ETV Bharat / state

ಬೆಳಗಾವಿಯಲ್ಲಿ ಎಣ್ಣೆ ಪಾರ್ಟಿ ವಿಡಿಯೋ ವೈರಲ್​ : ಡಿಎಚ್​ಒ ಕಚೇರಿ ಸಿಬ್ಬಂದಿಯಿಂದ ಪಾರ್ಟಿ ಆಯೋಜನೆ ಆರೋಪ

author img

By ETV Bharat Karnataka Team

Published : Oct 10, 2023, 1:25 PM IST

Updated : Oct 10, 2023, 4:10 PM IST

ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿರುವ ಆರೋಪ ಕೇಳಿ ಬಂದಿದೆ.

drinks-party-at-belagavi-dho-office
drinks-party-at-belagavi-dho-office
ಡಿಹೆಚ್​ಓ ಡಾ. ಮಹೇಶ ಕೋಣಿ ಮಾಹಿತಿ

ಬೆಳಗಾವಿ: ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ(ಡಿಹೆಚ್ಒ)ಯಲ್ಲಿ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿರುವ ಆರೋಪ ಕೇಳಿ ಬಂದಿದೆ. ಸಿಬ್ಬಂದಿ ಮದ್ಯಪಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಾರ್ವಜನಿಕರಿಂದ ಭಾರೀ ಟೀಕೆ ವ್ಯಕ್ತವಾಗಿದೆ.

ನಗರದ ಟಿಳಕವಾಡಿಯಲ್ಲಿರುವ ಡಿಹೆಚ್​​ಒ ಕಚೇರಿ ಹಿಂಭಾಗದಲ್ಲಿರುವ ಕೊಠಡಿಯಲ್ಲಿನ ಗಾಂಧಿಜೀ ಫೋಟೋ ಎದುರಿಗೆಯೇ ಸಿಬ್ಬಂದಿ ಮದ್ಯಪಾನ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ, ಈ ಘಟನೆ ಯಾವಾಗ ನಡೆದಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಈ ವಿಡಿಯೋದಲ್ಲಿ ಸಿಬ್ಬಂದಿ ಸಾರಾಯಿ ಕುಡಿಯುತ್ತಿರುವುದು, ಸಿಗರೇಟು ಸೇದುತ್ತಿರುವುದು, ಡ್ಯಾನ್ಸ್ ಹಾಗೂ ಹರಟೆ ಹೊಡೆಯುತ್ತಿರುವುದನ್ನು ಕಾಣಬಹುದು. ಎಣ್ಣೆ ಪಾರ್ಟಿಯಲ್ಲಿ 6 ಜನ ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.

ಘಟನೆ ಬಗ್ಗೆ ಡಿಹೆಚ್​​ಒ ಪ್ರತಿಕ್ರಿಯೆ ಹೀಗಿದೆ: ಈ ಕುರಿತು ಪ್ರತಿಕ್ರಿಯಿಸಿರುವ ಡಿಹೆಚ್​ಓ ಡಾ. ಮಹೇಶ ಕೋಣಿ, ’’ವಿಡಿಯೋದಲ್ಲಿ ನೋಡಿದಾಗ ಮೇಲ್ನೋಟಕ್ಕೆ ನಮ್ಮ ಸಿಬ್ಬಂದಿಗಳೇ ಪಾರ್ಟಿ ಮಾಡಿರುವುದು ಕಂಡುಬಂದಿದೆ. ಇದಕ್ಕೂ ಮುಂಚೆ ಈ ಘಟನೆ ನಮ್ಮ ಗಮನಕ್ಕೆ ಬಂದಿಲ್ಲ. ಕೂಲಂಕುಷವಾಗಿ ತನಿಖೆ ಮಾಡಿ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುತ್ತೇನೆ. ಸರ್ಕಾರಿ ಸಿಬ್ಬಂದಿಗಳು ಕಚೇರಿಯಲ್ಲಿ ಎಣ್ಣೆ ಪಾರ್ಟಿ ಮಾಡುವುದು ಸರ್ಕಾರಿ ಕರ್ತವ್ಯಕ್ಕೆ ವಿರುದ್ಧವಾಗಿದೆ. ಈ ರೀತಿ ಮಾಡಿರುವುದು ತಪ್ಪು. ಈ ವಿಡಿಯೋವನ್ನು ಪರಿಶೀಲನೆ ಮಾಡಿ ತಪ್ಪು ಕಂಡು ಬಂದಲ್ಲಿ ನಮ್ಮ ಕಚೇರಿ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುತ್ತೇನೆ‘‘ ಎಂದು ಹೇಳಿದರು.

ಇದನ್ನೂ ಓದಿ : ಅಣ್ಣ ತಂಗಿ ಸಂಬಂಧ ತಪ್ಪಾಗಿ ಅರ್ಥೈಸಿಕೊಂಡ ಪತಿ.. ಜೋಡಿ ಕೊಲೆ, ತಂದೆ ಮಗ ಬಂಧನ

Last Updated : Oct 10, 2023, 4:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.