ಬೆಳಗಾವಿ : ಧಾರವಾಡ ಮೂಲದ ಜಿಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ: ಹಿಂಡಲಗಾ ಜೈಲಿಗೆ ವಿನಯ್ ಕುಲಕರ್ಣಿ ಶಿಫ್ಟ್: ಕ್ವಾರಂಟೈನ್ ಸೆಲ್ನಲ್ಲಿ ಮಾಜಿ ಸಚಿವ
ವಿನಯ್ ಕುಲಕರ್ಣಿ ವಿಚಾರಣಾಧೀನ ಕೈದಿ ನಂಬರ್ 16635 ನೀಡಲಾಗಿದೆ ಎಂದು ಜೈಲಿನ ಸಿಬ್ಬಂದಿ ಈಟಿವಿ ಭಾರತಕ್ಕೆ ಸ್ಪಷ್ಟಪಡಿಸಿದ್ದಾರೆ. ಧಾರವಾಡದಲ್ಲೇ ಊಟ ಮುಗಿಸಿಕೊಂಡು ಬಂದಿದ್ದು, ಜೈಲಿನ ಕ್ವಾರಂಟೈನ್ ಸೆಲ್ನಲ್ಲಿ ನಿದ್ರೆಗೆ ಜಾರಿದರು.
ದಂಗಾದ ಕುಲಕರ್ಣಿ:
ಹಿಂಡಲಗಾ ಜೈಲು ಒಳಪ್ರವೇಶಿಸಿದ ವಿನಯ್ ಕುಲಕರ್ಣಿ ದಂಗಾಗಿ ಮುಖ್ಯದ್ವಾರದ ಕಡೆಗೆ ತಿರುಗಿ ನೋಡಿದರು. ಮಾಹಿತಿ ದಾಖಲಿಸುವವರೆಗೂ ಅವರು ಜೈಲು ಹೊರಾಂಗಣದ ಕುರ್ಚಿ ಮೇಲೆ ಕುಳಿತಿದ್ದರು. ದಿನವಿಡಿ ಸಿಬಿಐ ವಶದಲ್ಲಿದ್ದ ಕಾರಣ ವಿನಯ್ ಕುಲಕರ್ಣಿ ಸುಸ್ತಾಗಿದ್ದರು.
ಬ್ಲಡ್ ಪ್ರೆಶರ್ ಮಾತ್ರೆ ತಂದುಕೊಟ್ಟ ಪ್ರಶಾಂತ ಕಕ್ಕೇರಿ:
ಬಿಪಿಯಿಂದ ಬಳಲುತ್ತಿದ್ದ ವಿನಯ್ ಕುಲಕರ್ಣಿ ಅವರಿಗೆ ಅವರ ಆಪ್ತ ಪ್ರಶಾಂತ ಕಕ್ಕೇರಿ ಬಿಪಿ ಮಾತ್ರೆ ಕೊಡಲು ಹಿಂಡಲಗಾ ಜೈಲಿಗೆ ಆಗಮಿಸಿದ್ದರು. ವಿನಯ್ ಕುಲಕರ್ಣಿ ಜೈಲುಪಾಲಾದ ಬಳಿಕ ಮಾತ್ರೆ ಕೊಡಲು ಜೈಲಿನೊಳಗೆ ಪ್ರವೇಶಿಸಲು ಪ್ರಶಾಂತ್ ಯತ್ನಿಸಿದರು. ಆಗ ಜೈಲು ಸಿಬ್ಬಂದಿ ಹೊರಗಿನವರಿಗೆ ಅವಕಾಶ ಇಲ್ಲ ಎಂದರು.
ಜೈಲಿನೊಳಗೆ ಹೋಗುವ ವೇಳೆ ವಿನಯ್ ಕುಲಕರ್ಣಿ ಮಾತ್ರೆ ಮರೆತು ಹೋಗಿದ್ದರು. ಹೀಗಾಗಿ ಪ್ರಶಾಂತ್ ಹಿಂಡಲಗಾ ಜೈಲು ಸಿಬ್ಬಂದಿ ಮೂಲಕ ಮಾತ್ರೆ ಕಳಿಸಿದರು.