ETV Bharat / state

ಆಕಸ್ಮಿಕ ಬೆಂಕಿಗೆ ಜಾನುವಾರುಗಳು ಸಜೀವ ದಹನ: ಕಿತ್ತೂರಲ್ಲಿ ಹೃದಯವಿದ್ರಾವಕ ಘಟನೆ - ಕಿತ್ತೂರಿನ ತೇಗೂರು ಗ್ರಾಮದಲ್ಲಿ ಬೆಂಕಿ ಅವಘಢ

ಕೊಟ್ಟಿಗೆಗೆ ಬೆಂಕಿ ಬಿದ್ದು ದನ ಕರುಗಳು ಸಜೀವ ದಹನವಾದ ಘಟನೆ ಬೆಳಗಾವಿಯ ತೇಗೂರು ಗ್ರಾಮದಲ್ಲಿ ನಡೆದಿದೆ.

Cattle death by fire incident in Teguru of Belgavi
ಬೆಂಕಿ ಅವಘಡದಿಂದ ದನ ಕರುಗಳು ಸಾವು
author img

By

Published : Aug 16, 2020, 1:38 PM IST

ಬೆಳಗಾವಿ : ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ಬಿದ್ದು ಜಾನುವಾರುಗಳು ಸಜೀವ ದಹನಗೊಂಡಿರುವ ಹೃದಯವಿದ್ರಾವಕ ಘಟನೆ ಕಿತ್ತೂರು ತಾಲೂಕಿನ ತೇಗೂರು ಗ್ರಾಮದಲ್ಲಿ ನಡೆದಿದೆ.

ಎರಡು ಎತ್ತು, ಎರಡು ಆಕಳು, ಎರಡು ಕರುಗಳು, ಒಂದು ಕುರಿ ಸುಟ್ಟು ಕರಕಲಾಗಿವೆ. ತೇಗೂರ ಗ್ರಾಮದ ಶಿವರಾಯ ಚಂದ್ರಪ್ಪ ಪಾಗದ ಎಂಬವರಿಗೆ ಸೇರಿದ ಜಾನುವಾರು ಇವಾಗಿವೆ. ಹೊಲದಲ್ಲಿ ಗುಡಿಸಲು ನಿರ್ಮಿಸಿ ಅಲ್ಲಿಯೇ ದನ ಕರುಗಳನ್ನು ಕಟ್ಟಿದ್ದರು. ರಾತ್ರಿ ಮನೆಗೆ ಊಟಕ್ಕೆ ಬಂದ ವೇಳೆ ಅವಘಡ ಸಂಭವಿಸಿದೆ.

ದನದ ಕೊಟ್ಟಿಗೆಗೆ ಬೆಂಕಿ ಬಿದ್ದಿದ್ದು ಹೇಗೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.