ETV Bharat / state

ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ: ಆತ್ಮಹತ್ಯೆಗೆ ಕಾರಣ ಬಹಿರಂಗ!

ಸಾಲ ತೀರಿಸಲಾಗದೆ ತನ್ನ ಇಬ್ಬರು ವಯಸ್ಸಿಗೆ ಬಂದ ಮಕ್ಕಳ ಜೊತೆ ಸೇರಿ ರೈಲಿಗೆ ತಲೆ ಕೊಟ್ಟು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ನಡೆದಿದೆ. ಇವರ ಸಾವಿಗೆ ಸಾಲವೇ ಕಾರಣ ಎಂಬ ಮಾಹಿತಿ ಸಿಕ್ಕಿದೆ.

Four people commit suicide in Belgaum
ಬೆಳಗಾವಿಯಲ್ಲಿ ನಾಲ್ವರ ಆತ್ಮಹತ್ಯೆ
author img

By

Published : Jan 28, 2021, 5:46 PM IST

ಚಿಕ್ಕೋಡಿ : ಬೆಳಗಾವಿ ಜಿಲ್ಲೆಯಲ್ಲಿ ದುರಂತ ಅಂತ್ಯ ಕಂಡಿರುವ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆಗೆ ಕಾರಣ ಹೊರಬಿದ್ದಿದೆ.

ಹೌದು, ಜಿಲ್ಲೆಯ ರಾಯಬಾಗ ತಾಲೂಕಿನ ಭಿರಡಿ ಗ್ರಾಮದಲ್ಲಿ ಸಾಲ ತೀರಿಸಲಾಗದೆ ಮನನೊಂದು ರೈಲು ಹಳಿಗೆ ತಲೆಕೊಟ್ಟು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಾಲವೇ ಕಾರಣ ಎಂದು ತಿಳಿದುಬಂದಿದೆ.

ಬೆಳಗಾವಿಯಲ್ಲಿ ನಾಲ್ವರ ಆತ್ಮಹತ್ಯೆಗೆ ಕಾರಣ ಬಹಿರಂಗ

ಸಾತಪ್ಪ ಸುತಾರ, ಪತ್ನಿ ಮಹಾದೇವಿ ಮತ್ತು ಮಕ್ಕಳಾದ ಸಂತೋಷ, ಹಾಗೂ ದತ್ತಾತ್ರೇಯ ಎಂಬುವರು ಆತ್ಮಹತ್ಯೆಗೆ ಶರಣಾದವರು. ಬಡಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇವರು ನಿನ್ನೆ ತಡರಾತ್ರಿ ರಾಯಬಾಗ ರೈಲು ನಿಲ್ದಾಣದ ಹೊರವಲಯದಲ್ಲಿ ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಾಯಬಾಗದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಒಂದೇ ಕುಟುಂಬದ ನಾಲ್ವರು!

ಸಾತಪ್ಪ ಯಾವುದೇ ಚಟಗಳಿಲ್ಲದಿದ್ದರೂ ಸಹ ತನಗಾಗಿ ಬಂದ ಆರು ಎಕರೆ ಜಮೀನು, ಎರಡು ಮನೆ ಮಾರಿಕೊಂಡಿದ್ದ. ಹೀಗಾಗಿ ಬಾಡಿಗೆ ಮನೆಯಲ್ಲೇ ವಾಸವಾಗಿದ್ದರಿಂದ ಮಾಡಿದ ಸಾಲ ತೀರಿಸಲಾಗದೆ ಈ ರೀತಿ ದುಡುಕು ನಿರ್ಧಾರ ತೆಗೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.