ETV Bharat / state

ಸುವರ್ಣಸೌಧಕ್ಕೆ ಕಚೇರಿ ಸ್ಥಳಾಂತರ: ಗುರುವಿನ ಕನಸು ನನಸು ಮಾಡುವರೇ ಬೊಮ್ಮಾಯಿ..!

ಬೆಳಗಾವಿಯ ಸುವರ್ಣಸೌಧ ಸರ್ಕಾರದ ಉದಾಸೀನತೆಯಿಂದ ಇದೀಗ ಭೂತ ಬಂಗಲೆಯಾಗಿ ಮಾರ್ಪಟ್ಟಿದೆ. ಇದೇ ಶನಿವಾರ ಬೆಳಗಾವಿ ಪ್ರವಾಸ ಕೈಗೊಂಡಿರುವ ಸಿಎಂ ಬೊಮ್ಮಾಯಿ ಕಚೇರಿಗಳ ಸ್ಥಳಾಂತರ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.

govt office relocation to belagavi golden suda
ಸುವರ್ಣಸೌಧ
author img

By

Published : Aug 19, 2021, 4:46 PM IST

Updated : Aug 19, 2021, 5:09 PM IST

ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಎಂದೇ ಬಿಂಬಿಸಲ್ಪಟ್ಟಿದ್ದ ಬೆಳಗಾವಿಯ ಸುವರ್ಣಸೌಧ ಸರ್ಕಾರದ ಉದಾಸೀನತೆಯಿಂದ ಇದೀಗ ಭೂತ ಬಂಗಲೆಯಾಗಿ ಮಾರ್ಪಟ್ಟಿದೆ. ಕಚೇರಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ಹಲವು ಪ್ರತಿಭಟನೆಗಳು ನಡೆದರೂ ಸರ್ಕಾರ ಮಾತ್ರ ಈ ಭವ್ಯ ಬಂಗಲೆಯ ಸದುಪಯೋಗಕ್ಕೆ ಕೈ ಹಾಕುತ್ತಿಲ್ಲ.

ರಾಜ್ಯ ಮಟ್ಟದ ಕಚೇರಿಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡಬೇಕು ಎಂಬ ಕನಸು ಕಂಡಿದ್ದ ಗುರು ಬಿ.ಎಸ್‌. ಯಡಿಯೂರಪ್ಪ ಕನಸನ್ನು ಅವರ ಶಿಷ್ಯ ಸಿಎಂ ಬಸವರಾಜ್ ಬೊಮ್ಮಾಯಿ ನನಸು ಮಾಡುವರೇ ಎಂಬುದು ಸದ್ಯದ ಕುತೂಹಲ.

ಇದೇ ಶನಿವಾರ ಬೆಳಗಾವಿ ಪ್ರವಾಸ ಕೈಗೊಂಡಿರುವ ಸಿಎಂ ಬೊಮ್ಮಾಯಿ ಕಚೇರಿಗಳ ಸ್ಥಳಾಂತರ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಈ ಭಾಗದ ಜನರಿದ್ದಾರೆ.

ದಿಕ್ಸೂಚಿ ಆಗದ ಭವ್ಯ ಬಂಗಲೆ:

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಹಗಲು ಗನಸು ಕಾಣುತ್ತ ಗಡಿಯಲ್ಲಿ ಪ್ರತಿಭಟನೆ ನಡೆಸುವ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರ ಬಾಯಿ ಮುಚ್ಚಿಸಲೆಂದೇ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಅಭಿವೃದ್ಧಿ ವಿಚಾರದಲ್ಲಿ ಆಗಿರುವ ತಾರತಮ್ಯ ನೀಗಿಸುವ ಸದುದ್ದೇಶದಿಂದ ಹಿಂದಿನ ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿತು.
ಸುವರ್ಣ ಸೌಧ ನಿರ್ಮಿಸಿ ಪ್ರತಿವರ್ಷ ಅಧಿವೇಶನ ಜೊತೆಗೆ ಉಕ ಭಾಗದ ಅಭಿವೃದ್ಧಿಗೆ ಪೂರಕವಾದ ಕಚೇರಿಗಳ ಸ್ಥಳಾಂತರದ ಉದ್ದೇಶವನ್ನು ಬಿಎಸ್‌ವೈ ಹೊಂದಿದ್ದರು.

ಕೋವಿಡ್​ ಹಿನ್ನೆಲೆಯಲ್ಲಿ ನಡೆಯದ ಅಧಿವೇಶನ:

ಈ ಸೌಧ ನಿರ್ಮಾಣದ ಬಳಿಕ ರಾಜ್ಯದಲ್ಲಿ ಸರ್ಕಾರವೂ ಬದಲಾಯಿತು. ನಂತರ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸುವರ್ಣ ಸೌಧದಲ್ಲಿ ಪ್ರತಿವರ್ಷ ಅಧಿವೇಶನ ನಡೆಸಿತಾದರೂ ಕಚೇರಿಗಳ ಸ್ಥಳಾಂತರಕ್ಕೆ ಆದ್ಯತೆ ನೀಡಲಿಲ್ಲ.

ಅಲ್ಲದೇ ಹೆಚ್​ಡಿಕೆ ನೇತೃತ್ವದ ಮೈತ್ರಿ ಸರ್ಕಾರ ಕೂಡ ಒಂದು ಬಾರಿ ಅಧಿವೇಶನ ನಡೆಸಿತು. ನಂತರ ಬಂದ ಬಿಎಸ್‌ವೈ ನೇತೃತ್ವದ ಸರ್ಕಾರ ಪ್ರವಾಹದ ಹಾಗೂ ಎರಡು ಸಲ ಕೋವಿಡ್ ನೆಪ ಹೇಳಿ ಇಲ್ಲಿ ಅಧಿವೇಶನ ನಡೆಸಲಿಲ್ಲ.

ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕರ ಆಕ್ರೋಶ:

ಈ ಸಲದ ಮುಂಗಾರು ಅಧಿವೇಶನವೂ ಬೆಂಗಳೂರಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದ್ದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸುವರ್ಣಸೌಧ ನಿರ್ಮಾತೃ ಬಿಎಸ್‌ವೈ ನಾಲ್ಕು ಸಲ ಸಿಎಂ ಆದರೂ ಕಚೇರಿಗಳ ಸ್ಥಳಾಂತರ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ.

ಸುವರ್ಣಸೌಧಕ್ಕೆ ಕಚೇರಿ ಸ್ಥಳಾಂತರ

ಈಗ ಬಿಎಸ್‌ವೈ ಅಧಿಕಾರದಿಂದ ಕೆಳಗಿಳಿದು ಅವರ ಶಿಷ್ಯ ಬಸವರಾಜ್ ಬೊಮ್ಮಾಯಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಗುರುವಿನ ಕನಸನ್ನು ಶಿಷ್ಯನಾದರೂ ಈಡೇರಿಸುತ್ತಾರಾ ಎಂಬುವುದೇ ಸದ್ಯದ ಕುತೂಹಲ.

ಬೊಮ್ಮಾಯಿ ಮೇಲೆ ಬೆಟ್ಟದಷ್ಟು ನಿರೀಕ್ಷೆ:

ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉತ್ತರ ಕರ್ನಾಟಕ ಮೂಲದವರು. ಈ ಭಾಗದ ಪ್ರಬಲ ಲಿಂಗಾಯತ ಹಾಗೂ ಪ್ರಭಾವಿ ನಾಯಕರೂ ಹೌದು. 2008 ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿಗೆ ಬೆಳಗಾವಿ ಉಸ್ತುವಾರಿ ಹೊಣೆಯನ್ನು ವಹಿಸಲಾಗಿತ್ತು.

ಒಂದೂವರೆ ವರ್ಷಗಳ ಕಾಲ ಬೊಮ್ಮಾಯಿ ಬೆಳಗಾವಿ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಮಹದಾಯಿ ಯೋಜನೆ ಜಾರಿಗಾಗಿ ನಡೆದ ಪಾದಯಾತ್ರೆಯ ನೇತೃತ್ವವನ್ನು ಬೊಮ್ಮಾಯಿ ವಹಿಸಿದ್ದರು.

ಹೀಗಾಗಿ ಬೆಳಗಾವಿ ಬಗ್ಗೆಯೂ ಬೊಮ್ಮಾಯಿಗೆ ವಿಶೇಷ ಕಾಳಜಿ ಇದೆ. ಸುವರ್ಣಸೌಧಕ್ಕೆ ಕಚೇರಿ ಸ್ಥಳಾಂತರ ಸೇರಿದಂತೆ ಈ ಭಾಗದ ಜನರ ಹಲವು ಬೇಡಿಕೆಗಳ ಸಿಎಂ ಬೊಮ್ಮಾಯಿ ಈಡೇರಿಸುತ್ತಾರೆ ಎಂಬ ಬೆಟ್ಟದಷ್ಟು ನಿರೀಕ್ಷೆಗಳನ್ನು ಈ ಭಾಗದ ಜನರು ಹೊಂದಿದ್ದಾರೆ.

ಸಿಎಂ ಆದ ತಕ್ಷಣವೇ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ನೇತೃತ್ವದ ನಿಯೋಗ ಬೊಮ್ಮಾಯಿ ಅವರನ್ನು ಭೇಟಿ ಮಾಡಿತ್ತು. ಸುವರ್ಣಸೌಧಕ್ಕೆ ಹೊಸ ಸ್ಪರ್ಶ ಕೊಡುವ ಇಂಗಿತವನ್ನು ಸಿಎಂ ಬೊಮ್ಮಾಯಿ ನಿಯೋಗದ ಮುಂದೆ ವ್ಯಕ್ತಪಡಿಸಿದ್ದರು. ಇದೇ ಶನಿವಾರ ಸಿಎಂ ಬೆಳಗಾವಿಗೆ ಬಂದು ಸುವರ್ಣ ಸೌಧದಲ್ಲೇ ಸಭೆ ನಡೆಸುತ್ತಿದ್ದಾರೆ. ಕಚೇರಿಗಳ ಸ್ಥಳಾಂತರ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Last Updated : Aug 19, 2021, 5:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.