ಬೆಳಗಾವಿ: ಬೈಕ್ ಮೇಲೆ ಹೊರಟಿದ್ದ ವ್ಯಕ್ತಿಯ ರುಂಡ ಕಡಿದು ಕೊಲೆ ಮಾಡಿರುವ ಭಯಾನಕ ಘಟನೆ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಬಳಿ ನಡೆದಿದೆ. ತಾರಿಹಾಳ ಕ್ರಾಸ್ ಬಳಿ ಮುನವಳ್ಳಿ ನಿವಾಸಿ ಗದಗಯ್ಯ ಹಿರೇಮಠ (40) ಎಂಬುವರೆ ಕೊಲೆಯಾದವರು.
ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಗದಗಯ್ಯನ ರುಂಡ ಕಡಿದ ಪರಾರಿಯಾಗಿದ್ದಾರೆ. ಬೈಕ್ ಮೇಲೆ ಬಿದ್ದಿರುವ ಮೃತದೇಹ ನೋಡಿದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಕುರಿತು ಹಿರೇಬಾಗೆವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬಾಗಲಕೋಟೆ: ಬಹಿರ್ದೆಸೆಗೆ ತೆರಳಿದ್ದ ಮಹಿಳೆಯ ಬರ್ಬರ ಕೊಲೆ