ಬೆಳಗಾವಿ: ತಡರಾತ್ರಿ ಜೂಜಾಟದ ಅಡ್ಡೆಯೊಂದರ ಮೇಲೆ ದಾಳಿ ನಡೆಸಿದ ಮಾರ್ಕೆಟ್ ಠಾಣೆ ಪೊಲೀಸರು 18 ಮಂದಿ ಜೂಜುಕೋರರನ್ನು ಬಂಧಿಸಿದ್ದಾರೆ. ಬಂಧಿತರಿಂದ 1.33 ಲಕ್ಷ ರೂ. ನಗದು, 1 ಬೈಕ್ ಹಾಗೂ 18 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಖಂಜರ್ ಗಲ್ಲಿಯ ಅಡ್ಡೆಯೊಂದರಲ್ಲಿ ಜೂಜಾಟದಲ್ಲಿ ತೊಡಗಿರುವ ಮಾಹಿತಿ ಮೇರೆಗೆ ಡಿಸಿಪಿ ಡಾ. ವಿಕ್ರಂ ಆಮಟೆ ನೇತ್ರತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಜುಬೇರ ಶಕಿಲ ಸುಬೇದಾರ, ಆರೀಫ್, ಜಿಲಾನಿ ಖೋತ್ವಾಲ್, ಅಯಾಜ್ ಬಾಬು ಖತೀಬ್, ಅಬ್ದುಲ್ ಸಲಾಡ್ ಮೈಬುಸಾಬ ಬಾಳೆಕುಂದ್ರಿ ಸೇರಿದಂತೆ 18 ಜನ ಜೂಜುಕೋರರನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ.
ಈ ಕುರಿತು ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.