ETV Bharat / state

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ವಿದ್ಯುತ್ ಶಾಕ್: ₹ 35 ಲಕ್ಷ ಬಿಲ್ ನೋಡಿ ಬೆಚ್ಚಿಬಿದ್ದ ವಿಟಿಯು ಕುಲಪತಿ

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ರಾಜ್ಯದ ಎಲ್ಲಾ ತನ್ನ ವಿಭಾಗದ ಬಿಲ್​ ಸೇರಿ ಒಟ್ಟು ಜೂನ್ ತಿಂಗಳಲ್ಲಿ 35 ಲಕ್ಷ ರೂ. ವಿದ್ಯುತ್​ ಬಿಲ್​ ಬಂದಿದೆ.

author img

By

Published : Jun 20, 2023, 1:56 PM IST

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

ಬೆಳಗಾವಿ: ಮನೆಗಳಿಗೆ ವಿದ್ಯುತ್ ಶಾಕ್ ಆಯ್ತು, ಕೈಗಾರಿಕೆಗಳಿಗೂ ಅದರ ಬಿಸಿ ತಟ್ಟಿತ್ತು. ಇದೀಗ ಈ‌ ತಿಂಗಳ ವಿದ್ಯುತ್ ಬಿಲ್ ಕಂಡು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಹೌಹಾರಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಹೆಸ್ಕಾಂ 18 ಲಕ್ಷ ರೂ. ಬಿಲ್ ನೀಡಿದೆ. ವಿದ್ಯುತ್ ಬಿಲ್‌ನಿಂದ ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಶಾಕ್‌ಗೆ ಒಳಗಾಗಿದ್ದಾರೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಿಂದ ವಿದ್ಯುತ್ ದರ ಏರಿಕೆ ಹಿನ್ನಲೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ 5 ಲಕ್ಷ ರೂ ಹೆಚ್ಚುವರಿ ಬಿಲ್ ಬಂದಿದೆ. ರಾಜ್ಯದ ಐದು ಕಡೆ ವಿಭಾಗೀಯ ಕೇಂದ್ರಗಳನ್ನು ವಿಟಿಯು ಹೊಂದಿದ್ದು, ಇದರಲ್ಲಿ ವಿಭಾಗೀಯ ಕೇಂದ್ರ ಹಾಗೂ ವಿಟಿಯು ಕ್ಯಾಂಪಸ್ ಸೇರಿ ಜೂನ್ ತಿಂಗಳಲ್ಲಿ 35 ಲಕ್ಷ ರೂ. ಬಿಲ್ ಬಂದಿದೆ.

ಬೆಳಗಾವಿಯಲ್ಲಿರುವ ವಿಟಿಯು ಕ್ಯಾಂಪಸ್‌ಗಷ್ಟೇ 18 ಲಕ್ಷ ರೂ. ಬಿಲ್ ನ್ನು ಹೆಸ್ಕಾಂ ನೀಡಿದೆ. ವಿಟಿಯು ಮುಖ್ಯ ಕ್ಯಾಂಪಸ್ ಸೇರಿ 6 ವಿಭಾಗೀಯ ಕೇಂದ್ರಗಳ ಮೇ ತಿಂಗಳ ವಿದ್ಯುತ್ ಬಿಲ್ 35 ಲಕ್ಷ ರೂ. ಬಂದಿದೆ. ಮಾರ್ಚ್ ತಿಂಗಳಲ್ಲಿ 25,56,928 ರೂ., ಎಪ್ರಿಲ್ ತಿಂಗಳಲ್ಲಿ 25,29,021 ರೂ. ವಿದ್ಯುತ್ ಬಿಲ್​ನ್ನು ವಿಟಿಯು ಪಾವತಿಸಿತ್ತು.

ಒಟ್ಟಾರೆ ಬಂದಿರುವ ವಿದ್ಯುತ್ ಬಿಲ್​ನ ಪ್ರತಿ
ಒಟ್ಟಾರೆ ಬಂದಿರುವ ವಿದ್ಯುತ್ ಬಿಲ್​ನ ಪ್ರತಿ

ಮೇ ತಿಂಗಳಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ 35,05,869 ಬಿಲ್ ನೀಡಿದೆ. ಏಕಾಏಕಿ 10 ಲಕ್ಷ ಬಿಲ್ ಹೆಚ್ಚಿಗೆ ಬಂದಿರುವುದಕ್ಕೆ ವಿಟಿಯ ಆಡಳಿತ ಮಂಡಳಿ ಕಂಗಾಲಾಗಿದೆ. ಇನ್ನು 10 ಲಕ್ಷ ರೂ. ಹೆಚ್ಚುವರಿ ಬಿಲ್ ಬಂದಿರುವುದಕ್ಕೆ ಹೆಸ್ಕಾಂ‌ಗೆ ಪತ್ರ ಬರೆಯಲು ವಿಟಿಯು ಮುಂದಾಗಿದೆ. ಗೊಂದಲ ಬಗೆಹರಿದ ಬಳಿಕವಷ್ಟೇ ಹೆಸ್ಕಾಂಗೆ ವಿದ್ಯುತ್ ಬಿಲ್ ಪಾವತಿಸಲು ವಿಟಿಯು ನಿರ್ಧಾರ ಕೈಗೊಂಡಿದೆ.

ಹಂಪಿ ಕನ್ನಡ ವಿವಿ 77 ಲಕ್ಷ ರೂಪಾಯಿ ಕರೆಂಟ್​ ಬಿಲ್​ ಕಟ್ಟಲು ಬಾಕಿ: ನಾಡಿನ ಏಕೈಕ ಭಾಷಾ ಸಂಶೋಧನಾ ವಿಶ್ವವಿದ್ಯಾಲಯ ಹೆಗ್ಗಳಿಕೆಯ ಹಂಪಿ ಕನ್ನಡ ವಿಶ್ವವಿದ್ಯಾಲಯ ಬಾಕಿ ಇರುವ ಕರೆಂಟ್​ ಬಿಲ್​ ಕಟ್ಟಲು ಪರದಾಡುತ್ತಿದೆ. ಕರೆಂಟ್​ ಬಿಲ್​ನ್ನು ಮನ್ನಾ ಮಾಡುವಂತೆ ರಾಜ್ಯ ಸರ್ಕಾರಕ್ಕೆ ವಿವಿ ಮನವಿ ಮಾಡಿದೆ. ವಿವಿಯು ಕಳೆದ ಒಂದು ವರ್ಷದಿಂದ 77 ಲಕ್ಷ ರೂಪಾಯಿ ಕರೆಂಟ್​ ಬಿಲ್ ಕಟ್ಟದೆ ಬಾಕಿ ಉಳಿಸಿಕೊಂಡಿದೆ. ಇದರಿಂದ ವಿದ್ಯತ್​ ಸಂಪರ್ಕ ಕಡಿತಗೊಳ್ಳವ ಆತಂಕ ಎದುರಾಗಿದೆ ಈ ಕನ್ನಡ ವಿವಿಗೆ.

ಕನ್ನಡ ವಿವಿಯ ಎಲ್ಲ ವಿಭಾಗಗಳು, ಆಡಳಿತಾಂಗ ಸೇರಿ ನಾನಾ ಕಟ್ಟಡಗಳಲ್ಲಿ ಬಳಸುವ ತಿಂಗಳ ಬಿಲ್ 10 ಲಕ್ಷ ರೂ. ಬರುತ್ತದೆ. ನೂತನ ಕುಲಪತಿಗಳು ಬಂದ ಬಳಿಕ ಪ್ರತಿ ತಿಂಗಳು 10 ಲಕ್ಷ ರೂ. ಪಾವತಿಸಲಾಗುತ್ತಿದೆ. ಆದರೂ ಒಂದು ವರ್ಷದಿಂದ ಅನುದಾನದ ಸಮಸ್ಯೆ ಕಾರಣ ಬಿಲ್ ಪಾವತಿಸಲಾಗದೇ ದೊಡ್ಡ ಮೊತ್ತದ ಬಿಲ್​ ಬಾಕಿ ಉಳಿದಿದೆ. ವಿವಿಗೆ ಬರುವ ಅನುದಾನದಲ್ಲಿ ಅಲ್ಪಸ್ವಲ್ಪ ಬಾಕಿ ಪಾವತಿಸಿ ನಿರ್ವಹಣೆ ಮಾಡಲು ವಿವಿ ಆಡಳಿತ ಹೆಣಗಾಡುತ್ತಿದೆ.

ಇದನ್ನೂ ಓದಿ: Electricity bill: ಹಂಪಿ ಕನ್ನಡ ವಿವಿಗೆ ಮೂರು ತಿಂಗಳ ಕರೆಂಟ್ ಶಾಕ್.. ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.