ETV Bharat / state

10 ಎಕರೆ ಗೋವಿನ ಜೋಳ‌ ಮಳೆಗೆ‌ ಆಹುತಿ: ಸಂಕಷ್ಟದಲ್ಲಿ ರೈತ

ಕುಂಭದ್ರೋಣ ಮಳೆಯ ಅಬ್ಬರದಿಂದಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದು, ಹಲವೆಡೆ ರೈತರು ಬೆಳೆದಿರುವ ಬೆಳೆಗಳಿಗೆ ಹಾನಿಯಾಗಿದೆ. ಇದೀಗ ಚಿಕ್ಕೋಡಿಯ ರೈತ ಬೆಳದಿದ್ದ ಗೋವಿನ ಜೋಳ ಮಳೆಯಿಂದಾಗಿ ಹಾನಿಯಾಗಿದ್ದು, ಬೆವರು ಸುರಿಸಿ ಬೆಳೆದಿದ್ದ ಜೋಳ ನೀರು ಪಾಲಾಗಿದೆ.

Heavy rain hits lose of Corn in Chikkodi
10 ಎಕರೆ ಗೋವಿನ ಜೋಳ‌ ಮಳೆಗೆ‌ ಆಹುತಿ: ಸಂಕಷ್ಟದಲ್ಲಿ ರೈತ
author img

By

Published : Oct 20, 2020, 5:31 PM IST

ಚಿಕ್ಕೋಡಿ (ಬೆಳಗಾವಿ):‌ ಹತ್ತು ಎಕರೆ ಜಮೀನಿನಲ್ಲಿ‌ ಗೋವಿನ ಜೋಳ‌ ಬಿತ್ತನೆ ಮಾಡಿ ಅದರಲ್ಲಿ ನಾಲ್ಕೈದು ಎಕರೆ ಕಟಾವು ಮಾಡಿ‌ ರಾಶಿಗೆ ಸಿದ್ಧತೆ ಮಾಡಿಕೊಂಡಿದ್ದ ರೈತನ ಬೆಳೆ ಮಳೆಯಿಂದಾಗಿ ಸಂಫೂರ್ಣ ನಾಶವಾಗಿದೆ.

10 ಎಕರೆ ಗೋವಿನ ಜೋಳ‌ ಮಳೆಗೆ‌ ಆಹುತಿ: ಸಂಕಷ್ಟದಲ್ಲಿ ರೈತ

ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ಲಗಮ್ಮಣ್ಣಾ ಒಡಗೋಲೆ ಎಂಬ ರೈತ 10 ಎಕರೆ ಭೂಮಿಯಲ್ಲಿ ಸುಮಾರು ನಾಲ್ಜೈದು ಎಕರೆ ಗೋವಿನ ಜೋಳ ಕಟಾವು ಮಾಡಿ ಇನ್ನೇನು ಎರಡು ದಿನ ತೆನೆಗಳನ್ನು ಒಣಗಿಸಿ ರಾಶಿ ಮಾಡಬೇಕು ಎಂದುಕೊಂಡಿದ್ದರು. ಆದರೆ ಕುಂಭದ್ರೋಣ ಮಳೆಯಿಂದ ಜೋಳಗಳಲ್ಲಿ ಮೊಳಕೆಯೊಡೆದಿದ್ದು, ರೈತ ಸುಮಾರು 2 ಲಕ್ಷ ನಷ್ಟ ಅನುಭವಿಸುವಂತಾಗಿದೆ.

ಬೆಳೆಯಲ್ಲಿ ಮೊಳಗೆ ಒಡೆದು ಸಸಿ ಹೊರಬಂದಿದ್ದು, ಮಾರುಕಟ್ಟೆಯಲ್ಲೂ ಮಾರಲಾಗದೆ, ಹಸುಗಳಿಗೂ ನೀಡಲಾಗದೆ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.