ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಬಳಿಯ ದೂಧಗಂಗಾ ನದಿಯಲ್ಲಿ ಮೀನು ಹಿಡಿಯಲು, ನಿನ್ನೆ ಸಂಜೆ ಮೀನುಗಾರರು ಬಲೆ ಹಾಕಿ ಹೋಗಿದ್ದರು. ಈ ಬಲೆಗೆ ಮೊಸಳೆ ಮರಿ ಸಿಕ್ಕಿ ಬಿದ್ದಿದ್ದು, ಮೀನುಗಾರರಲ್ಲಿ ಆತಂಕ ಸೃಷ್ಟಿಸಿದೆ.
ಬೆಳಗ್ಗೆ ಬಲೆ ತೆಗೆಯುವಾಗ ಸಾಕಷ್ಟು ಭಾರ ಕಂಡು ದೊಡ್ಡ ಮೀನು ಬಲೆಗೆ ಬಿದ್ದಿರಬಹುದು ಎಂದು ಹೊರ ತೆಗೆದಾಗ, ಬಲೆಯಲ್ಲಿ ನಾಲ್ಕು ಅಡಿ ಉದ್ದದ ಮೊಸಳೆ ಮರಿ ಕಂಡು ಆತಂಕಕ್ಕೆ ಒಳಗಾಗಿದ್ದಾರೆ. ನಂತರ ಮೊಸಳೆ ಮರಿಯನ್ನ ಹಗ್ಗದಿಂದ ಸುರಕ್ಷಿತವಾಗಿ ಕಟ್ಟಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮೊಸಳೆ ಮರಿಯನ್ನ ಹಸ್ತಾಂತರಿಸಿದ್ದಾರೆ. ಬಲೆಗೆ ಬಿದ್ದ ಮೊಸಳೆ ಮರಿಯಿಂದ ಹೆಚ್ಚಿನ ಮೊಸಳೆಗಳು ನದಿಯಲ್ಲಿ ಇರಬಹುದು ಎಂದು ಮೀನುಗಾರರು ಆತಂಕಕ್ಕೊಳಗಾಗಿದ್ದಾರೆ.