ಚಿಕ್ಕೋಡಿ (ಬೆಳಗಾವಿ): 1927ರಲ್ಲಿ ಅಂಬೇಡ್ಕರ್ ಚಿಕ್ಕೋಡಿಗೆ ಆಗಮಿಸಿದಾಗ ಉಟೋಪಚಾರ ಮಾಡಿದ ಅಜ್ಜಿ ವಯೋಸಹಜ ಕಾಯಿಲೆ ಇಂದ ಸ್ವಗ್ರಾಮ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಜಗಣಭೀ ಪಟೇಲ್(108) ಕೊನೆಯುಸಿರೆಳೆದಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಮಹಾರಾಷ್ಟ್ರದ ಔರವಾಡ ಗ್ರಾಮದ ದೇವಸ್ಥಾನದ ಜಮೀನು ವಿವಾದ ಕೈಗೆತ್ತಿಕೊಂಡಿದ್ದಾಗ, 1927ರಲ್ಲಿ ಅವರು ಚಿಕ್ಕೋಡಿಗೆ ಬಂದಿದ್ದರು. ಆಗ ಜಗಣಭೀ ಅವರು ಅಂಬೇಡ್ಕರ್ ಅವರಿಗೆ ಊಟೋಪಚಾರದ ವ್ಯವಸ್ಥೆ ಮಾಡಿದ್ದರು.

ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ 9 ದಿನ ತಂಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ಗೆ ಊಟೋಪಚಾರದ ವ್ಯವಸ್ಥೆ ಮಾಡಿದ್ದ ಜಗಣಭೀ ಪಟೇಲ್ ಅವರನ್ನು ಅಂಬೇಡ್ಕರ್ ಪ್ರೀತಿಯಿಂದ ಮುನ್ನಿ ಎಂದು ಕರೆಯುತ್ತಿದ್ದರು.