ETV Bharat / state

ಉಪಚುನಾವಣೆ ಬಳಿಕ ಸರ್ಕಾರ ಪತನ ಹುಚ್ಚು ಭ್ರಮೆಯಷ್ಟೇ: ಕಾಂಗ್ರೆಸ್​​ಗೆ ಶೆಟ್ಟರ್ ತಿರುಗೇಟು - ಜಗದೀಶ್ ಶೆಟ್ಟರ್ ಸುದ್ದಿ

ದೇಶದ ಎಲ್ಲ ರಾಜ್ಯದಳಲ್ಲಿ ಕಾಂಗ್ರೆಸ್ ಝೀರೋ ಆಗ್ತಿದೆ. ಸರ್ಕಾರ ಪತನ ಕೇವಲ ಕಾಂಗ್ರೆಸ್ ‌ಭ್ರಮೆಯಷ್ಟೇ ಎಂದು ಸಚಿವ ಜಗದೀಶ್ ಶೆಟ್ಟರ್ ಬೆಳಗಾವಿಯಲ್ಲಿ ಹೇಳಿದರು.

Jagadish shetter
ಜಗದೀಶ್ ಶೆಟ್ಟರ್
author img

By

Published : Apr 13, 2021, 1:49 PM IST

ಬೆಳಗಾವಿ: ಉಪಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ ಎಂಬ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್​ ಸಿಂಗ್ ಸುರ್ಜೆವಾಲಾ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಜಗದೀಶ್ ಶೆಟ್ಟರ್, ಸರ್ಕಾರ ಪತನ ಕೇವಲ ಕಾಂಗ್ರೆಸ್ ‌ಭ್ರಮೆಯಷ್ಟೇ ಎಂದು ವ್ಯಂಗ್ಯವಾಡಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಝೀರೋ ಆಗ್ತಿದೆ. ಕಾಂಗ್ರೆಸ್ ಪಕ್ಷ ದೇಶದಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿಯುತ್ತಿದೆ ಎಂದು ಟೀಕಿಸಿದರು.

ಸಚಿವ ಜಗದೀಶ್ ಶೆಟ್ಟರ್

ಕಾಂಗ್ರೆಸ್​ಗೆ ಶೆಟ್ಟರ್ ಸವಾಲು!
ರಾಜ್ಯ ಸರ್ಕಾರದಲ್ಲಿ 'ವಿಜಯೇಂದ್ರ ಟ್ಯಾಕ್ಸ್' ಇದೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ನಾಯಕರ ಆರೋಪ ಆಧಾರರಹಿತ. ವಿಜಯೇಂದ್ರ ಟ್ಯಾಕ್ಸ್ ಅನ್ನುವ ಕಾಂಗ್ರೆಸ್ ನಾಯಕರು ಅದನ್ನು ಬಹಿರಂಗಪಡಿಸಲಿ. ಈ ವಿಷಯವನ್ನು ಅಧಿವೇಶನದಲ್ಲಿ ಚರ್ಚೆ ಮಾಡಬೇಕಿತ್ತು. ಸದನದಲ್ಲಿ ಕೇವಲ ಸಿಡಿ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್‌ ‌ನಾಯಕರು ಈಗ ಮಾಡುತ್ತಿರುವ ಯಾವ ಆರೋಪದ ಬಗ್ಗೆಯೂ ಚರ್ಚೆ ಮಾಡಲಿಲ್ಲ ಎಂದರು.

ಬೆಳಗಾವಿ ಮತದಾರರು ಬಿಜೆಪಿ ಕೈಬಿಡಲ್ಲ:

ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ನಮ್ಮ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಶ್ರಮಿಸುತ್ತಿದ್ದಾರೆ. ಬಾಲಚಂದ್ರ ಜಾರಕಿಹೊಳಿ‌ ಚುನಾವಣಾ ಪ್ರಚಾರಕ್ಕೆ ಬರುತ್ತಾರೋ? ಇಲ್ಲವೋ? ಎಂಬ ಅನುಮಾನಗಳಿದ್ದವು. ಇದೀಗ ಅವರೂ ಕ್ಷೇತ್ರಕ್ಕೆ ಆಗಮಿಸಿ ಪ್ರಚಾರದಲ್ಲಿ ತೊಡಗಿದ್ದು, ಅವರ ಕ್ಷೇತ್ರದಲ್ಲಿ ಹೆಚ್ಚು ಲೀಡ್ ಬರಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೆ ನಾಳೆ ಬೆಳಗಾವಿ ಆಗಮಿಸಲಿದ್ದಾರೆ. ಗೋಕಾಕ್, ಅರಬಾವಿ ಕ್ಷೇತ್ರದಲ್ಲಿ ನಡೆಯುವ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಅರಬಾವಿ ಹಾಗೂ ಗೋಕಾಕ್ ಕ್ಷೇತ್ರದಲ್ಲಿ ನಮಗೆ ಹೆಚ್ಚಿನ ‌ಲೀಡ್ ಸಿಗಲಿದೆ. ಏ.15ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಚಾರಕ್ಕೆ ಬರಲಿದ್ದು, ಮರಾಠಿ ಭಾಷಿಕರು ಹೆಚ್ಚಿರುವ ಭಾಗಗಳಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದರು ಮಾಹಿತಿ ನೀಡಿದರು.

ಕಾಂಗ್ರೆಸ್ ನಾಯಕರು ಡಜನ್‌ ಗಟ್ಟಲೆ ಬಂದ್ರೂ ಯಾವುದೇ ಪರಿಣಾಮ ಬೀರಲ್ಲ. ಎಂಇಎಸ್ ಅಭ್ಯರ್ಥಿ ಪರ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಪ್ರಚಾರದಿಂದಲೂ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಮರಾಠ ಮತದಾರರು ನಮಗೆ ಮೊದಲಿನಿಂದಲೂ ಬೆಂಬಲ ಕೊಡ್ತಾ ಬಂದಿದ್ದಾರೆ. ಹಿಂದುತ್ವ, ರಾಷ್ಟ್ರೀಯತೆ ಪರವಾಗಿ ಬೆಳಗಾವಿ ಮತದಾರರಿದ್ದಾರೆ. ಬೆಳಗಾವಿ ಮತದಾರರು ಈ ಚುನಾವಣೆಯಲ್ಲೂ ಬಿಜೆಪಿಗೆ ಮತ ಹಾಕಲಿದ್ದಾರೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನ ನಾನು ಹಾಗೂ ಕೇಂದ್ರ‌ ಸಚಿವ ಪ್ರಹ್ಲಾದ್ ಜೋಶಿ ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.