ETV Bharat / state

ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕಮಿಷನ್ ಆರೋಪ ಮಾಡಿದವರ ವಿರುದ್ಧ ಎಫ್ಐಆರ್

author img

By

Published : Sep 29, 2021, 3:58 PM IST

Updated : Sep 29, 2021, 5:38 PM IST

ಅಪರಿಚಿತ‌‌ ವ್ಯಕ್ತಿಗಳ ಹೆಸರಿನಲ್ಲಿ ಹಾಳಾದ ರಸ್ತೆ ಪಕ್ಕದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ಕನ್ನಡ-ಮರಾಠಿಯಲ್ಲಿ ವ್ಯಂಗ್ಯವಾಗಿ ಬ್ಯಾನರ್ ಹಾಕಲಾಗಿತ್ತು. ಈ ಕುರಿತು ಅಪರಿಚಿತರ ವಿರುದ್ಧ 20 ಗ್ರಾಮಗಳ ಕಾಂಗ್ರೆಸ್ ‌ಕಾರ್ಯಕರ್ತರು ಪ್ರತ್ಯೇಕ ದೂರು ದಾಖಲಿಸಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕಮಿಷನ್ ಆರೋಪ
ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕಮಿಷನ್ ಆರೋಪ

ಬೆಳಗಾವಿ : ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬ್ಯಾನರ್ ನಲ್ಲಿ ಶೇ.30ರಷ್ಟು ‌ಕಮೀಷನ್ ಆರೋಪ ಮಾಡಿದ್ದ ಅಪರಿಚಿತರ ವಿರುದ್ಧ 20 ಗ್ರಾಮಗಳ ಕಾಂಗ್ರೆಸ್ ‌ಕಾರ್ಯಕರ್ತರು ಪ್ರತ್ಯೇಕ ದೂರು ದಾಖಲಿಸಿದ್ದಾರೆ.

ಕಮಿಷನ್ ಆರೋಪ ಮಾಡಿದವರ ವಿರುದ್ಧ ಎಫ್ಐಆರ್

ರಸ್ತೆ ಗುಂಡಿ ವಿಚಾರವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬ್ಯಾನರ್ ಹಚ್ಚಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿರೇಬಾಗೇವಾಡಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಅಪರಿಚಿತ‌‌ ವ್ಯಕ್ತಿಗಳ ಹೆಸರಿನಲ್ಲಿ ಹಾಳಾದ ರಸ್ತೆ ಪಕ್ಕದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ಕನ್ನಡ-ಮರಾಠಿಯಲ್ಲಿ ವ್ಯಂಗ್ಯವಾಗಿ ಬ್ಯಾನರ್ ಹಾಕಲಾಗಿತ್ತು.

ಅಕ್ಕಾ ಶೇ. 30 ಕಮಿಷನ್ ತೊಗೊಂಡು ರಸ್ತೆ ಮಾಡತಾಳ, ಆ ಮೇಲೆ‌ ಹೊಯ್ಕೊಂತ ಕುಂದ್ರಿ ಎಂದು ಬರಹ ಹಾಕಲಾಗಿತ್ತು. ಬಳಿಕ ಹಾಳಾದ ರಸ್ತೆಯನ್ನು ಬಿಜೆಪಿ ಕಾರ್ಯಕರ್ತರು ಬುಲ್ಡೋಜರ್ ತಂದು, ಜಲ್ಲಿಕಲ್ಲು, ಡಾಂಬರ್ ಹಾಕಿ ರಸ್ತೆ ರಿಪೇರಿ ಮಾಡಿ ಹೋರಾಟ ಮಾಡಿದ್ದರು.

ಇದರಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್‌ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದಾರೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅಭಿವೃದ್ಧಿ ಸಹಿಸದವರಿಂದ ಅಪಪ್ರಚಾರ ಮಾಡಲಾಗುತ್ತಿದೆ. ಶಾಸಕರ ವಿರುದ್ಧ ಗ್ರಾಮಗಳಲ್ಲಿ ಅಪ್ರಪ್ರಚಾರ ಮಾಡುವವರನ್ನ ಬಂಧಿಸಿ ಎಂದು ಕೈ ಕಾರ್ಯಕರ್ತರು ಆರೋಪಿಸಿದ್ದಾರೆ.

Last Updated : Sep 29, 2021, 5:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.