ETV Bharat / state

ಕರ್ನಾಟಕದಲ್ಲಿ ಬಿಜೆಪಿ ಏಕ ಶಿಲೆಯಾಗಿ ಗೆಲುವು ಸಾಧಿಸುತ್ತಿದೆ: ಕೆ.ಎಸ್. ಈಶ್ವರಪ್ಪ

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎಂಬ ಎರಡು ಗುಂಪುಗಳಿವೆ. ಇದಕ್ಕೆ ಮೈಸೂರು ಮೇಯರ್ ಚುನಾವಣೆ ಸಾಕ್ಷಿ. ರಾಜ್ಯದಲ್ಲಿ ಬಿಜೆಪಿ ಏಕ ಶಿಲೆಯಾಗಿ ಗೆಲುವು ಸಾಧಿಸುತ್ತಿದೆ. ಮುಂದೆಯೂ ಕೂಡ ಗೆಲುವು ಸಾಧಿಸಲಿದೆ. ಇನ್ನು ಗುಲಾಮಗಿರಿ ಎಂಬ ಪದ ಕಾಂಗ್ರೆಸ್‌ಗೆ ಮಾತ್ರ ಸಿಮೀತವೇ ಹೊರತು, ಬಿಜೆಪಿ ಪಕ್ಷಕ್ಕೆ ಸಂಬಂಧವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್ಯ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

author img

By

Published : Mar 30, 2021, 7:29 PM IST

ಪಂಚಾಯತ್​ ರಾಜ್ಯ ಸಚಿವ ಕೆ.ಎಸ್. ಈಶ್ವರಪ್ಪ
ಪಂಚಾಯತ್​ ರಾಜ್ಯ ಸಚಿವ ಕೆ.ಎಸ್. ಈಶ್ವರಪ್ಪ

ಬೆಳಗಾವಿ: ಕರ್ನಾಟಕದಲ್ಲಿ ಬಿಜೆಪಿ ಏಕ ಶಿಲೆಯಾಗಿ ಗೆಲುವು ಸಾಧಿಸುತ್ತಿದೆ. ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಮೂರು ಉಪಚುನಾವಣೆಯಲ್ಲಿ ಪಕ್ಷ ಗೆಲ್ಲಲಿದೆ. ಬಿಜೆಪಿ ಪಕ್ಷ ಸಂಘಟನಾತ್ಮಕವಾಗಿ ಗ್ರಾಮ ಗ್ರಾಮದಲ್ಲಿ ಬೇರೂರಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್ಯ ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಪಂಚಾಯತ್​ ರಾಜ್ಯ ಸಚಿವ ಕೆ.ಎಸ್. ಈಶ್ವರಪ್ಪ

ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಎಂಬ ಎರಡು ಗುಂಪುಗಳಿವೆ. ಇದಕ್ಕೆ ಮೈಸೂರು ಮೇಯರ್ ಚುನಾವಣೆ ಸಾಕ್ಷಿ. ಈಗಾಗಲೇ ಕಾಂಗ್ರೆಸ್ ಎರಡು ಗುಂಪಾಗಿ ಬೆತ್ತಲಾಗಿದೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಛಿದ್ರ ಛಿದ್ರವಾಗಿದೆ ಎಂದು ಹೇಳಿದರು.

ಸಿಡಿ ಪ್ರಕರಣ ವಿಚಾರ

ಸಿಡಿ ವಿಚಾರದಲ್ಲಿ ಡಿಕೆಶಿ ಪಾತ್ರವಿದೆ ಎಂದು ಯುವತಿ ಪೋಷಕರ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್ ತಪ್ಪಿತಸ್ಥರೆಂಬ ಆರೋಪದ ಬಗ್ಗೆ ಸಿದ್ದರಾಮಯ್ಯ ಏನೂ ಹೇಳುತ್ತಿಲ್ಲ. ಅಂದ್ಮೇಲೆ ಸಿಡಿ ಬಗ್ಗೆ ನಾನೇನು ಹೇಳಲಿ?. ಸಿಡಿ ಬಗ್ಗೆ ನಾನು ಏನೂ ಹೇಳಲು ಇಷ್ಟ ಪಡುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಸರಳವಾಗಿ ನಾಮಪತ್ರ ಸಲ್ಲಿಸಿದ ಬೆಳಗಾವಿ ಬಿಜೆಪಿ ಅಭ್ಯರ್ಥಿ: ಸಿಎಂ, ಕಟೀಲ್, ಜೋಶಿ ಸಾಥ್

ಸಿದ್ದರಾಮಯ್ಯ ರಾಜ್ಯದ ಸಂಸದರು ಗುಲಾಮರು ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಗುಲಾಮರಾಗಿ, ಗುಲಾಮರು, ಗುಲಾಮರು ಅಂತಾ ತಲೆಯಲ್ಲಿ ಉಳಿದುಕೊಂಡಿದೆ. ಬಿಜೆಪಿಯಲ್ಲಿ ಗುಲಾಮರಿಲ್ಲ, ಪಕ್ಷ ನಿಷ್ಠೆಯಿರುವ ಕಾರ್ಯಕರ್ತರಿದ್ದಾರೆ. ಪ್ರಧಾನಿ ಮೋದಿಯವರ ಮಾತುಗಳಿಗೆ ದೇಶದ ಜನತೆಯಲ್ಲ, ವಿಶ್ವದ ಜನ ಗೌರವ ಕೊಡ್ತಾರೆ. ಗುಲಾಮಗಿರಿ ಪದ ಕಾಂಗ್ರೆಸ್‌ಗೆ ಸಿಮೀತವೇ ಹೊರತು ಬಿಜೆಪಿ ಪಕ್ಷಕ್ಕೆ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.