ETV Bharat / state

ಹೈಟೆನ್ಷನ್​ ವಿದ್ಯುತ್​ ತಂತಿ ಸ್ಪರ್ಶಿಸಿ ಬಾಲಕಿ ದಾರುಣ ಸಾವು

author img

By

Published : May 23, 2023, 4:30 PM IST

ವಿದ್ಯುತ್ ತಂತಿ ಸ್ಪರ್ಶಿಸಿ ಪ್ರಾಣ ಕಳೆದುಕೊಂಡ ಬಾಲಕಿಯ ಕುಟುಂಬಸ್ಥರ ಆಕ್ರಂದನ ಮುಗಿಲು‌ ಮುಟ್ಟಿದೆ.

ಹೈಟೆನ್ಷನ್​ ವಿದ್ಯುತ್​ ತಂತಿ
ಹೈಟೆನ್ಷನ್​ ವಿದ್ಯುತ್​ ತಂತಿ

ಬೆಳಗಾವಿ : ಬೇಸಿಗೆ ರಜೆ ಇದ್ದ ಕಾರಣ ಸೋದರ ಮಾವನ ಮನೆಗೆ ಬಂದಿದ್ದ ಬಾಲಕಿ ವಿದ್ಯುತ್ ತಂತಿ ಸ್ಪರ್ಶಿಸಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ನಿನ್ನೆ (ಸೋಮವಾರ) ನಡೆದಿದೆ. ಮಧುರಾ ಕೇಶವ್ ಮೋರೆ (13) ಮೃತ ದುರ್ದೈವಿ ಬಾಲಕಿ. ಮಚ್ಛೆಯಲ್ಲಿರುವ ಸೋದರಮಾವ ಪ್ರಸಾದ್ ಬೋಂಗಾಳೆ ಎಂಬುವವರ ಮನೆಗೆ ಬಾಲಕಿ ಬಂದಿದ್ದಳು.

ಬೆಳಗಾವಿ ಮತ್ತು ಖಾನಾಪುರ ರಸ್ತೆಯ ಪಕ್ಕದಲ್ಲಿ ಪ್ರಸಾದ್ ಎಂಟರ್‌ಪ್ರೈಸಿಸ್ ಹೆಸರಿನ ಸಿಮೆಂಟ್ ಮಳಿಗೆ ಇದೆ. ಇದೇ ಮಳಿಗೆಯ ಮೇಲೆ ಮನೆ ಕಟ್ಟಿಕೊಂಡು ಪ್ರಸಾದ್ ಬೋಂಗಾಳೆ ಕುಟುಂಬ ವಾಸವಿತ್ತು. ಎಂಟು ದಿನಗಳ ಹಿಂದೆ ಸೋದರಮಾವ ಪ್ರಸಾದ್ ಮನೆಗೆ ಬಂದಿದ್ದ ಬಾಲಕಿ ಮಧುರಾ ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಮಹಡಿ ಮೇಲೆ ಆಟವಾಡುತ್ತ ಮಹಡಿ ಮೇಲಿನ ಕಿರಿದಾದ ಕಾಂಪೌಂಡ್ ಮೇಲೆ ಹತ್ತಿದ್ದಾಳೆ.

ಈ ಸಂದರ್ಭದಲ್ಲಿ ಮಹಡಿ ಮೇಲೆ ಹಾದು ಹೋದ ವಿದ್ಯುತ್ ತಂತಿ ಸ್ಪರ್ಶಿಸಿ ಪಕ್ಕದ ಮನೆಯ ಮಹಡಿ ಮೇಲೆ ಬಾಲಕಿ ಬಿದ್ದಿದ್ದಾರೆ. ಮನೆಯವರೆಗೆ ಏನೋ ಸ್ಫೋಟವಾದ ರೀತಿ ಶಬ್ದ ಕೇಳಿಸಿದೆ. ತಕ್ಷಣ ಮಹಡಿ ಮೇಲೆ ಬಂದು ನೋಡಿದಾಗ ಪಕ್ಕದ ಮನೆಯ ಮಹಡಿ ಮೇಲೆ ಬಾಲಕಿ ಮೃತದೇಹ ಪತ್ತೆಯಾಗಿದೆ.

ಇಂದು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಬಾಲಕಿಯ ಮರಣೋತ್ತರ ಪರೀಕ್ಷೆ‌ ನಡೆಯಿತು. ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಎಂಟು ವರ್ಷಗಳ ಹಿಂದೆ ಮಳಿಗೆಯ ಮೇಲೆ ಮನೆ ಕಟ್ಟಿದ್ದರು. ಈ ವೇಳೆ, ವಿದ್ಯುತ್ ಕಂಬ ತೆರವಿಗೆ ಹೆಸ್ಕಾಂಗೆ ಹಲವು ಬಾರಿ ಮನವಿ ಮಾಡಿದ್ದರಂತೆ. ಆದರೇ ಯಾವುದೇ ಕ್ರಮ ಕೈಗೊಂಡಿಲ್ಲ‌. ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಮೃತ ಬಾಲಕಿ ಸಂಬಂಧಿ‌ ರಾಜಶ್ರೀ ಮತ್ತು ಸ್ಥಳೀಯ ನಿವಾಸಿ ಸಮೀರ್ ಆರೋಪಿಸಿದ್ದಾರೆ.

ಹೆಸ್ಕಾಂ ಸೆಕ್ಷನ್ ಆಫೀಸರ್ ಪ್ರತಿಕ್ರಿಯೆ: ಇನ್ನು ಘಟನಾ ಸ್ಥಳಕ್ಕೆ ವಿದ್ಯುತ್ ಪರಿವೀಕ್ಷಕರಾದ ರೇಣುಕಾ, ಹೆಸ್ಕಾಂ ಸೆಕ್ಷನ್ ಆಫೀಸರ್ ಐ.ಡಿ.ಲೋಬೋ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌. ಈ ವೇಳೆ ಮಾತನಾಡಿದ ಹೆಸ್ಕಾಂ ಸೆಕ್ಷನ್ ಆಫೀಸರ್ ಐ.ಡಿ.ಲೋಬೋ, ಮನೆ ಕಟ್ಟುವ ಜಾಗದಲ್ಲಿ ವಿದ್ಯುತ್ ತಂತಿ ಹಾದು ಹೋಗುವುದರಿಂದ ಮನೆ ಕಟ್ಟದಂತೆ ಹಿಂದೆಯೇ ಸೆಕ್ಷನ್ ಆಫೀಸರ್ ನೋಟಿಸ್ ನೀಡಿದ್ದರು. ಆದರೂ ಮನೆ ಕಟ್ಟಿಕೊಂಡಿದ್ದರು‌‌. ಕುಟುಂಬಸ್ಥರು ವಿದ್ಯುತ್ ತಂತಿ ತೆರವಿಗೆ ಮನವಿ ಮಾಡಿದಾಗ ಎಸ್ಟಿಮೇಟ್ ಮಾಡಿ ಕೊಟ್ಟಿದ್ದೆವು ಎಂದು ಸಮರ್ಥಿಸಿಕೊಂಡಿದ್ದಾರೆ.

ಬಳಿಕ ವಿದ್ಯುತ್ ಪರಿವೀಕ್ಷಕರಾದ ರೇಣುಕಾ ಮಾತನಾಡಿ, ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕಿ ಸಾವನ್ನಪ್ಪಿರುವ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ವಿದ್ಯುತ್ ಕಂಬ ತೆರವಿಗೆ ಹೆಸ್ಕಾಂಗೆ ಕುಟುಂಬಸ್ಥರು ಯಾವಾಗ ಮನವಿ ಕೊಟ್ಟಿದ್ದರು ಎಂಬುದನ್ನು ನೋಡುತ್ತೇವೆ. ವಿದ್ಯುತ್ ಕಂಬ ಮನೆ ಕಟ್ಟುವ ಮೊದಲೇ ಅಳವಡಿಕೆ ಮಾಡಲಾಗಿತ್ತು. ನಮ್ಮದು ವಿದ್ಯುತ್ ಪರಿವೀಕ್ಷಣಾ ಇಲಾಖೆ, ನಾವು ತನಿಖೆ ಮಾಡುತ್ತೇವೆ. ವಿದ್ಯುತ್ ಕಂಬ ತೆರವು ಮಾಡುವ ವಿಚಾರ ಹೆಸ್ಕಾಂಗೆ ಸಂಬಂಧಿಸಿದ್ದು. ತನಿಖೆ ಮಾಡಿ ಹೆಸ್ಕಾಂಗೆ ಸೂಕ್ತ ನಿರ್ದೇಶನ ನೀಡುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ : ಅಪಾರ್ಟ್‌ಮೆಂಟ್‌ನಲ್ಲಿ ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಯಿಂದ ಬಿದ್ದ ಡೆಲಿವರಿ ಏಜೆಂಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.