ಬೆಳಗಾವಿ : ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಪ್ರವಾಹದಿಂದ ಜನರು ತತ್ತರಿಸಿ ಹೋಗಿದ್ದಾರೆ. ಕಳೆದೆರಡು ತಿಂಗಳಿಂದ ನೆರೆಗೆ ಬದುಕು ದುಸ್ತರವಾಗಿದ್ದರೂ ದೀಪಾವಳಿಯ ಸಡಗರ ಮಾತ್ರ ಕಳೆಗುಂದಿಲ್ಲ.
ಅಥಣಿ ತಾಲೂಕಿನಲ್ಲಿ ದೀಪಾವಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ನೆರೆಯಿಂದಾದ ನೋವೆಲ್ಲಾ ಮರೆತು ಸಂತೋಷದಿಂದ ಲಕ್ಷ್ಮೀ ಪೂಜೆ ಮಾಡಿ ಬೆಳಕಿನ ಹಬ್ಬವನ್ನು ಸಂಭ್ರಮಿಸಿದರು.