ಹುಕ್ಕೇರಿ (ಬೆಳಗಾವಿ): ಗ್ರಾಮದಲ್ಲಿ ಆರೋಗ್ಯ ಕ್ಯಾಂಪ್ ನಡೆಸಲು ಬಂದಿದ್ದ ಆರೋಗ್ಯ ಸಹಾಯಕಿ ಹಾಗೂ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿರುವ ಘಟನೆ ಹುಕ್ಕೇರಿ ತಾಲೂಕಿನ ಗಜಪತಿ ಗ್ರಾಮದಲ್ಲಿ ನಡೆದಿದೆ.
ಗಜಪತಿ ಗ್ರಾಮದಲ್ಲಿ ಕೊರೊನಾ ಸೋಂಕು ಪತ್ತೆ ಹಿನ್ನೆಲೆ ಗ್ರಾಮದಲ್ಲಿ ಕ್ಯಾಂಪ್ ನಡೆಸಲು ತೆರಳಿದ್ದ ಆರೋಗ್ಯ ಇಲಾಖೆಯ ಸಹಾಯಕಿ ಶಿವಕ್ಕಾ ಬಂಜಿರಾಮ ಮೇಲೆ ಬಾಳಪ್ಪಾ ಅಣ್ಣಪ್ಪಾ ಪಾಟೀಲ ಎಂಬಾತ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಅಷ್ಟೇ ಅಲ್ಲದೇ ಹಲ್ಲೆ ನಡೆಸಿದ ಬಳಿಕ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ ಎಂಬ ಆರೋಪವೂ ಕೇಳಿ ಬಂದಿದೆ.
ಹಲ್ಲೆ ಮಾಡಲು ಮುಂದಾದಾಗ ಬಿಡಿಸಲು ಬಂದಿದ್ದ ಆಶಾ ಕಾರ್ಯಕರ್ತೆ ಲಕ್ಷ್ಮೀ ಹಾಗೂ ಪಿಡಿಓ ರಮೇಶ್ ತೇಲಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗ್ತಿದೆ.
ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.