ETV Bharat / state

ಚಿಕ್ಕೋಡಿಯ ಗ್ರಾಮಗಳತ್ತ ಕೃಷ್ಣೆ ನೀರು... ಆತಂಕದಲ್ಲಿ ಗ್ರಾಮಸ್ಥರು

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಪ್ರವಾಹ ಭೀತಿ ಹೆಚ್ಚಾಗಿದ್ದು, ಗ್ರಾಮಗಳತ್ತ ಕೃಷ್ಣಾ ನದಿ ನೀರು ನುಗ್ಗುತ್ತಿರುವುದರಿಂದ ಆತಂಕ ಸೃಷ್ಟಿಯಾಗಿದೆ.

ಕೃಷ್ಣಾ ನದಿ ನೀರು
author img

By

Published : Aug 4, 2019, 12:12 PM IST

ಚಿಕ್ಕೋಡಿ: ಮಹಾರಾಷ್ಟ್ರದ ಕೋಯ್ನಾ ಜಲಾಶಯನಿಂದ ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮಕ್ಕೆ ನೀರು ನುಗ್ಗಿದೆ.

ಕಲ್ಲೋಳ ಗ್ರಾಮದ ಬಸ್ ನಿಲ್ದಾಣ, ಶಾಲಾ ಆವರಣಕ್ಕೆ ನೀರು ನುಗ್ಗಿದ್ದು, ಕಲ್ಲೋಳ-ಯಡಿಯೂರ ನಡುವಿನ ಸಂಪರ್ಕ ಕಡಿತಗೊಂಡಿದೆ. ಗ್ರಾಮದತ್ತ ನೀರು ಹರಿದುಬರುತ್ತಿರುವುದನ್ನು ಕಂಡ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಮಧ್ಯಾಹ್ನದ ವೇಳೆಗೆ ಗ್ರಾಮದ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ.

ಗ್ರಾಮಗಳತ್ತ ಕೃಷ್ಣಾ ನದಿ ನೀರು

ಇನ್ನು ಬೋಟ್​​ಗಾಗಿ ಜನರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಕಲ್ಲೋಳ ಗ್ರಾಮವು 2005ರಲ್ಲಿ‌ ಪ್ರವಾಹದಿಂದ ಮುಳುಗಡೆಯಾಗಿತ್ತು. ಅಂದು ಗ್ರಾಮ ಸ್ಥಳಾಂತರ ಮಾಡಲಾಗುವುದು ಎಂದು ಅಂದಿನ ಜಿಲ್ಲಾಡಳಿತದ ಅಧಿಕಾರಿಗಳು ಭರವಸೆ ನೀಡಿದ್ದರೂ ಇಲ್ಲಿಯವರೆಗೂ ಈಡೇರಿಲ್ಲ.

Intro:ಚಿಕ್ಕೋಡಿ ಗಡಿ ಗ್ರಾಮಗಳನ್ನು ಪ್ರವೇಶಿಸಿದ ಕೃಷ್ಣೆ
Body:
ಚಿಕ್ಕೋಡಿ :

ಮಹಾರಾಷ್ಟ್ರದ ಕೋಯ್ನಾ ಡ್ಯಾಂ ನಿಂದ ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮಕ್ಕೆ ನುಗ್ಗಿದ ನೀರು.

ಕಲ್ಲೋಳ ಗ್ರಾಮದ ಬಸ್ ನಿಲ್ದಾಣ, ಶಾಲಾ ಆವರಣಕ್ಕೆ ನುಗ್ಗಿದ ನೀರು. ಕಲ್ಲೋಳ - ಯಡಿಯೂರ ಸಂಪರ್ಕ ಕಡಿತ. ಗ್ರಾಮದ‌ ಅಂಚಿನಲ್ಲಿ ನಿಂತು ನೀರು ಬರುತ್ತಿರುವುದನ್ನ ಆತಂಕದಲ್ಲಿ ಗಮನಿಸುತ್ತಿರುವ ಗ್ರಾಮಸ್ಥರು.
ಬೋಟಗಾಗಿ ಜನರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು ಯಾವುದೇ ವ್ಯವಸ್ಥೆ ಮಾಡದ ಅಧಿಕಾರಿಗಳು.

ಮಧ್ಯಾಹ್ನದ ವೇಳೆಗೆ ಗ್ರಾಮದ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ. 2005ರಲ್ಲಿ‌ ಮುಳುಗಡೆಯಾಗಿದ್ದ ಕಲ್ಲೋಳ ಗ್ರಾಮ. ಅಂದು ಗ್ರಾಮ ಸ್ಥಳಾಂತರ ಮಾಡುತ್ತೇವೆ ಎಂದು ಇಲ್ಲಿಯವರೆಗೂ ಸೈಲೆಂಟ್ ಆಗಿರುವ ಜಿಲ್ಲಾಡಳಿತ, ಈಗ ಮತ್ತೆ ಪ್ರವಾಹ ಭೀತಿ ಹಿನ್ನೆಲೆ ಕಲ್ಲೋಳ ಗ್ರಾಮಕ್ಕೆ ಎದುರಾಗಿದೆ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.