ETV Bharat / state

ಉಕ್ರೇನ್​ನಿಂದ ಸುರಕ್ಷಿತವಾಗಿ ಹಿಂದಿರುಗಿದ ಬೆಳಗಾವಿಯ ವಿದ್ಯಾರ್ಥಿನಿ ಬ್ರಾಹ್ಮಿ.. - ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿನಿ ಬ್ರಾಹ್ಮಿ ಮನೋಜ ಪಾಟೀಲ್

ಎಂಬಿಬಿಎಸ್ ಪ್ರಥಮ ವರ್ಷದ ವಿದ್ಯಾರ್ಥಿನಿ ಆಗಿರುವ ಬ್ರಾಹ್ಮಿ ಪಾಟೀಲ್, ಉಕ್ರೇನ್ ದೇಶದ ಚರ್ನಿವೇಸ್ಟ್ ನ ಬೊಕೊ ಯುನಿಯನ್ ಸ್ಟೇಟ್ ಮೆಡಿಕಲ್ ವಿವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇಂದು ದೆಹಲಿ, ಬೆಂಗಳೂರು ಮಾರ್ಗವಾಗಿ ಬೆಳಗಾವಿಗೆ ಆಗಮಿಸಿದರು.

ಉಕ್ರೇನ್​ನಿಂದ ಹಿಂದಿರುಗಿದ ಬೆಳಗಾವಿಯ ವಿದ್ಯಾರ್ಥಿನಿ ಬ್ರಾಹ್ಮಿ

author img

By

Published : Mar 6, 2022, 6:08 PM IST

ಬೆಳಗಾವಿ : ಉಕ್ರೇನ್​​ನ ಯುದ್ಧ ಭೂಮಿಯಿಂದ ಸುರಕ್ಷಿತವಾಗಿ ಬೆಳಗಾವಿಗೆ ಆಗಮಿಸಿದ ವಿದ್ಯಾರ್ಥಿನಿ ಬ್ರಾಹ್ಮಿ ಮನೋಜ ಪಾಟೀಲ್ ಅವರನ್ನು, ಸಚಿವ ಉಮೇಶ ಕತ್ತಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಉಕ್ರೇನ್​ನಿಂದ ಹಿಂದಿರುಗಿದ ಬೆಳಗಾವಿಯ ವಿದ್ಯಾರ್ಥಿನಿ ಬ್ರಾಹ್ಮಿ

ಚಿಕ್ಕೋಡಿ ತಾಲೂಕಿನ ಬ್ರಾಹ್ಮಿ ದೆಹಲಿ, ಬೆಂಗಳೂರು ಮಾರ್ಗವಾಗಿ ಬೆಳಗಾವಿಗೆ ಆಗಮಿಸಿದರು. ಎಂಬಿಬಿಎಸ್ ಪ್ರಥಮ ವರ್ಷದ ವಿದ್ಯಾರ್ಥಿನಿ ಆಗಿರುವ ಬ್ರಾಹ್ಮಿ ಪಾಟೀಲ್, ಉಕ್ರೇನ್ ದೇಶದ ಚರ್ನಿವೇಸ್ಟ್ ನ ಬೊಕೊ ಯುನಿಯನ್ ಸ್ಟೇಟ್ ಮೆಡಿಕಲ್ ವಿವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಯುದ್ಧ ಘೋಷಣೆಯಾದ ಹಿನ್ನೆಲೆ ಉಕ್ರೇನ್​​​ನ ಯುದ್ಧ ಪ್ರದೇಶ ಕೀವ್ ಏರ್ ಪೋರ್ಟ್ ನಲ್ಲಿ ಸಿಲುಕಿದ್ದರು. ಇದೀಗ ಸುರಕ್ಷಿತವಾಗಿ ಆಗಮಿಸಿದ ಬ್ರಾಹ್ಮಿ ಅವರನ್ನು ಕಂಡು ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ : ಉಕ್ರೇನ್​​ನಲ್ಲಿ ಪರಿಸ್ಥಿತಿ ಭೀಕರವಾಗಿತ್ತು.. ಚಿಕ್ಕಬಳ್ಳಾಪುರಕ್ಕೆ ಮರಳಿದ ವಿದ್ಯಾರ್ಥಿಗಳ ಅನುಭವದ ಮಾತು

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬ್ರಾಹ್ಮಿ ಪಾಟೀಲ್, ನಾವು ಕೀವ್‌ನಲ್ಲಿ ಭಾರತೀಯ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದೆವು. ಫೆಬ್ರವರಿ 24ರಂದು ನಮ್ಮ ಫ್ಲೈಟ್ ಇತ್ತು, ಆದರೆ ಬಾಂಬ್ ಸ್ಫೋಟ ಹಿನ್ನೆಲೆ ರದ್ದಾಯಿತು. ಉಕ್ರೇನ್‌ನಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಎಂಬಿಬಿಎಸ್ ಮೊದಲನೇ ವರ್ಷ ವ್ಯಾಸಂಗ ಮಾಡುತ್ತಿದ್ದೆ. ಕೀವ್‌ನಿಂದ ರೈಲಿನ ಮೂಲಕ ಗಡಿ ತಲುಪಿದೆವು.

ಖಾರ್ಕಿವ್, ಕೀವ್ ಸೇರಿ ವಿವಿಧೆಡೆ ಸಿಲುಕಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಬೇಕು. ಅಲ್ಲಿ ತುಂಬಾ ಕೆಟ್ಟ ಪರಿಸ್ಥಿತಿ ಇದೆ. ಬೇಗ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಬೇಕು. ನಮ್ಮ ಯೂನಿವರ್ಸಿಟಿಯ ಎಲ್ಲಾ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ರೊಮೇನಿಯಾ ಸರ್ಕಾರದವರೂ ತುಂಬಾ ಸಹಾಯ ಮಾಡಿದರು. ಪ್ರತಿ ಹತ್ತು ನಿಮಿಷಕ್ಕೊಂದು ಬಾಂಬ್ ಸ್ಫೋಟವಾಗುತ್ತಿದೆ ಎಂದು ಹೇಳಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.