ಬೆಳಗಾವಿ: ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ಕೊಂಬುಗಳನ್ನು ಮಾರುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಬೆಳಗಾವಿ ಅರಣ್ಯ ಇಲಾಖೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಅಜರಾ ತಾಲೂಕಿನ ತೇಜಸ್ ತಾನಾಜಿ ಪಾಟೀಲ್ (24), ತುಷಾರ ಪಾಟೀಲ್ (29) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಬ್ಬರು ಅರಣ್ಯ ಪ್ರದೇಶದಲ್ಲಿ ಜಿಂಕೆಗಳನ್ನು ಬೇಟೆಯಾಡಿ ಮಾರುತ್ತಿದ್ದರು. ತಲೆಯ ಎಲುಬು ಸಮೇತ ಇರುವ ಎರಡು ಜಿಂಕೆ ಕೊಂಬುಗಳನ್ನು ಅರಣ್ಯ ಪ್ರದೇಶದಲ್ಲಿ ಬೇಟೆಯಾಡಿ ಸಂಗ್ರಹಿಸಿಟ್ಟುಕೊಂಡಿದ್ದರು. ಅವುಗಳನ್ನು ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಗ್ರಾಮದ ಮೂಲಕ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ರಾಯಬಾಗ ಎಸಿಎಫ್ ಅರಣ್ಯ ಇಲಾಖೆಯಿಂದ ತನಿಖೆ ಮುಂದುವರೆಸಲಾಗುತ್ತಿದೆ.
ಕಾರ್ಯಾಚರಣೆಯಲ್ಲಿ ಬೆಳಗಾವಿಯ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್‍ಐ ರೋಹಿಣಿ ಪಾಟೀಲ್, ಅರಣ್ಯ ಸಂಚಾರಿ ದಳದ ಸಿಬ್ಬಂದಿ ಆರ್.ಬಿ.ಯರನಾಳ, ಎಸ್.ಆರ್.ಅರಿಬೆಂಚಿ, ಕೆ.ಡಿ.ಹಿರೇಮಠ ಹಾಗೂ ವಾಹನ ಚಾಲಕ ಬಿ.ಇಂಗಳಗಿ ಭಾಗಿಯಾಗಿದ್ದರು.
ಜಿಂಕೆ ಕೊಂಬು ಮಾರುತ್ತಿದ್ದ ಅಂತಾರಾಜ್ಯ ಕಳ್ಳರ ಬಂಧನ - ಬೆಳಗಾವಿ ಅರಣ್ಯ ಇಲಾಖೆ ಪೊಲೀಸರಿಂದ ಇಬ್ಬರ ಬಂಧನ
ಜಿಂಕೆ ಬೇಟೆಯಾಡಿ ಕೊಂಬುಗಳನ್ನು ಮಾರುತ್ತಿದ್ದ ಮಹಾರಾಷ್ಟ್ರ ಮೂಲದ ಇಬ್ಬರು ಖದೀಮರನ್ನು ಬೆಳಗಾವಿ ಅರಣ್ಯ ಇಲಾಖೆ ಪೊಲೀಸರು ಬಂಧಿಸಿದ್ದಾರೆ.
![ಜಿಂಕೆ ಕೊಂಬು ಮಾರುತ್ತಿದ್ದ ಅಂತಾರಾಜ್ಯ ಕಳ್ಳರ ಬಂಧನ deer antlers](https://etvbharatimages.akamaized.net/etvbharat/prod-images/768-512-9697996-989-9697996-1606571843398.jpg?imwidth=3840)