ETV Bharat / state

ಸಚಿವ ಸ್ಥಾನದಿಂದ ಕುಮಟಳ್ಳಿ ವಂಚಿತ: ಬಿಎಸ್​​ವೈ ವಿರುದ್ಧ ಅಥಣಿ ಜನತೆ ಆಕ್ರೋಶ...

author img

By

Published : Jan 13, 2021, 3:41 PM IST

Updated : Jan 13, 2021, 5:13 PM IST

ಉಪಚುನಾವಣೆಯಲ್ಲಿ 40 ಸಾವಿರ ಮತಗಳ ಅಂತರದಿಂದ ಗೆದ್ದಿರುವ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಅಥಣಿ ತಾಲೂಕಿನ ಜನರು ಸಿಎಂ ಯಡಿಯೂರಪ್ಪ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

kumatalli-deprived-of-ministerial-position-athani-people-outrage-against-bsy
ರಮೇಶಗೌಡ ಪಾಟೀಲ್

ಅಥಣಿ: ಶಾಸಕ ಮಹೇಶ್ ಕುಮಟಳ್ಳಿ ಅವರ ತ್ಯಾಗದ ಪ್ರತಿಫಲವಾಗಿ ಬಿ. ಎಸ್. ಯಡಿಯೂರಪ್ಪನವರ ಸರ್ಕಾರ ರಚನೆಯಾಗಿದ್ದು, ಆದರೆ ಇದೀಗ 2ನೇ ಬಾರಿಯೂ ಕುಮಟಳ್ಳಿ ಅವರನ್ನು ಸಚಿವ ಸಂಪುಟದಲ್ಲಿ ಕೈಬಿಟ್ಟಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇವತ್ತು ಸಂಜೆ ಬಿಎಸ್​ವೈ ಸರ್ಕಾರ 2ನೇ ಹಂತದ ಸಚಿವ ಸಂಪುಟ ರಚನೆ ಮುಹೂರ್ತ ಘೋಷಿಸಿದ್ದು, ನೂತನ ಸಚಿವರ ಹೆಸರುಗಳನ್ನು ಸ್ವತಃ ಸಿಎಂ ಘೋಷಿಸಲಿದ್ದಾರೆ.

ಬಿಎಸ್​​ವೈ ವಿರುದ್ಧ ಕುಮಟಳ್ಳಿ ಬೆಂಬಲಿಗರು ಆಕ್ರೋಶ

ಉಪಚುನಾವಣೆಯಲ್ಲಿ 40 ಸಾವಿರ ಅಂತರ ಮತಗಳಿಂದ ಗೆದ್ದಿರುವ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ತಾಲೂಕಿನ ಜನರು ಬಿ. ಎಸ್. ಯಡಿಯೂರಪ್ಪ ಅವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಉಪ ಚುನಾವಣೆ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರು ಅಥಣಿಗೆ ಆಗಮಿಸಿದ ಸಮಯದಲ್ಲಿ ಮಹೇಶ್ ಕುಮಟಳ್ಳಿ ಅವರನ್ನು ಆಯ್ಕೆ ಮಾಡಿದರೆ ಸಚಿವ ಸ್ಥಾನ ನೀಡುತ್ತೇನೆಂದು ತಾಲೂಕಿನ ಜನರಿಗೆ ಭರವಸೆ ನೀಡಿದ್ದರು. ಈಗಾಗಲೇ ಮೊದಲನೇ ಸಚಿವ ಸಂಪುಟದಲ್ಲಿಯೂ ಅವರನ್ನು ಕೈಬಿಟ್ಟಿದ್ದರು. ಈ ಬಾರಿ 2ನೇ ಹಂತದ ಸಚಿವ ಸಂಪುಟದಲ್ಲಿಯೂ ಕೈಬಿಟ್ಟಿದರಿಂದ ನಮಗೆ ತುಂಬಾ ನಿರಾಸೆಯಾಗಿದೆ ಎಂದು ರಮೇಶಗೌಡ ಪಾಟೀಲ್ ಹಾಗೂ ಚಿದಾನಂದ ಪಾಟೀಲ್ ಅವರು ಈಟಿವಿ ಭಾರತ್ ಮುಖಾಂತರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಓದಿ: ಸಚಿವ ಸ್ಥಾನ ತಪ್ಪಿದ್ದಕ್ಕೆ ಶಾಸಕ ಮಹೇಶ ಕುಮಟಳ್ಳಿ ಹೇಳಿದ್ದೇನು?

Last Updated : Jan 13, 2021, 5:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.