ETV Bharat / state

ದೇಶದಲ್ಲಿ ಉಗ್ರವಾದ ಹುಟ್ಟು ಹಾಕಿದ್ದೇ ಕಾಂಗ್ರೆಸ್ : ಸಚಿವ ಗೋವಿಂದ ಕಾರಜೋಳ ಆರೋಪ - ಗೋವಿಂದ ಕಾರಜೋಳ ಆರೋಪ

ಉಗ್ರರು ಹುಟ್ಟಿಕೊಂಡಿದ್ದೇ ಕಾಂಗ್ರೆಸ್‌ನವರ ಆಡಳಿತದಲ್ಲಿ. ಈಗ ಬೇರೆ ಬೇರೆ ಪಕ್ಷಗಳು ಆಡಳಿತಕ್ಕೆ ಬಂದ ಮೇಲೆ ಉಗ್ರರು ಕಡಿಮೆ ಆಗುತ್ತಿದ್ದಾರೆ. ಕಾಂಗ್ರೆಸ್​ನವರು ಸುಳ್ಳು ಹೇಳುವುದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ಟೀಕಿಸಿದರು..

ಗೋವಿಂದ ಕಾರಜೋಳ
ಗೋವಿಂದ ಕಾರಜೋಳ
author img

By

Published : Mar 12, 2022, 2:05 PM IST

ಬೆಳಗಾವಿ : ಭಾರತದಲ್ಲಿ ಉಗ್ರವಾದ ಹುಟ್ಟು ಹಾಕಿದವರೇ ಕಾಂಗ್ರೆಸ್‌‌ನವರು ಎಂದು ಸಚಿವ ಗೋವಿಂದ ಕಾರಜೋಳ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರು ಹುಟ್ಟಿಕೊಂಡಿದ್ದೇ ಕಾಂಗ್ರೆಸ್‌ನವರ ಆಡಳಿತದಲ್ಲಿ. ಈಗ ಬೇರೆ ಬೇರೆ ಪಕ್ಷಗಳು ಆಡಳಿತಕ್ಕೆ ಬಂದ ಮೇಲೆ ಉಗ್ರರು ಕಡಿಮೆ ಆಗುತ್ತಿದ್ದಾರೆ. ಕಾಂಗ್ರೆಸ್​ನವರು ಸುಳ್ಳು ಹೇಳುವುದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ.

ಸುಸಂಸ್ಕೃತ ಭಾಷೆಯಲ್ಲಿ ಮಾತನಾಡುವುದನ್ನು ಅವರು ಕಲಿತಿಲ್ಲ. ಅವರ ಅಸಂಸ್ಕೃತ ಹೇಳಿಕೆಗಳು ಮೀಡಿಯಾದಲ್ಲಿ ಇಡೀ ದಿನ ಸುದ್ದಿಯಾಗುತ್ತವೆ. ಕಾಂಗ್ರೆಸ್​ನ ಬಂಡತನಕ್ಕೆ ಇವತ್ತು ಜನ ಪಾಠ ಕಲಿಸಿದ್ದಾರೆ ಎಂದು ಗೋವಿಂದ ಕಾರಜೋಳ ಕಿಡಿಕಾರಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಗೋವಿಂದ ಕಾರಜೋಳ..

ಕಾಂಗ್ರೆಸ್ ಸ್ಕ್ರ್ಯಾಪ್ ಆಗಿದೆ : ಫಲಿತಾಂಶ ಪ್ರಕಟಗೊಳ್ಳುವ ಮುನ್ನ ಉತ್ತರಾಖಂಡ, ಗೋವಾಗೆ ಕಾಂಗ್ರೆಸ್ ನಾಯಕರು ಸ್ಪೆಷಲ್ ಫ್ಲೈಟ್ ತೆಗೆದುಕೊಂಡು ಹೋಗಿ ಕುಳಿತಿದ್ದರು. ಈಗ ಮೂರನೇ ಬಾರಿ ಗೋವಾದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುತ್ತಿದೆ. ಜನ ನಮ್ಮನ್ನ ಒಂದು ಸಾರಿ ಆಡಳಿತಕ್ಕೆ ತಂದ ಮೇಲೆ ಎರಡನೇ ಬಾರಿ ಅಧಿಕಾರಕ್ಕೆ ತರಲು ಯೋಚನೆ ಮಾಡ್ತಾರೆ.

ಒಂದು ಸಾರಿ‌ ಆಡಳಿತ ಬಂದ ಪಕ್ಷದ ಕಾರ್ಯಕ್ರಮ, ಅಭಿವೃದ್ಧಿ ಕಾರ್ಯ ಹಾಗೂ ಸಾಮಾಜಿಕ ನ್ಯಾಯದಡಿ ಮಾಡಿದ ಕೆಲಸ ಪರಿಶೀಲನೆ ಮಾಡಿ ಮತ ಹಾಕುತ್ತಾರೆ. ನರೇಂದ್ರ ಮೋದಿ ಮಾಡಿದ ಕಾರ್ಯಕ್ಕೆ ಜನ ಅನುಮೋದನೆ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಯಡಿಯೂರಪ್ಪನವರು 130 ರಿಂದ 140 ಸೀಟು ಬರುತ್ತದೆ ಎಂದು ಹೇಳಿದ್ದಾರೆ.

ಆದರೆ, ಕರ್ನಾಟಕದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ. ಕಾಂಗ್ರೆಸ್ ಮುಳುಗುವ ಹಡಗು, ಸ್ಕ್ರ್ಯಾಪ್ ಆಗಿದೆ ಎಂದು ಲೇವಡಿ ಮಾಡಿದ ಅವರು, ರಾಜ್ಯದಲ್ಲಿ ಹೊಸ ನಾಯಕತ್ವದ ಅಜೆಂಡಾ ನಮ್ಮ ಮುಂದೆ ಇಲ್ಲ. ಹೈಕಮಾಂಡ್ ಮುಂದೆಯೂ ಇಲ್ಲ ಎಂದರು.

ಸಚ್ಚಾರಿತ್ರ ಆಡಳಿತಕ್ಕೆ ಸಿಕ್ಕ ಜಯ : ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಇದು ಸಚ್ಚಾರಿತ್ರ ಆಡಳಿತ, ಸಾಮಾಜಿಕ ನ್ಯಾಯಕ್ಕೆ ಸಿಕ್ಕಂತ ಜಯ. ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತ ಯುವಕರಿದ್ದಾರೆ. ಯುವಕರು ಜಾತಿ ವ್ಯವಸ್ಥೆಗೆ ಅಂಟಿಕೊಂಡಿಲ್ಲ. ದೇಶದ ಘನತೆ ಗೌರವ ಎತ್ತಿ ಹಿಡಿಯುವಂತಹ ಪಕ್ಷಕ್ಕೆ ಅವರು ಬೆಂಬಲಿಸುತ್ತಿದ್ದಾರೆ.

ಅವರಿಗೆ ಜಾತಿ-ಧರ್ಮ ಮುಖ್ಯವಲ್ಲ. ಯುವಕರು ದೇಶದ ಏಕತೆ, ಐಕ್ಯತೆ ಸಮಗ್ರ ಅಭಿವೃದ್ಧಿ ಬಯಸಿದ್ದಾರೆ. ಇಡೀ ದೇಶಕ್ಕೆ ಈ ಚುನಾವಣಾ ಫಲಿತಾಂಶ ದಿಕ್ಸೂಚಿ. ಮುಂದಿನ‌ ದಿನಮಾನಗಳಲ್ಲಿ ಕಾಂಗ್ರೆಸ್ ಇತಿಹಾಸದ ಪುಟ ಸೇರುತ್ತದೆ ಎಂದರು.

ಸಿದ್ದರಾಮಯ್ಯ ಚುನಾವಣೆ ಬರೋವರೆಗೂ ಕಾಯಲಿ. ಕಾಂಗ್ರೆಸ್ 60 ವರ್ಷ ಜಾತಿ-ಧರ್ಮದಲ್ಲಿ ಆಡಳಿತ ಮಾಡಿ ಸ್ಕ್ಯಾಪ್ ಆಗಿ ಮೂಲೆ ಗುಂಪಾಗುತ್ತಿದೆ. ಕಾಂಗ್ರೆಸ್‌ನವರಿಗೆ ಜಾತಿ ಭಾವನೆ, ಮತೀಯ ಭಾವನೆ, ಧರ್ಮದ ಭಾವನೆ ಎಬ್ಬಿಸುವುದೇ ಕೆಲಸವಾಗಿದೆ. ಬಡವರನ್ನು ಯಾವತ್ತೂ ಅವರು ನೋಡಲೇ ಇಲ್ಲ. ಬಡವರು ಬಡವರಾಗಿಯೇ ಇರಬೇಕು ಎಂಬುದು ಕಾಂಗ್ರೆಸ್ ‌ಮನಸ್ಥಿತಿ. ಅಲ್ಪಸಂಖ್ಯಾತರು ಅವಿದ್ಯಾವಂತರಾಗಿಯೇ ಇರಬೇಕು. 403 ಸೀಟ್ ಇರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ 2 ಸೀಟು ಬರುತ್ತೆ ಅಂದ್ರೆ ನಾಚಿಕೆ ಬರಬೇಕು ಎಂದು ಲೇವಡಿ ಮಾಡಿದರು.

ಇದನ್ನೂ ಓದಿ; ಗುಜರಾತ್‌ನ ಗಾಂಧಿನಗರದಲ್ಲಿ ಪ್ರಧಾನಿ ಮೋದಿ ಬೃಹತ್​ ರೋಡ್‌ಶೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.