ಚಿಕ್ಕೋಡಿ/ಬೆಳಗಾವಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಂದೂರ್ ಟೇಕ್, ಇಂಗಳಿ, ಮಾಂಜರಿ ಗ್ರಾಮಗಳಲ್ಲಿ ಅಕ್ರಮ ಮಣ್ಣು ಮಾಫಿಯಾ ತಲೆ ಎತ್ತಿದ್ದು,ನದಿ ತೀರದಲ್ಲಿ ಖದೀಮರು ಬೇಕಾಬಿಟ್ಟಿ ಮಣ್ಣು ಅಗೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನು ವರದಿ ಮಾಡಲು ಹೋದ ಮಾಧ್ಯಮಗಳನ್ನು ಕಂಡು ಅಕ್ರಮ ಮಣ್ಣು ದಂಧೆಕೋರರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇನ್ನು ಮಣ್ಣು ಮಾಫಿಯಾದಲ್ಲಿ ಅಧಿಕಾರಿಗಳ ಶಾಮೀಲು ಆರೋಪವನ್ನು ಅಲ್ಲಗಳೆದ ತಹಶೀಲ್ದಾರ್ ಎಸ್. ಎಸ್. ಸಂಪಗಾಂವಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಜೊತೆ ಸ್ಥಳ ಪರಿಶೀಲನೆ ನಡೆಸಿದ್ದು, ತಪ್ಪಿತಸ್ಥರ ಹಾಗೂ ಜಮೀನಿನ ಮಾಲೀಕರ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.