ETV Bharat / state

ಬೆಳಗಾವಿ: ಶಾಸಕ ಅಭಯ್ ಪಾಟೀಲ್​ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ.. ಸಚಿವ ಸತೀಶ್​ ಜಾರಕಿಹೊಳಿ ಹೇಳಿದ್ದೇನು?

ಸಚಿವ ಸತೀಶ್​ ಜಾರಕಿಹೊಳಿ‌ ಅವರು ಪ್ರತಿಭಟನಾನಿರತರ ಜೊತೆಗೆ ಪಾಲಿಕೆಯಲ್ಲಿ ಮಹತ್ವದ ಸಭೆ ನಡೆಸಿದರು.

author img

By ETV Bharat Karnataka Team

Published : Oct 25, 2023, 7:31 PM IST

Updated : Oct 25, 2023, 9:24 PM IST

ಶಾಸಕ ಅಭಯ್ ಪಾಟೀಲ‌ ವಿರುದ್ಧ ಪ್ರತಿಭಟನೆ
ಶಾಸಕ ಅಭಯ್ ಪಾಟೀಲ‌ ವಿರುದ್ಧ ಪ್ರತಿಭಟನೆ
ಶಾಸಕ ಅಭಯ್ ಪಾಟೀಲ್ ವಿರುದ್ಧ ದಲಿತ ಸಂಘಟನೆ ಪ್ರತಿಭಟನೆ

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇತ್ತೀಚೆಗೆ ಆಸ್ತಿ ತೆರಿಗೆ ಹೆಚ್ಚಳ ನಿರ್ಣಯದ ದಿನಾಂಕ ತಿದ್ದಿದ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಬುಧವಾರ ಬಿಜೆಪಿ ಶಾಸಕ ಅಭಯ್ ಪಾಟೀಲ್ ದಲಿತ ಅಧಿಕಾರಿಗಳ ಮೇಲೆ ವೈಯಕ್ತಿಕ ಹಗೆತನ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಗತಿಪರ ಸಂಘಟನೆಗಳು, ಕಾಂಗ್ರೆಸ್ ನಗರಸಭೆ ಸದಸ್ಯರು, ವಿವಿಧ ದಲಿತ ಸಂಘಟನೆಗಳು ಹಾಗೂ ಸಚಿವ ಸತೀಶ್​ ಜಾರಕಿಹೊಳಿ ಅವರ ಬೆಂಬಲಿಗರು, ಅಭಯ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ತಮಟೆ, ಜಾಂಝ್ ವಾದ್ಯಗಳ ಸಮೇತ ಪ್ರತಿಭಟನೆಯಲ್ಲಿ ಭಾಗಿಯಾದರು.

ಪಾಲಿಕೆಯಲ್ಲಿ 2023-24ರ ಆಸ್ತಿ ಕರ ಹೆಚ್ಚಳ ಮಾಡುವಂತೆ ಮೇಯರ್ ಶೋಭಾ ಸೋಮನಾಚೆ ನೇತೃತ್ವದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, 2023-24ರ ಆಸ್ತಿ ಕರ ಹೆಚ್ಚಳದ ಪ್ರತಿ ಕಳಿಸಬೇಕಿದ್ದ ಅಧಿಕಾರಿಗಳು, ಲೋಪ ದೋಷ ಮಾಡಿ 2024-25 ಎಂದು ತಿದ್ದುಪಡಿ ಮಾಡಿ ಸರ್ಕಾರಕ್ಕೆ ಕಳಿಸಿದ್ದರು. ಇದನ್ನೇ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡ ಆಡಳಿತಾರೂಢ ಬಿಜೆಪಿ ಸದಸ್ಯರು, ಲೋಪದೋಷ ಮಾಡಿದ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ, ಕರ್ನಾಟಕ ಲೋಕಸೇವಾ ಆಯೋಗ, ಡಿಪಿಎಆರ್, ಡಿಒಪಿಟಿಗೆ ನಿರ್ಣಯ ಕೈಗೊಳ್ಳಲು ಹಿಂದಿನ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.

ಸತೀಶ್​ ಜಾರಕಿಹೊಳಿ ವಿರುದ್ಧ ರಾಜ್ಯಪಾಲರಿಗೆ ದೂರು: ಪಾಲಿಕೆ ಮೇಯರ್ ಶೋಭಾ ಸೋಮನಾಚೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್​ ಜಾರಕಿಹೊಳಿಯವರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದು, ಸಚಿವರ ಹಸ್ತಕ್ಷೇಪದಿಂದ ನಮಗೆ ಆಡಳಿತ ಮಾಡಲು ಆಗುತ್ತಿಲ್ಲ. ನಮಗೆ ನಿಮ್ಮ ಸಮಯ ನೀಡಿ ದಿನಾಂಕ ಕೊಡಿ ಎಂದು ಮನವಿ ಪತ್ರ ಬರೆದಿದ್ದಾರೆ.

ಪ್ರತಿಭಟನೆ ನಂತರ ಪಾಲಿಕೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್​ ಜಾರಕಿಹೊಳಿ‌ ಅವರು ಪ್ರತಿಭಟನಾನಿರತ ಕಾಂಗ್ರೆಸ್ ನಗರ ಸೇವಕರು, ಸಂಘಟನೆಗಳ ಕಾರ್ಯಕರ್ತರ ಜೊತೆಗೆ ಮಹತ್ವದ ಸಭೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ, ಸಭೆಯಲ್ಲಿ ಒಂದೇ ನಿರ್ಣಯ ಪಾಸ್ ಆಗಿದ್ದು, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕಚೇರಿಗಳಾದ ಯುಪಿಎಸ್​ಸಿ, ಟಿಒಪಿಸಿಗೆ ಪತ್ರ ಬರೆಯಲಿಕ್ಕೆ ಭ್ರಷ್ಟಾಚಾರ, ಯಾವುದೇ ಗಂಭೀರ ಆರೋಪದ ನಿರ್ಣಯ ಅಲ್ಲ. ಕೇವಲ ವರ್ಷ ಬದಲಾವಣೆ ಆದ ವಿಷಯ ಸಭೆಯಲ್ಲಿ ಚರ್ಚೆ ಆಗಿದೆ.

ರಾಜ್ಯ ಸರ್ಕಾರಕ್ಕೆ ಪತ್ರ ಬರೆಯೋದು ಬಿಟ್ಟು, ಕೇಂದ್ರದ ಏಜೆನ್ಸಿಗಳಿಗೆ ಪತ್ರ ಬರೆದು ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಅಭಯ್ ಪಾಟೀಲ್ ದುರುದ್ದೇಶದಿಂದ ತೊಂದರೆ ಆಗುತ್ತಿದೆ ಎಂದು ಇಂದು ಪ್ರತಿಭಟನೆ ಆಗಿದೆ. ದಾಖಲೆಗಳಲ್ಲಿ ಮೇಯರ್ ಸೈನ್ ಮಾಡಿದ್ದಾರೆ. ಮೇಯರ್ ಸಹಿ ಮಾಡಿದ ನಂತರವೇ ಆಯುಕ್ತರು ಸರ್ಕಾರಕ್ಕೆ ಕಳಿಸಿದ್ದಾರೆ. ಮೇಯರ್ ಹಿಂದೆ ಅಭಯ್ ಪಾಟೀಲ್ ಇದ್ದಾರೆ. ಹಾಗಾಗಿ ನಾವೂ ಕೂಡ ಎಣಿಸಿಯೇ ಹೆಜ್ಜೆ ಇಡಬೇಕಾಗುತ್ತದೆ ಎಂದರು.

ಇನ್ನು ನಾವೂ ಕೂಡ ಶಾಸಕರು, ವಿರೋಧ ಪಕ್ಷದ ಸದಸ್ಯರು, ಮೇಯರ್ ಬಂದಾಗ ಪ್ರತಿಭಟನೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ. ಮೇಯರ್ ಅವರು ಮನೆಗೆ ಕಡತ ಒಯ್ದಿದ್ದಕ್ಕೆ ಪ್ರತಿಭಟನೆ ಮಾಡುತ್ತೇವೆ. ಅಭಯ್ ಪಾಟೀಲ್ ಮನೆ ಮುಂದೆಯೂ ಸಹ ಸದಸ್ಯರು ಪ್ರತಿಭಟನೆ ಮಾಡುತ್ತಾರೆ. ಪಾಲಿಕೆ ಆದೇಶ ಇಲ್ಲದೆ ಪೌರ ಕಾರ್ಮಿಕರನ್ನು ನೇಮಕ ಮಾಡಲಾಗಿದೆ. ಇದರ ಮೇಲೂ ಸಹ ನಿರ್ಣಯ ಮಾಡಿದ್ದೇವೆ ಎಂದು ಸಚಿವ ಸತೀಶ್​ ಜಾರಕಿಹೊಳಿ ತಿಳಿಸಿದರು.

ತಮ್ಮ ವಿರುದ್ಧ ರಾಜ್ಯಪಾಲರಿಗೆ ಮೇಯರ್ ಪತ್ರ ಬರೆದಿರುವ ವಿಚಾರಕ್ಕೆ, ನಾವು ಕೂಡ ಅಂತಹ ಹತ್ತು ಪತ್ರ ಬರೆಯುತ್ತೇವೆ. ಅವರು ರಾಜ್ಯಪಾಲರನ್ನು ಭೇಟಿಯಾಗಿ ಬರಲಿ ಎಂದ ಸತೀಶ್​, ಪಾಲಿಕೆಯನ್ನು ಯಾವುದೇ ಕಾರಣಕ್ಕೂ ಸೂಪರ್ ಸೀಡ್ ಮಾಡಲ್ಲ. ಅದರ ಅವಶ್ಯಕತೆಯೂ ಇಲ್ಲ. ಅಭಿವೃದ್ಧಿಗೆ ಎಲ್ಲ ರೀತಿ ಸಹಕಾರ ಕೊಡಲು ನಾವು ಸಿದ್ಧರಿದ್ದೇವೆ. ಸದಸ್ಯರು ಅಧಿಕಾರ ವಹಿಸಿಕೊಂಡು ಈಗ ಆರು ತಿಂಗಳಾಗಿದೆ. ಆದರೆ, ಪಾರದರ್ಶಕವಾಗಿ ಕೆಲಸ ಮಾಡಲಿ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ‌ ಶಾಸಕ ಆಸೀಫ್ ಸೇಠ್, ಮಲ್ಲೇಶ ಚೌಗುಲೆ, ಸುಜೀತ ಮುಳಗುಂದ, ರಾಜಕುಮಾರ ಟೋಪಣ್ಣವರ, ರಮಾಕಾಂತ ಕೊಂಡುಸ್ಕರ್, ಬಾಬಾಜಾನ ಮತವಾಲೆ, ಅಜೀಂ ಪಟವೇಗಾರ, ಮುಜಮ್ಮಿಲ್ ಡೋಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ಆಸ್ತಿ ತೆರಿಗೆ ಠರಾವ್ ತಿರುಚಿದವರ ವಿರುದ್ಧ ತನಿಖೆಗೆ‌ ನಿರ್ಧಾರ: ಪಾಲಿಕೆ ಸಭೆ ಸಚಿವ ಸತೀಶ ಜಾರಕಿಹೊಳಿ ಬಂದ 10‌ ನಿಮಿಷಕ್ಕೆ ಅಂತ್ಯ

Last Updated : Oct 25, 2023, 9:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.