ETV Bharat / state

ಅಥಣಿಯಲ್ಲಿ ಸಿಎಂ ಭರ್ಜರಿ ಪ್ರಚಾರ... ಲಕ್ಷ್ಮಣ ಸವದಿಗೆ ಜೈ ಎಂದ ಬಿಎಸ್​ವೈ.. - Cm B.S. Yadiyurappa campign in Atani update

ಅಥಣಿ ಉಪಚುನಾವಣೆ ಪ್ರಚಾರದ ಅಖಾಡಕ್ಕೆ ಯಡಿಯೂರಪ್ಪ ಇಳಿದಿದ್ದು, ಬಿಜೆಪಿಯಿಂದ ಕಣಕ್ಕಿಳಿದಿರುವ ಅನರ್ಹ ಶಾಸಕ ಮಹೇಶ್​ ಕುಮಟಳ್ಳಿ ಪರ ತಾಲೂಕಿನ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು.

ಅಥಣಿಯಲ್ಲಿ ಬಿಜೆಪಿಯಿಂದ ಭರ್ಜರಿ ಚುನಾವಣಾ ಪ್ರಚಾರ
author img

By

Published : Nov 23, 2019, 4:58 PM IST

Updated : Nov 23, 2019, 5:10 PM IST

ಅಥಣಿ/ಬೆಳಗಾವಿ: ಉಪ ಚುನಾವಣೆಯಿಂದ ರಂಗು ಪಡೆದಿರುವ ಅಥಣಿ ಕ್ಷೇತ್ರದಲ್ಲಿ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬಿರುಸಿನ ಪ್ರಚಾರ ನಡೆಸಿದರು.

ಈ ವೇಳೆ ಮಾತನಾಡಿದ ಯಡಿಯೂರಪ್ಪ, ಮಹಾರಾಷ್ಟ್ರದಲ್ಲಿ ನಮ್ಮ ಬಿಜೆಪಿ ಸರ್ಕಾರದ ರಚನೆ ಆಗಿದೆ. ಈ ಸಂತೋಷವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ ಎಂದರು.

ಅಥಣಿಯಲ್ಲಿ ಬಿಜೆಪಿಯಿಂದ ಭರ್ಜರಿ ಚುನಾವಣಾ ಪ್ರಚಾರ..

ಯಡಿಯೂರಪ್ಪ ಅವರ ಬಾಯಿಯಿಂದ ಒಂದು ಮಾತು ಬಂದರೆ ಅದು ಯಾವತ್ತೂ ತಪ್ಪುವುದಿಲ್ಲ. ಮುಂದಿನ ಮೂರುವರೆ ವರ್ಷದವರೆಗೂ ಲಕ್ಷ್ಮಣ ಸವದಿ ಡಿಸಿಎಂ ಆಗಿಯೇ ಮುಂದುವರಿಯುತ್ತಾರೆ. ಈ ಬಗ್ಗೆ ಅಥಣಿ ಕ್ಷೇತ್ರದ ಜನರಿಗೆ ನಾನು ಮಾತು ಕೊಡುತ್ತಿದ್ದೇನೆ. ಇನ್ಮುಂದೆಯೂ ಸವದಿಯವರು ಡಿಸಿಎಂ ಆಗಿ ಮುಂದುವರಿಯುತ್ತಾರೆ ಎಂದರು.

ಮಹೇಶ್​ ಕುಮಟಳ್ಳಿ ಹಾಗೂ ಲಕ್ಷ್ಮಣ್​ ಸವದಿ ಜೊತೆಯಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಇಲ್ಲಿ ಮಹೇಶ್​ ಕುಮಟಳ್ಳಿ ಅವರನ್ನು ಆಯ್ಕೆ ಮಾಡಿದರೆ ಅವರು ಸಚಿವರಾಗಲಿದ್ದಾರೆ. ಮಹೇಶ್​ ಕುಮಟಳ್ಳಿ ರಾಜೀನಾಮೆ ನೀಡದಿದ್ದರೆ, ನಾನು ಸಿಎಂ ಆಗಲು ಸಾಧ್ಯವಾಗುತ್ತಿರಲಿಲ್ಲ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಲು ಆಗುತ್ತಿರಲಿಲ್ಲ. ಇದು ಕುಮಟಳ್ಳಿ ಚುನಾವಣೆ ಅಲ್ಲ, ಇದು ಲಕ್ಷ್ಮಣ್​ ಸವದಿ ಚುನಾವಣೆ, ಇದು ಯಡಿಯೂರಪ್ಪ ಚುನಾವಣೆ ಎಂದು ಯಡಿಯೂರಪ್ಪ ತಿಳಿಸಿದರು.

ಶಿವಾಜಿನಗರವೂ ಸೇರಿದಂತೆ ರಾಜ್ಯದ 15ರಲ್ಲಿ 15 ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ. ಚುನಾವಣೆ ಫಲಿತಾಂಶದ ಮೂಲಕ ಪ್ರತಿಪಕ್ಷಗಳ ಟೀಕೆಗಳಿಗೆ ಉತ್ತರ ಸಿಗಲಿದೆ ಎಂದರು.

Intro:ರಾಜ್ಯದ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಲಿರುವ ಉಪಚುನಾವಣೆ ನಿಮಿತ್ಯವಾಗಿ ಇಂದು ಬಿಜೆಪಿ ಕಾರ್ಯಕರ್ತರ ಸಭೆ, ಸಿ ಎಂ ಬಿ ಎಸ್ ವೈ ಅಥಣಿ ಗೆ ಮತಕ್ಷೇತ್ರದಲ್ಲಿ ತಮ್ಮ ಅಬ್ಯರ್ಥಿಗಳ ಮಹೇಶ್ ಕುಮ್ಟಳ್ಳಿ ಪರ ಪ್ರಚಾರ ನಡೆಸಿದರು.. ಅಥಣಿ ಇಂದ ಉಪಚುಣಾವಣೆ ಬಿಜೆಪಿ ಪ್ರಚಾರ ಪ್ರಾರಂಭ ಮಾಡಿದ್ದೇವೆ ಎಂದ ಸಿಎಂ ಯಡಿಯೂರಪ್ಪ... Body:ಅಥಣಿ ವರದಿ:

ರಾಜ್ಯದ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಲಿರುವ ಉಪಚುನಾವಣೆ ನಿಮಿತ್ಯವಾಗಿ ಇಂದು ಬಿಜೆಪಿ ಕಾರ್ಯಕರ್ತರ ಸಭೆ, ಸಿ ಎಂ ಬಿ ಎಸ್ ವೈ ಅಥಣಿ ಗೆ ಮತಕ್ಷೇತ್ರದಲ್ಲಿ ತಮ್ಮ ಅಬ್ಯರ್ಥಿಗಳ ಮಹೇಶ್ ಕುಮ್ಟಳ್ಳಿ ಪರ ಪ್ರಚಾರ ನಡೆಸಿದರು..

ಮಹಾರಾಷ್ಟ್ರದ ನಮ್ಮ ಬಿಜೆಪಿ ಸರ್ಕಾರದ ರಚನೆ ಆಗಿದೆ ಈ ಸಂತೋಷ ನಿಮ್ಮ ಜೋತೆ ಹಂಚಿಕೊಳ್ಳುತ್ತಿದ್ದೇನೆ.
ಸಭೆ ಉದ್ದೇಶಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ ರವರು ಮುಂದಿನ ಮೂರುವರೆ ವರ್ಷ ಲಕ್ಷ್ಮಣ ಸವದಿ ಡಿಸಿಎಂ ಆಗಿಯೇ ಮುಂದುವರಿತಾರೆ ನಿಮಗೆ ಅಥಣಿ ಕ್ಷೇತ್ರದ ಜನರಿಗೆ ನಾನು ಮಾತು ಕೊಡತ್ತಿನಿ ಇನ್ನು ಮುಂದೆ ಇವರೆ ಡಿಸಿಎಂ ಆಗಿ ಮುಂದೆಯೂರುತ್ತಾರೆ ಎಂದರು.
ಮೋದಿ, ಅಮಿತ್ ಷಾ ಜೊತೆಗೆ ಡಿಸಿಎಂ ಲಕ್ಷ್ಮಣ ಸವದಿಗೂ ಜಯಘೋಷ ಹಾಕಿದ ಸಿಎಂ, ರಾಜ್ಯ ಜನರಿಗೆ ಈ ಭಾಗದ ನೇರ ಮತ್ತು ಸವಳು ಜವಳು ಕ್ಕೆ ಲಕ್ಷ್ಮಣ್ ಸವದಿ ಹೆಳಿದಾಗೆ ಹಾಗೆ ಈ ಭಾಗಕ್ಕೆ ಒತ್ತು ನೀಡಿ ಅಭಿವೃದ್ಧಿ ಯೋಜನೆ ಮಾಡುತ್ತೆವೆ ಎಂದರು....

ಮಹೇಶ್ ಕುಮಟಳ್ಳಿ ಆಯ್ಕೆ ಮಾಡಿದರೆ ಮಂತ್ರಿ ಸ್ಥಾನದ ಜೋತಗೆ ಅಥಣಿ ಬರುತ್ತಾರೆ, ನಿವು ಮಹೇಶ್ ಕುಮ್ಟಳ್ಳಿ, ಮತ್ತು ಲಕ್ಷ್ಮಣ ಸವದಿ ಚುನಾವಣೆ ಗೆ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಗೆಲುವಿಸಿ.... ಎಂದು ಕಾರ್ಯಕರ್ತರಿಗೆ ಕರೆ ನೀಡಿದರು

ಮತ್ತೆ ೨ ತಾರೀಖು ನಾನು ಅಥಣಿ ಗೆ ಬರುವೆ ಆ ಜನರನ್ನು ಜೋಡಿ ಎದುರಾಗಿದೆ ಭಯ ಆಗಬೇಕು ಅಂದೆ ಹೇಚ್ಚಾಗಿ ಮಾತನಾಡುತ್ತಾನೆ ಎಂದು ತಿಳಿಸಿದರು.Conclusion:ಶಿವರಾಜ್ ನೇಸರ್ಗಿ ಅಥಣಿ
Last Updated : Nov 23, 2019, 5:10 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.