ETV Bharat / state

ಮಹದಾಯಿ ನದಿ ನೀರು ಹಂಚಿಕೆ.. ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ - ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ಸಿಎಂ ಸಾವಂತ್​

ಮಹಾದಾಯಿ ವಿವಾದ ಈಗಾಗಲೇ ತಾರ್ಕಿಕ ಅಂತ್ಯ ಕಂಡಿದೆ. ಪರಿಸರ ಇಲಾಖೆಯಿಂದ ಯೋಜನೆಗೆ ಅನುಮತಿ ಬೇಕಿಲ್ಲ..

FIle Photo
ಸಂಗ್ರಹ ಚಿತ್ರ
author img

By

Published : Oct 6, 2020, 4:02 PM IST

ಬೆಳಗಾವಿ : ಮಹದಾಯಿ ನದಿ ನೀರು ಹಂಚಿಕೆ ವಿವಾದ ಸಂಬಂಧ ನ್ಯಾಯಾಧೀಕರಣ ಅಂತಿಮ ತೀರ್ಪು ನೀಡಿದ್ರೂ ಸಹ ಗೋವಾ ಸರ್ಕಾರ ಮತ್ತೆ ತಗಾದೆ ತೆಗೆದಿದೆ.

  • Contempt Petition has been filed in the Hon'ble Supreme Court today against Karnataka for illegal diversion of #Madhei water. We will continue to fight for our right.

    — Dr. Pramod Sawant (@DrPramodPSawant) October 6, 2020 " class="align-text-top noRightClick twitterSection" data=" ">

ಕರ್ನಾಟಕ ಸರ್ಕಾರ ಕಾನೂನು ಬಾಹಿರವಾಗಿ ಮಹದಾಯಿ ನೀರು‌ ತಿರುವು ಮಾಡುತ್ತಿದೆ ಎಂದು ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್ ಆರೋಪಿಸಿದ್ದು, ಕರ್ನಾಟಕ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಗತಿಯನ್ನು ಟ್ವೀಟ್ ಮಾಡುವ ಮೂಲಕ ತಿಳಿಸಿದ ಸಾವಂತ್​​, ಮಹದಾಯಿಗಾಗಿ ನಮ್ಮ ಹೋರಾಟ ಮುಂದುವರೆಯುತ್ತೆ ಎಂದು ಅದರಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಬಂಧ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ‌ಸಚಿವ ಪ್ರಹ್ಲಾದ್ ಜೋಶಿ, ಮಹಾದಾಯಿ ವಿವಾದ ಈಗಾಗಲೇ ತಾರ್ಕಿಕ ಅಂತ್ಯ ಕಂಡಿದೆ. ಪರಿಸರ ಇಲಾಖೆಯಿಂದ ಯೋಜನೆಗೆ ಅನುಮತಿ ಬೇಕಿಲ್ಲ. ಕೇಂದ್ರ ಸರ್ಕಾರದ ಮುಂದೆಯೂ ಗಮನಕ್ಕೆ ತಂದಿದ್ದೇವೆ. ಸ್ಥಳೀಯರ ಭಾವನೆಗಳನ್ನು ಪ್ರಮುಖವಾಗಿಸಿಕೊಂಡು ಗೋವಾ ಸಿಎಂ ನ್ಯಾಯಾಂಗ ನಿಂದನೆ ಕೇಸ್ ಹಾಕಿರಬಹುದು ಎಂಬ ಉತ್ತರ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.