ಚಿಕ್ಕೋಡಿ: ಶಾಲೆಬಿಟ್ಟ ಮಕ್ಕಳ ಕುರಿತು ಚಿಕ್ಕೋಡಿ ನಗರದಲ್ಲಿ ಸರ್ಕಾರಿ ಸಿಬ್ಬಂದಿ ಸಮೀಕ್ಷೆ ಕಾರ್ಯ ಪ್ರಾರಂಭಿಸಿದ್ದಾರೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರು ಮತ್ತೆ ಶಾಲೆಗಳತ್ತ ಮುಖ ಮಾಡುವಂತೆ ಮಾಡುವುದು ಮತ್ತು ಸಾಕ್ಷರತೆಯ ಮಟ್ಟ ಹೆಚ್ಚಿಸುವಂತೆ ಮಾಡಲಾಗುತ್ತಿದೆ.
ರಾಜ್ಯಾದ್ಯಂತ 1ರಿಂದ 18 ವಯಸ್ಸಿನ ಮಕ್ಕಳ ಸಮೀಕ್ಷೆ ನಡೆಯುತ್ತಿದೆ. ಇದಕ್ಕಾಗಿ ಶಿಕ್ಷಣ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಒಂದು ಆ್ಯಪ್ ಸಿದ್ಧಪಡಿಸಿದ್ದಾರೆ. ಈ ಆ್ಯಪ್ ಮೂಲಕ ಪುರಸಭೆ, ಮಹಾನಗರ ಪಾಲಿಕೆ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ, ಜಿಲ್ಲಾಡಳಿತ ಸಿಬ್ಬಂದಿ ಮನೆ ಮನೆಗೆ ಸಮೀಕ್ಷೆ ಮಾಡುತ್ತಿದ್ದಾರೆ.
ಶಾಲೆಬಿಟ್ಟ ಮಕ್ಕಳು, ಮಧ್ಯದಲ್ಲಿ ಶಾಲೆ ಬಿಟ್ಟವರು, ಇದುವರೆಗೆ ಶಾಲೆಗೆ ದಾಖಲಾಗದೇ ಇರುವಂತವರನ್ನು ಗುರುತಿಸಿ ಇಲಾಖೆಗೆ ಮಾಹಿತಿ ಕೊಡುವಂತಹ ಕೆಲಸ ನಡೆಯುತ್ತಿದೆ.
ನಮ್ಮ ಸಿಬ್ಬಂದಿ ಮನೆಗಳಿಗೆ ಬಂದಾಗ ಸಹಕರಿಸಿ ಸಂಪೂರ್ಣ ಮಾಹಿತಿ ಕೊಡಿ. ಈ ಮೂಲಕ ಶೈಕ್ಷಣಿಕ ಪ್ರಗತಿಯ ಬಗ್ಗೆ ಎಲ್ಲರೂ ಮುಕ್ತ ಮನಸ್ಸಿನಿಂದ ಕೈಜೋಡಿಸಬೇಕು ಎಂದು ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಕೇರಿ ತಿಳಿಸಿದರು.
ಇದನ್ನೂ ಓದಿ: ಬೆಳಗಾವಿ: ಪೈಪ್‍ಲೈನ್ ಒಡೆದು ರಸ್ತೆಗೆ ಚಿಮ್ಮಿತು ಕುಡಿಯುವ ನೀರು