ETV Bharat / state

ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆ....40ಕ್ಕೂ ಹೆಚ್ಚು ಮನೆಗಳು‌ ಜಲಾವೃತ - homes drown by rain in belagavi news

ಬೆಳಗಾವಿ ಜಿಲ್ಲಾದ್ಯಂತ ಭಾರಿ ಮಳೆಯಾಗುತ್ತಿದ್ದು, ರಾಯಬಾಗ ತಾಲೂಕಿನಲ್ಲಿ ಸುಮಾರು 40 ಮನೆಗಳು ಜಲಾವೃತವಾಗಿವೆ.

40 ಕ್ಕೂ ಹೆಚ್ಚು ಮನೆಗಳು‌ ಜಲಾವೃತ
author img

By

Published : Oct 22, 2019, 3:29 PM IST

ಬೆಳಗಾವಿ/ ಚಿಕ್ಕೋಡಿ:ಬೆಳಗಾವಿ ಜಿಲ್ಲಾದ್ಯಂತ ಭಾರಿ ಮಳೆಯಾಗುತ್ತಿದ್ದು, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ದಿಗ್ಗೇವಾಡಿ ಗ್ರಾಮದಲ್ಲಿ 40 ಕ್ಕೂ ಹೆಚ್ಚು ಮನೆಗಳು‌ ಜಲಾವೃತಗೊಂಡಿವೆ.

40 ಕ್ಕೂ ಹೆಚ್ಚು ಮನೆಗಳು‌ ಜಲಾವೃತ

ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಸೂಕ್ತ ಪರಿಹಾರಕ್ಕೆ ಸಂತ್ರಸ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.ಇನ್ನು ಬೆಳಗಾವಿ ಮೂಡಲಗಿ ತಾಲೂಕಿನ ಮೂಸಗುಪ್ಪಿ ಗ್ರಾಮದಲ್ಲಿ ಭಾರಿ ಮಳೆಯಾಗುತ್ತಿದ್ದು, ಹಳ್ಳ ತುಂಬಿ ಊರೊಳಗೆ ನೀರು ನುಗ್ಗಿದ್ದು, ಸಂಪೂರ್ಣ ಗ್ರಾಮ ಮುಳುಗಡೆಯಾಗಿದೆ. ಮೂಸಗುಪ್ಪಿ ಗ್ರಾಮದ ಲಕ್ಷ್ಮೀ ದೇವಸ್ಥಾನಕ್ಕೂ ನೀರು ನುಗ್ಗಿದೆ. ಭಾರಿ ಮಳೆ ಹಿನ್ನೆಲೆ ಗ್ರಾಮಸ್ಥರಿಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗಿದೆ‌.

Intro:ಹಳ್ಳ ತುಂಬಿ ಗ್ರಾಮಕ್ಕೆ ನುಗ್ಗಿದ ನೀರು : ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಬೆಳಗಾವಿ : ಮೂಡಲಗಿ ತಾಲೂಕಿನ ಮೂಸಗುಪ್ಪಿ ಗ್ರಾಮದಲ್ಲಿ ಭಾರಿ ಮಳೆಯಾಗುತ್ತಿದ್ದು. ಗ್ರಾಮದ ಹಳ್ಳ ತುಂಬಿದ ಪರಿಣಾಮ ಊರಲ್ಲಿ ನೀರು ನುಗ್ಗಿದ್ದು ಸಂಪೂರ್ಣ ಗ್ರಾಮ ಮುಳುಗಡೆಯಾಗಿದೆ.

Body:ತಾಲೂಕಿನಲ್ಲಿ ಕಳೆದ ಎರಡೂ ದಿನಗಳಿಂದ ಸುರಿಯುತಗತಿರುವ ಧಾರಾಕಾರ ಮಳೆಯಿಂದ ಅನೇಕ ಗ್ರಾಮಗಳು ಜಲಾವೃತವಾಗಿವೆ. ಮೂಸಗುಪ್ಪಿ ಗ್ರಾಮದ ಲಕ್ಷ್ಮೀ ದೇವಸ್ಥಾನದಲ್ಲಿಯೂ ನೀರು ನುಗ್ಗಿದ್ದು ದೇವಸ್ಥಾನಕ್ಕೆ ಜಲ ದಿಗ್ಬಂಧನ ಉಂಟಾಗಿದೆ.

Conclusion:ಗ್ರಾಮದ ಅನೇಕ ಮನೆಗಳಲ್ಲಿ ನೀರು ಹೊಕ್ಕಿದ್ದು ನೀರಿನ ಪ್ರಮಾಣ ಜಾಸ್ತಿ ಆಗುತಗತಿದ್ದು ಗ್ರಾಮಸ್ಥರಿಗೆ ಸ್ಥಳಾಂತರ ಆಗುವಂತೆ ಸೂಚನೆ ನೀಡಲಾಗಿದೆ‌. ಮಳೆಯ ಆವಾಂತರದಿಂದ ಜಿಲ್ಲೆಯ ಅನೇಕ ಗ್ರಾಮಗಳು ಜಲಾವೃತವಾಗಿದ್ದು ಕಳೆದ ಎರಡೂ ತಿಂಗಳಲ್ಲಿ ನದಿ ಪಾತ್ರದ ಜನರಿಗೆ ಜಲ ಕಂಟಕ ಎದುರಾಗಿದೆ.

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.