ETV Bharat / state

ಮಾಸ್ಕ್ ಧರಿಸುವವರನ್ನು ನೋಡಿದರೆ ನನಗೆ ರಾಮಾಯಣ ನೆನಪಾಗುತ್ತೆ: ಸಂಸದ ಹೆಗಡೆ ವ್ಯಂಗ್ಯ

ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್​ ಕುಮಾರ್​​ ಹೆಗಡೆ, ಕೊರೊನಾಗೆ ಹೆದರುವ ಅವಶ್ಯಕತೆ ಇಲ್ಲಾ ಎಂದು ಹೇಳಿಕೆ ನೀಡಿದ್ದು, ಮಾಸ್ಕ್​ ಧರಿಸುವವರಿಗೆ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ.

author img

By

Published : Aug 19, 2020, 6:50 PM IST

Ananth Kumar Hegde
ಸಂಸದ ಅನಂತ್​ ಕುಮಾರ್​ ಹೆಗಡೆ ಹೇಳಿಕೆ

ಬೆಳಗಾವಿ: ತಪ್ಪು ತಿಳಿಯಬೇಡಿ, ಎಲ್ಲರನ್ನು ನೋಡಿದಾಗ ನನಗೆ ರಾಮಾಯಣದ ನೆನಪಾಗುತ್ತಿದೆ ಎಂದು ಹೇಳುವ ಮೂಲಕ ಸಂಸದ ಅನಂತಕುಮಾರ್ ಹೆಗಡೆ ಕಾರ್ಯಕ್ರಮವೊಂದರಲ್ಲಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಸಂಸದ ಅನಂತ್​ ಕುಮಾರ್​ ಹೆಗಡೆ ಹೇಳಿಕೆ

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಗಡೆ, ಕೊರೊನಾ ವಿಚಾರದಲ್ಲಿ ನಮ್ಮನ್ನು ಸುಮ್ಮನೆ ಹೆದರಿಸುತಿದ್ದಾರೆ. ಈ ಕೊರೊನಾ ಅಂಥಹ ದೊಡ್ಡ ವೈರಾಣು ಏನು ಅಲ್ಲ. ತಮಾಷೆಗೆ ಹೇಳುತ್ತಿರುವೆ, ಎಲ್ಲರನ್ನು ನೋಡಿದಾಗ ನನಗೆ ರಾಮಾಯಣ ನೆನಪಾಗುತ್ತೆ ಎನ್ನುವ ಮೂಲಕ ಮಾಸ್ಕ್​​ ಹಾಕಿಕೊಂಡವರಿಗೆ ಪರೋಕ್ಷವಾಗಿ ಟಾಂಗ್​​ ನೀಡಿದ್ದಾರೆ.

ಕೊರೊನಾಗೆ ಹೆಚ್ಚೇನು ಹೆದರುವ ಅವಶ್ಯಕತೆ ಇಲ್ಲ, ಅದರ ಜೊತೆಯೇ ನಾವೆಲ್ಲ ಜೀವನ ಮಾಡಬೇಕಿದೆ. ಕೊರೊನಾ ಭ್ರಮೆಯಲ್ಲಿ ಬದುಕುವುದು ಬೇಡ. ನೆಗಡಿ, ಕೆಮ್ಮು ಜ್ವರದಂತೆ ಕೊರೊನಾ ಕೂಡ ಒಂದು. ಕೊರೊನಾಗೆ ಹೆದರಿದ್ರೆ, ದೇಶ ಆರ್ಥಿಕವಾಗಿ ದಿವಾಳಿ ಆಗುತ್ತದೆ ಎಂದು ಹೆಗಡೆ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.