆ ನೀರು ಹರಿಯುತ್ತಿತ್ತು ಎಂದು ಇಲ್ಲಿನ ರೈತರು ದೂರುತ್ತಿದ್ದಾರೆ.

Conclusion:ಸಂಜಯ ಕೌಲಗಿ‌
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.