ETV Bharat / state

ಬೆಳಗಾವಿ ಮಹಾನಗರ ಪಾಲಿಕೆ ಬಜೆಟ್ ಮಂಡನೆ.. ಆಯವ್ಯಯದ ಗಾತ್ರ 447.58 ಕೋಟಿ - ಬೆಳಗಾವಿ ಮಹಾನಗರ ಪಾಲಿಕೆ ಬಜೆಟ್ ಮಂಡನೆ

ಬೆಳಗಾವಿ ಮಹಾನಗರ ಪಾಲಿಕೆಯ 2022- 23 ನೇ ಸಾಲಿನ ಬಜೆಟ್ ಅನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಂಡಿಸಿದ್ದಾರೆ. 447.58 ಕೋಟಿ ರೂ. ಗಳ ಬಜೆಟ್ ಮಂಡಿಸಲಾಗಿದೆ.

447-dot-58-budget-presented-in-belgaum-city-corporation
ಬೆಳಗಾವಿ ಮಹಾನಗರ ಪಾಲಿಕೆ ಬಜೆಟ್ ಮಂಡನೆ, ಆಯವ್ಯಯದ ಗಾತ್ರ 447.58 ಕೋಟಿ
author img

By

Published : Mar 23, 2022, 10:18 PM IST

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ 2022- 23 ನೇ ಸಾಲಿನ ಬಜೆಟ್ ಅನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಂಡಿಸಿದ್ದಾರೆ. ಒಟ್ಟು 447.58 ಕೋಟಿ ರೂಪಾಯಿಗಳ ಬಜೆಟ್ ನ್ನು ಬುಧವಾರ ಮಂಡಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ 447.65 ಕೋಟಿ ರೂಪಾಯಿ ಆದಾಯ ನಿರೀಕ್ಷೆಯಲ್ಲಿ ಮಹಾನಗರ ಪಾಲಿಕೆಯಿದೆ. 2022-23ರ ಸಾಲಿನಲ್ಲಿ ಒಟ್ಟು 6.31 ಲಕ್ಷ ರೂಪಾಯಿಯ ಉಳಿತಾಯದ ಆಯವ್ಯಯ ಮಂಡನೆ ಮಾಡಲಾಗಿದೆ.

ಕೋವಿಡ್ ನ ಕಷ್ಟಕರ ಸಮಯದಲ್ಲಿ ಆಸ್ತಿ ತೆರಿಗೆ ಪರಿಷ್ಕರಿಸದಿರಲು ಪಾಲಿಕೆ ನಿರ್ಧರಿಸಿದ್ದು, ನಗರವಾಸಿಗಳಿಗೆ ಇದರಿಂದ ಅನುಕೂಲವಾಗಲಿದೆ. ಕಳೆದ ವರ್ಷವಿದ್ದ ಆಸ್ತಿ ತೆರಿಗೆಯನ್ನೇ ಈ ವರ್ಷವೂ ಮುಂದುವರೆಸುವುದಾಗಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದ್ದಾರೆ. ಹಿರಿಯ ನಾಗರಿಕರನ್ನು ಕಡೆಗಣಿಸಿ ಬಜೆಟ್ ಮಂಡಿಸಲಾಗಿದ್ದು, ನಗರದ ಹಿರಿಯ ನಾಗರಿಕರಿಗೆ ಯಾವುದೇ ವಿಶೇಷ ಯೋಜನೆಗಳ ಘೋಷಣೆ ಮಾಡಲಾಗಿಲ್ಲ ಎಂದು ಹೇಳಲಾಗಿದೆ.

ಹೀಗಿವೆ ಬಜೆಟ್ ಹೈಲೆಟ್ಸ್:

  • ಒಂದು ಕೋಟಿ ವೆಚ್ಚದಲ್ಲಿ ಮಹಿಳೆಯರಿಗೆ ಪಿಂಕ್ ಶೌಚಗೃಹ ನಿರ್ಮಾಣದ ಘೋಷಣೆ
  • ಬೀದಿದೀಪಗಳ ನಿರ್ವಹಣೆಗೆ ಐದೂವರೆ ಕೋಟಿ ವ್ಯಯಿಸಲು ನಿರ್ಧಾರ
  • ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮೂಲಸೌಕರ್ಯಕ್ಕೆ ಐದು ಕೋಟಿ ಮೀಸಲಿಡಲು ತೀರ್ಮಾನ
  • ಉದ್ಯಮಭಾಗ ಕೈಗಾರಿಕಾ ಪ್ರದೇಶದಲ್ಲಿ ಮೂಲಸೌಕರ್ಯ ವೃದ್ಧಿಗೆ ₹2 ಕೋಟಿ ಮೀಸಲು
  • ಬೀದಿಬದಿಯ ಮಹಿಳಾ ವ್ಯಾಪಾರಿಗಳಿಗೆ ವಿಶ್ರಾಂತಿಗೃಹ ನಿರ್ಮಾಣಕ್ಕೆ ₹5 ಕೋಟಿ
  • ಮನೆ ಮನೆಗೆ ಡಸ್ಟ್ ಬೀನ್ ಪೂರೈಸಲು ಮಹಾನಗರ ಪಾಲಿಕೆ ದಿಟ್ಟ ನಿರ್ಧಾರ
  • ಹಸಿಕಸ- ಒಣಕಸ ವಿಂಗಡನೆಗೆ ₹2 ಕೋಟಿ ವೆಚ್ಚದಲ್ಲಿ ಡಸ್ಟ್​ ಬಿನ್ ವಿತರಣೆಗೆ ನಿರ್ಧಾರ
  • ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ₹30 ಲಕ್ಷ ಮರುನಿಗದಿ ಮಾಡಿದ ಪಾಲಿಕೆ
  • ರಸ್ತೆ, ಚರಂಡಿ, ಪಾದಚಾರಿ, ಮಳೆ ನೀರು ನಿರ್ವಹಣೆ, ರಸ್ತೆಗಳ ಮಾರ್ಗಸೂಚಿ ಅಳವಡಿಕೆಗೆ ಐದೂವರೆ ಕೋಟಿ ರೂಪಾಯಿ ನಿಗದಿ
  • ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಗಳ ಕಲ್ಯಾಣಾಭಿವೃದ್ಧಿಗೆ ₹5.9 ಕೋಟಿ ಮೀಸಲು
  • ಹಿಂದುಳಿದ ವರ್ಗಗಳ ಕಲ್ಯಾಣಾಭಿವೃದ್ಧಿಗೆ 1.69 ಕೋಟಿ ಮೀಸಲು
  • ಮಹಿಳೆಯರ ಉತ್ತೇಜನಕ್ಕೆ ₹50 ಲಕ್ಷ ವಿಶೇಷ ನಿಧಿ ಘೋಷಣೆ
  • ಬೀದಿ ನಾಯಿಗಳ ನಿರ್ವಹಣೆಗೆ ₹60 ಲಕ್ಷ ಮೀಸಲು
  • ಕ್ರೀಡಾ ಚಟುವಟಿಕೆ ಆಯೋಜನೆಗೆ ₹13.61 ಲಕ್ಷ ಮೀಸಲು
  • ಈಜುಗೊಳ, ಬ್ಯಾಡ್ಮಿಂಟನ್ ಹಾಲ್, ಹೈಟೆಕ್ ಜಿಮ್ ನಿರ್ವಹಣೆಗೆ ₹50 ಲಕ್ಷ ಮೀಸಲು
  • ಪ್ಲಾಸ್ಟಿಕ್ ಮುಕ್ತ ನಗರವಾಗಿಸಲು ಪರ್ಯಾಯ ವಸ್ತುಗಳಾದ ಪೇಪರ್ ಬ್ಯಾಗ್, ಬಟ್ಟೆ ಬ್ಯಾಗ್ ತಯಾರಿಕೆಗೆ ₹10 ಲಕ್ಷ ಮೀಸಲಿರಿಸಲಾಗಿದೆ.

ಓದಿ : ಮದುವೆ ಲೈಸೆನ್ಸ್​​ ಅಲ್ಲ; ಪತ್ನಿಯ ಇಚ್ಛೆಗೆ ವಿರುದ್ಧದ ಪತಿಯ ಲೈಂಗಿಕ ಕ್ರಿಯೆ ಅತ್ಯಾಚಾರ: ಹೈಕೋರ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.