ETV Bharat / state

ರಾಜ್ಯಸಭೆಗೆ ಟಿಕೆಟ್ ನಾನೂ ಕೇಳುವೆ, ಕತ್ತಿನೂ ಕೇಳಲಿ.. ಡಾ ಪ್ರಭಾಕರ ಕೋರೆ

ರಮೇಶ್ ಕತ್ತಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಲು ನಾನು ಕಾರಣವಲ್ಲ. ನಾನೂ ಕೂಡ ಟಿಕೆಟ್ ನೀಡುವಂತೆ ಕೇಳಿದ್ದೆ. ನನ್ನ ಸಹೋದರನೂ ಟಿಕೆಟ್ ಕೇಳಿದ್ದ. ಆದರೆ, ಜೊಲ್ಲೆಗೆ ಟಿಕೆಟ್ ಸಿಕ್ತು.

dr-prabhakar-kore
ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್​ ಕೋರೆ
author img

By

Published : Jun 1, 2020, 2:46 PM IST

Updated : Jun 1, 2020, 8:31 PM IST

ಬೆಳಗಾವಿ : ರಮೇಶ್ ಕತ್ತಿ ಟಿಕೆಟ್ ಕೇಳುವುದರಲ್ಲಿ ತಪ್ಪೇನಿಲ್ಲ. ನಾನೂ ಕೇಳುವೆ, ಅವರೂ ಕೇಳಲಿ. ಅರ್ಹತೆ ಆಧರಿಸಿ ನಮ್ಮ ವರಿಷ್ಠರು ಟಿಕೆಟ್ ನೀಡುತ್ತಾರೆ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್​ ಕೋರೆ ಹೇಳಿದ್ದಾರೆ.

ರಾಜ್ಯಸಭೆ ಚುನಾವಣಾ ಟಿಕೆಟ್ಗಾಗಿ ರಮೇಶ್ ಕತ್ತಿ ಪೈಪೋಟಿ ‌ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಉತ್ತಮ ಕೆಲಸ ಮಾಡ್ತಾರೆ ಅಂಥವರನ್ನು ಪಕ್ಷ ಪರಿಗಣಿಸುತ್ತದೆ. ರಾಜಕಾರಣದಲ್ಲಿ ಜೊತೆಗೆ ಇದ್ದವರು ಟಿಕೆಟ್ ಕೇಳಬಾರದು ಅಂಥೇನಿಲ್ಲ. ಎಲ್ಲರಿಗೂ ಟಿಕೆಟ್ ಕೇಳುವ ಹಕ್ಕಿದೆ. ಪಕ್ಷದ ನಾಯಕರು ಯಾರಿಗೆ ಟಿಕೆಟ್ ನೀಡ್ತಾರೋ ಅವರು ರಾಜ್ಯಸಭೆ ಸದಸ್ಯರಾಗ್ತಾರೆ ಎಂದರು.

ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್​ ಕೋರೆ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಉದ್ಭವಿಸಲ್ಲ. ಯಾರೋ ಒಬ್ಬರಿಂದ ನಾಯಕತ್ವ ಬದಲಾವಣೆ ಅಸಾಧ್ಯ. ಮುಂದಿನ ಮೂರು ವರ್ಷ ಬಿ ಎಸ್ ಯಡಿಯೂರಪ್ಪನವರೇ ರಾಜ್ಯದ ಸಿಎಂ ಆಗಿರುತ್ತಾರೆ. ರಮೇಶ್ ಕತ್ತಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಲು ನಾನು ಕಾರಣವಲ್ಲ. ನಾನೂ ಕೂಡ ಟಿಕೆಟ್ ನೀಡುವಂತೆ ಕೇಳಿದ್ದೆ. ನನ್ನ ಸಹೋದರನೂ ಟಿಕೆಟ್ ಕೇಳಿದ್ದ. ಆದರೆ, ಜೊಲ್ಲೆಗೆ ಟಿಕೆಟ್ ಸಿಕ್ತು. ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಪ್ರತಿಕ್ರಿಯಿಸಿದರು.

Last Updated : Jun 1, 2020, 8:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.