ETV Bharat / state

ನಿಶ್ಚಿತಾರ್ಥಕ್ಕೆ ಹೊರಟ ಟೆಂಪೋ ಪಲ್ಟಿ; ಒಂದೇ ಕುಟುಂಬದ 28 ಜನರಿಗೆ ಗಾಯ - etv bharat kannada

ಮದುವೆ ನಿಶ್ಚಿತಾರ್ಥಕ್ಕೆ ಹೊರಟ ಟೆಂಪೋ ಪಲ್ಟಿಯಾಗಿ 28 ಮಂದಿ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

28-people-injured-in-belagavi-tempo-accident
ನಿಶ್ಚಿತಾರ್ಥಕ್ಕೆ ಹೊರಟ ಟೆಂಪೋ ಪಲ್ಟಿ; ಒಂದೇ ಕುಟುಂಬದ 28 ಜನರಿಗೆ ಗಾಯ
author img

By

Published : Nov 19, 2022, 9:10 AM IST

ಬೆಳಗಾವಿ: ಮದುವೆ ನಿಶ್ಚಿತಾರ್ಥಕ್ಕೆ ಹೊರಟ ಟೆಂಪೋ ಪಲ್ಟಿಯಾದ ಪರಿಣಾಮ ಅದರಲ್ಲಿದ್ದ ಒಂದೇ ಕುಟುಂಬದ 28 ಪ್ರಯಾಣಿಕರು ಗಾಯಗೊಂಡ ಘಟನೆ ಖಾನಾಪುರ ತಾಲೂಕಿನ ಗರ್ಲಗುಂಜಿ ಗ್ರಾಮದ ಬಳಿ ಶುಕ್ರವಾರ ಸಂಭವಿಸಿದೆ.

ಅಪಘಾತದಲ್ಲಿ ಗಾಯಗೊಂಡವರೆಲ್ಲ ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ಒಂದೇ ಕುಟುಂಬದವರು. ಗರ್ಲಗುಂಜಿ ಗ್ರಾಮದಲ್ಲಿ ನಿಗದಿಯಾಗಿದ್ದ ಮದುವೆ ನಿಶ್ಚಿತಾರ್ಥದಲ್ಲಿ ಭಾಗವಹಿಸಲು ಬರುತ್ತಿದ್ದ ವೇಳೆ ಅವಘಡ ನಡೆದಿದೆ.

ಗರ್ಲಗುಂಜಿ ಮತ್ತು ರಾಜಹಂಸಗಡ ಗ್ರಾಮಗಳ ನಡುವಿನ ಇಳಿಜಾರಿನಲ್ಲಿ ಸಾಗುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ವೃದ್ಧರು, ಮಕ್ಕಳು ಮತ್ತು ಮಹಿಳೆಯರೂ ಸಹ ಗಾಯಗೊಂಡಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನು ಓದಿ: ಕಮರಿಗೆ ಬಿದ್ದ ಟಾಟಾ ಸುಮೋ: 12 ಜನರ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.