ETV Bharat / state

ಅಸಮಾಧಾನದಿಂದಲೇ ನನಗೆ ಅನಾರೋಗ್ಯ ಕಾಡಿತ್ತು: ಶ್ರೀಮಂತ ಪಾಟೀಲ - ಅನರ್ಹ ಶಾಸಕ ಶ್ರೀಮಂತ ಪಾಟೀಲ್

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಸಕ್ಕರೆ ಕಾರ್ಖಾನೆಯ ವಿಶ್ರಾಂತಿ ಗೃಹದಲ್ಲಿ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದ ಅನರ್ಹ ಶಾಸಕ ಶ್ರೀಮಂತ ಪಾಟೀಲ, ನನಗೆ ಅಸಮಾಧಾನದಿಂದಲೇ ಅನಾರೋಗ್ಯ ಕಾಡಿತ್ತು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಸಕ್ಕರೆ ಕಾರ್ಖಾನೆಯ ವಿಶ್ರಾಂತಿ ಗೃಹದಲ್ಲಿ ಕಾರ್ಯಕರ್ತರ ಸಭೆ
author img

By

Published : Oct 1, 2019, 7:21 PM IST

ಚಿಕ್ಕೋಡಿ: ನನಗೆ ಅಸಮಾಧಾನದಿಂದಲೇ ಅನಾರೋಗ್ಯ ಕಾಡಿತ್ತು. ಕೇವಲ ಅಸಮಾಧಾನದಿಂದಲೇ ನಾನು ಆಸ್ಪತ್ರೆಗೆ ಹೋಗಿದ್ದು ಎಂದು ಪರೋಕ್ಷವಾಗಿ ಅನರ್ಹ ಶಾಸಕ ಶ್ರೀಮಂತ ಪಾಟೀಲ ಅಸಮಾಧಾನವಿತ್ತೆಂದು ಒಪ್ಪಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಸಕ್ಕರೆ ಕಾರ್ಖಾನೆಯ ವಿಶ್ರಾಂತಿ ಗೃಹದಲ್ಲಿ ಆಯೋಜನೆ ಮಾಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅನರ್ಹ ಶಾಸಕ ಶ್ರೀಮಂತ ಪಾಟೀಲ್, ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು. ಕುಮಾರಸ್ವಾಮಿ ಸರ್ಕಾರದಲ್ಲಿ ನಮ್ಮ ಕ್ಷೇತ್ರದ ಯಾವುದೇ ಕೆಲಸ ಕಾರ್ಯಗಳು ಆಗಲಿಲ್ಲ ಎಂದರು.

ಕೃಷ್ಣಾ‌ ನದಿ ಬತ್ತಿ ಹೋಗಿ 3 ತಿಂಗಳು ಕಳೆದರೂ ಸಹ ಇವರಿಗೆ ಮಹರಾಷ್ಟ್ರದಿಂದ ನೀರು ಬಿಡಿಸಲು ಆಗಲಿಲ್ಲ. ಆಗ ನಮ್ಮ ಕ್ಷೇತ್ರದ ಜನ ಕುಡಿಯುವ ನೀರಿಗಾಗಿ ಪರದಾಡುವಂತಾಯಿತು. ಹಾಗಾಗಿ ನಾನು ಇಂತಹ ನಿರ್ಣಯಕ್ಕೆ ಬರಬೇಕಾಯ್ತು ಎಂದರು.

ಸಕ್ಕರೆ ಕಾರ್ಖಾನೆಯ ವಿಶ್ರಾಂತಿ ಗೃಹದಲ್ಲಿ ಕಾರ್ಯಕರ್ತರ ಸಭೆ

ನಾನು ಭತ್ಯೆಗಾಗಿ ಶಾಸಕನಾಗಿಲ್ಲ. ನಮ್ಮ ಕಾಗವಾಡ ಕ್ಷೇತ್ರದ ತೊಂದರೆಗಳು ಹಾಗೂ ಏನಾದರೂ ಮಾಡಬೇಕು ಎನ್ನುವ ಸಲುವಾಗಿ ಶಾಸಕನಾಗಿದ್ದೇನೆ. ಆದರೆ, ಕುಮಾರಸ್ವಾಮಿ ಸರ್ಕಾರ ನಮಗೆ ಏನೂ ಅನುದಾನ ನೀಡದೆ ಇರುವುದರಿಂದ ನಾನು ನನ್ನ ಕ್ಷೇತ್ರದ ಜನರಿಗೆ ಏನೂ ಮಾಡಲಾಗಲಿಲ್ಲ. ಖಾಲಿ ಪುಗಸಟ್ಟೆ ಆಡಳಿತ ಮಾಡುವುದು ಬೇಡ ಎಂದು ನಾನು ಈ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಹೇಳಿದರು.

ಅನಾರೋಗ್ಯವಿತ್ತೋ, ಅಸಮಾಧಾನವಿತ್ತೋ ಎಂಬ ಪ್ರಶ್ನೆಗೆ ಅಸಮಾಧಾನದಿಂದಲೇ ಅನಾರೋಗ್ಯ ಬಂದಿತ್ತು ಎಂದು ಕಾಗವಾಡ ಅನರ್ಹ ಶಾಸಕ ಶ್ರೀಮಂತ ಪಾಟೀಲ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

Intro:ನನಗೆ ಅನಾರೋಗ್ಯವಿರಲಿಲ್ಲ ಕೇವಲ ಅಸಮಾಧಾನದಿಂದಲೇ‌ ನನಗೆ ಅನಾರೋಗ್ಯ ಕಾಡಿತ್ತು : ಶ್ರೀಮಂತ ಪಾಟೀಲBody:

ಚಿಕ್ಕೋಡಿ :

ದೋಸ್ತಿ ಸರ್ಕಾರ ಪತನದ ಟೈಂನಲ್ಲಿ ಹೈದರಾಬಾದ ನಿಂದ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಶ್ರೀಮಂತ ಪಾಟೀಲ ಅಸಮಾಧಾನದಿಂದಲೇ ನನಗೆ ಅನಾರೋಗ್ಯ ಕಾಡಿತ್ತು ಕೇವಲ ಅಸಮಾಧಾನದಿಂದಲೇ ನಾನು ಹೋಗಿದ್ದು ಎಂದು ಪರೋಕ್ಷವಾಗಿ ಒಪ್ಪಿಕೊಂಡ ಅನರ್ಹ ಶಾಸಕ ಶ್ರೀಮಂತ ಪಾಟೀಲ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಸಕ್ಕರೆ ಕಾರ್ಖಾನೆಯ ವಿಶ್ರಾಂತಿ ಗೃಹದಲ್ಲಿ ಆಯೋಜನೆ ಮಾಡಿದ್ದ ಕಾರ್ಯಕರ್ತರ ಸಭೆಯಲ್ಲಿ ಕಾಗವಾಡ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಕುಮಾರಸ್ವಾಮಿ ವಿರುದ್ದ ಹರಿಹಾಯ್ದರು ಕುಮಾರಸ್ವಾಮಿ ಸರ್ಕಾರದಲ್ಲಿ ನಮ್ಮ ಕ್ಷೇತ್ರದ ಯಾವುದೇ ಕೆಲಸ ಕಾರ್ಯಗಳು ಆಗಲಿಲ್ಲ ಎಂದರು.

ಕೃಷ್ಣಾ‌ ನದಿ ಬತ್ತಿ ಹೋಗಿ 3 ತಿಂಗಳು ಕಳೆದರೂ ಸಹ ಇವರಿಗೆ ಮಹರಾಷ್ಟ್ರದಿಂದ ನೀರು ಬಿಡಿಸಲು ಆಗಲಿಲ್ಲ, ಆಗ ನಮ್ಮ‌ ಕ್ಷೇತ್ರದ ಜನ ಕುಡಿಯುವ ನೀರಿಗಾಗಿ ಪರದಾಡುವಂತಾಯಿತು, ಹಾಗಾಗಿ ನಾನು ಇಂತಹ ನಿರ್ಣಯಕ್ಕೆ ಬರಬೇಕಾಯ್ತು ಎಂದು ಹೇಳಿದರು.

ನಾನು ಭತ್ತೆಗಾಗಿ ಶಾಸಕನಾಗಿಲ್ಲ‌ ನಮ್ಮ ಕಾಗವಾಡ ಕ್ಷೇತ್ರದ ತೊಂದರೆಗಳು ಹಾಗೂ ಏನಾದರೂ ಮಾಡಬೇಕು ಎನ್ನುವ ಸಲುವಾಗಿ ನಾನು ಶಾಕನಾ್ವನ್ನು. ಆದರೆ, ಕುಮಾರಸ್ವಾಮಿ ಸರ್ಕಾರ ನಮ್ಮಗೆ ಏನು ಅನುದಾನ ನೀಡದೆ ಇರುವುದರಿಂದ ನಾನು ನನ್ನ ಕ್ಷೇತ್ರದ ಜನರಿಗೆ ಏನು ಹೇಳಲಿ ಕಾಲಿ ಪುಗಸಟ್ಟೆ ಆಡಳಿತ ಮಾಡವುದು ಬೇಡ ಎಂದು ನಾನು ಈ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಹೇಳಿದರು.

ಅನಾರೋಗ್ಯವಿತ್ತೊ ಅಸಮಾಧಾನವಿತ್ತೊ ಎಂಬ ಪ್ರಶ್ನೆಗೆ ಅಸಮಾಧಾನದಿಂದಲೇ ಅನಾರೋಗ್ಯ ಬಂದಿತ್ತು ಎಂದ ಕಾಗವಾಡ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.