ETV Bharat / state

ಕೋವಿಡ್ ನಿಯಮ ಗಾಳಿಗೆ ತೂರಿದ ಬಿಜೆಪಿ ಮುಖಂಡ:  ಪುತ್ರನ ಅದ್ಧೂರಿ ಮದುವೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದ ಬಿಜೆಪಿ ಮುಖಂಡ ದಯಾನಂದ ವಂಟಮುರಿ ತನ್ನ ಮಗನ ಮದುವೆಯನ್ನ ಗ್ರಾಮದ ಕಾಡಸಿದ್ದೇಶ್ವ ದೇವಸ್ಥಾನದ ಆವರಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ನೂರಾರು ಜನರನ್ನು ಸೇರಿಸಿ ಅದ್ಧೂರಿಯಾಗಿ ನೆರವೇರಿಸಿದ್ದಾರೆ.

BJP leader Dayananda Vantamuri
ಬಿಜೆಪಿ ಮುಖಂಡ ದಯಾನಂದ ವಂಟಮುರಿ ಪುತ್ರನ ಅದ್ಧೂರಿ ಮದುವೆ
author img

By

Published : Jul 14, 2020, 9:09 AM IST

ಚಿಕ್ಕೋಡಿ: ರಾಜ್ಯಾದ್ಯಂತ ಕೊರೊನಾ ಹರಡದಂತೆ ತಡೆಯಲು ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ, ತಾಲೂಕಿನ ಬಿಜೆಪಿ ಮುಖಂಡರೊಬ್ಬರು ತಮ್ಮ ಮಗನ ಮದುವೆಗೆ ನೂರಾರು ಜನರನ್ನು ಸೇರಿಸಿ ಅದ್ದೂರಿಯಾಗಿ ನೆರವೇರಿಸಿದ್ದಾರೆ. ಅಷ್ಟೇ ಅಲ್ಲದೇ ನವ ದಂಪತಿಗಳ ಅದ್ದೂರಿ ಮೆರವಣಿಗೆಯನ್ನೂ ಮಾಡಿಸಿದ್ದಾರೆ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಬಿಜೆಪಿ ಮುಖಂಡ ದಯಾನಂದ ವಂಟಮುರಿ ಪುತ್ರನ ಅದ್ಧೂರಿ ಮದುವೆ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದ ಬಿಜೆಪಿ ಮುಖಂಡ ದಯಾನಂದ ವಂಟಮುರಿ ತನ್ನ ಮಗನ ಮದುವೆಯನ್ನ ಗ್ರಾಮದ ಕಾಡಸಿದ್ದೇಶ್ವ ದೇವಸ್ಥಾನದ ಆವರಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ನೂರಾರು ಜನರನ್ನು ಸೇರಿಸಿ ನೆರವೇರಿಸಿದ್ದಾರೆ. ಈ ಮದುವೆಯಲ್ಲಿ ಮಹಾರಾಷ್ಟದ ಗಡಿ‌ ಗ್ರಾಮದ ಜನರು ಕೂಡ ಭಾಗಿಯಾಗಿದ್ದರು. ಇನ್ನು ಇಷ್ಟು ಸಾಲದಂತೆ ಸಂಜೆ ವಧು - ವರರ ಅದ್ಧೂರಿ ಮೆರವಣಿಗೆ ಕೂಡ ಮಾಡಿದ್ದಾರೆ. ಗ್ರಾಮದಲ್ಲಿ ತಮ್ಮದೇ ದರ್ಬಾರ್ ಎನ್ನುವಂತೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಬಿಜೆಪಿ ಮುಖಂಡ ದಯಾನಂದ ವಂಟಮುರಿ ಎಲ್ಲರನ್ನು ಆತಂಕಕ್ಕೆ ದೂಡಿದ್ದಾರೆ.

ಇನ್ನು ಬಸ್ತವಾಡ ಗ್ರಾಮ ಹುಕ್ಕೇರಿಯಿಂದ ಕೇವಲ 3 ಕಿ.ಮೀ ಅಂತರದಲ್ಲಿದೆ. ಆದರೂ ತಾಲೂಕು ಆಡಳಿತ, ಪೊಲೀಸರು ಅಥವಾ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹಾಗೂ ಈ ವಿವಾಹಕ್ಕೆ ಬಂದವರಲ್ಲಿ‌ ಕೊರೊನಾ ಸೋಂಕಿತರು ಇದ್ದರೆ ಇದಕ್ಕೆ ಯಾರು ಜವಾಬ್ದಾರಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.