ಬೆಳಗಾವಿ: ಜಿಲ್ಲೆಯ ಹಲವೆಡೆ ಕಳೆದ ರಾತ್ರಿಯಿಂದಲೂ ಸುರಿಯುತ್ತಿರುವ ತುಂತುರು ಮಳೆಯಿಂದಾಗಿ ಜನರ ಜೀವನ ಅಸ್ತವ್ಯಸ್ಥಗೊಂಡಿದ್ದು, ವ್ಯಾಪಾರ ವಹಿವಾಟು ಕುಂಠಿತಗೊಂಡಿದೆ.
ಬೆಳಗಾವಿ, ಬೈಲಹೊಂಗಲ, ಸವದತ್ತಿ ಹಾಗೂ ಖಾನಾಪೂರ ತಾಲೂಕಿನಲ್ಲಿ ಕಳೆದ 24 ಗಂಟೆಗಳಿಂದ ಧಾರಾಕಾರ ಮಳೆ ಹಾಗೂ ಕೆಲವು ತಾಲೂಕುಗಳಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ. ನಗರದ ಕೆಲವೆಡೆ ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣಾವಾಗದ ಕಾರಣ, ರಸ್ತೆಗಳಲ್ಲಿ ವಾಹನ ಸವಾರರು ಹರ ಸಾಹಸಪಡುವಂತಾಗಿದೆ.
ಹೀಗಾಗಿ, ಮಲಪ್ರಭಾ ನದಿಯ ಒಳಹರಿವು ಮತ್ತಷ್ಟು ಹೆಚ್ಚಾಗುವ ಭೀತಿ ಈ ಭಾಗದ ಮತ್ತು ಅದರ ತಟದಲ್ಲಿರುವ ಜನರಿಗಿದೆ. ಕೊರೊನಾ ವೈರಸ್ ಹೆಚ್ಚಳದ ನಡುವೆ ಶೀತ ಗಾಳಿ, ಜಿಟಿಜಿಟಿ ಮಳೆಯ ವಾತಾವರಣದಿಂದಾಗಿ ಜಿಲ್ಲೆಯ ಜನರು ಮತ್ತಷ್ಟು ಆಂತಕ್ಕಕ್ಕೀಡಾಗಿದ್ದಾರೆ.