ಚಿಕ್ಕೋಡಿ: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ಗೆ ಜೀವ ಬೆದರಿಕೆ ಕರೆ ಮಾಡಲಾಗಿದ್ದು, ಈ ಕುರಿತು ಪ್ರಮೋದ್ ಮುತಾಲಿಕ್ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ನಿನ್ನೆ ರಾತ್ರಿ ನಾನು ಹುಕ್ಕೇರಿಯಲ್ಲಿ ಇರುವಾಗ ನಾಲ್ಕೈದು ಬೆದರಿಕೆ ಪೋನ್ ಕರೆಗಳು ಬಂದಿದ್ದವು. ಉರ್ದು ಭಾಷೆ ಮಿಶ್ರಿತ ಮಂಗಳೂರು ಕನ್ನಡದಲ್ಲಿ ಅತ್ಯಂತ ಕೆಟ್ಟ ಭಾಷೆಯನ್ನ ಪ್ರಯೋಗಿಸಿ ಜೀವ ಬೆದರಿಕೆ ಹಾಕಿದ್ದಾರೆ. ಕೊಂದು ಹಾಕುತ್ತೇವೆ, ಕೊಲೆ ಮಾಡುತ್ತೇವೆ, ಕೊಚ್ಚಿಕೊಚ್ಚಿ ಕೊಲೆ ಮಾಡುತ್ತೇವೆ ಅಂತಾ ಬೆದರಿಕೆ ಹಾಕಿದ್ದಾರೆ.
ಇವತ್ತು ಕೂಡ ಐದು ಪೋನ್ ಕರೆಗಳು ಬಂದಿದ್ದವು. ಅದರಲ್ಲಿ ನಾನು ಎರಡು ಪೋನ್ ಕರೆಗಳನ್ನು ಸ್ವೀಕಾರ ಮಾಡಿದ್ದೇನೆ. ಆಗಲೂ ಅತ್ಯಂತ ಹೀನಾಯ ಬೆದರಿಕೆ ಹಾಕಿ ಬೈಯವುದನ್ನ ಮಾಡಿದ್ದಾರೆ. ಹೀಗಾಗಿ ಈ ಎಲ್ಲ ನಂಬರ್ ಪೊಲೀಸರಿಗೆ ಕೊಟ್ಟು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಸೂಕ್ತವಾದ ತನಿಖೆ ಮಾಡಬೇಕು ಅಂತಾ ಪೊಲೀಸರಿಗೆ ಒತ್ತಾಯ ಮಾಡಿದ್ದೇನೆ. ಪೊಲೀಸರು ಭರವಸೆ ಕೊಟ್ಟಿದ್ದಾರೆ ಎಂದರು.
ಇದೇನು ಮೊದಲನೇ ಬಾರಿ ಅಲ್ಲ ನನಗೆ ಬೆದರಿಕೆ ಕೆರೆ ಬರುತ್ತಿರುವುದು, ಈ ಹಿಂದೆಯೂ ಇದೇ ರೀತಿ ಹಲವಾರು ಬಾರಿ ಜೀವ ಬೆದರಿಕೆ ಕರೆಗಳು ಬಂದಿವೆ. ಈ ರೀತಿಯ ಗೊಡ್ಡು ಬೆದರಿಕೆಗಳನ್ನು ಹಾಕುವವರು ನಾಟಕ ಆಡೋದನ್ನು ಬಿಡಬೇಕು. ನಾನು ಇಂತಹ ಬೆದರಿಕೆಗೆ ಹೆದರುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ ಭಕ್ತರಿಂದ ಜೀವಬೆದರಿಕೆ: ಬಹಿರಂಗ ಕ್ಷಮೆಯಾಚಿಸಿದ ಕೆ ಸಿ ಪುಟ್ಟಸಿದ್ದಶೆಟ್ಟಿ