ETV Bharat / state

ಲಾಕ್​ಡೌನ್​​ ನಡುವೆ ಮಗನ ಅದ್ಧೂರಿ ಮದುವೆ: ಬಿಜೆಪಿ ಮುಖಂಡನ ವಿರುದ್ಧ ಎಫ್ಐಆರ್

ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದ ಕಾಡಸಿದ್ದೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ, ಬಿಜೆಪಿ ಮುಖಂಡ ದಯಾನಂದ ವಂಟಮುರಿ ಅವರ ಮಗನ‌ ಮದುವೆ ಅದ್ಧೂರಿಯಾಗಿ ನಡೆದಿದೆ. ಈ ವೇಳೆ ಲಾಕ್​ಡೌನ್​ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ವಂಟಮುರಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

FIR over a BJP leader who has made a son's marriage among the lock down
ಅದ್ಧೂರಿಯಾಗಿ ಮಗನ ಮದುವೆ ಮಾಡಿದ ಬಿಜೆಪಿ ಮುಖಂಡ
author img

By

Published : Jul 14, 2020, 5:45 PM IST

ಬೆಳಗಾವಿ: ಲಾಕ್​ಡೌನ್​ ನಿಯಮವನ್ನು ಗಾಳಿಗೆ ತೂರಿ ಅದ್ಧೂರಿಯಾಗಿ ಮಗನ ಮದುವೆ ಮಾಡಿದ್ದ ಬಿಜೆಪಿ ಮುಖಂಡ ದಯಾನಂದ ವಂಟಮುರಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಗ್ರಾಮದಲ್ಲಿ ವಧು-ವರನ ಅದ್ಧೂರಿ ಮೆರವಣಿಗೆ ಮಾಡಲಾಗಿದ್ದು, ಈ ವೇಳೆ ಸುಮಾರು 400ಕ್ಕೂ ಅಧಿಕ ಜನರು ಸೇರಿದ್ದರು. ಅಲ್ಲದೇ ಗುಂಪು-ಗುಂಪಾಗಿ ಸೇರಿದ್ದ ಸಾರ್ವಜನಿಕರು ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ನಿಯಮ‌ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಐಪಿಸಿ 188, 269, 270, ಎಪಿಡೆಮಿಕ್ ಡಿಸೀಸ್ ಕಾಯ್ದೆ, ಡಿಸಾಸ್ಟರ್ ಮ್ಯಾನೇಜ್​ಮೆಂಟ್​​ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನು ಓದಿ: ಕೋವಿಡ್-19 ನಿಯಮಗಳನ್ನು ಗಾಳಿಗೆ ತೂರಿ ಮದುವೆ ಸಂಭ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.