ಚಿಕ್ಕೋಡಿ (ಬೆಳಗಾವಿ) : ಲಾಕ್ಡೌನ್ ವೇಳೆ ಯೋಗಾಭ್ಯಾಸಕ್ಕೆ ಸೇರಿಕೊಂಡಿದ್ದ ಬಾಲಕಿ ಇದೀಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಸಾಧನೆ ಮಾಡಿದ್ದಾಳೆ. ಚಿಕ್ಕೋಡಿ ತಾಲೂಕಿನ ಚಂದೂರ ಗ್ರಾಮದ 11 ವರ್ಷದ ಸಾನ್ವಿ ಯೋಗದಲ್ಲಿ ಸಾಧನೆ ಮಾಡಿ ಪೋಷಕರಿಗೆ ಕೀರ್ತಿ ತಂದಿದ್ದಾಳೆ.
ಲಾಕ್ಡೌನ್ ವೇಳೆ ಚಂದೂರ ಗ್ರಾಮದ ಕಾರ್ತಿಕ ಮಗದುಮ್ಮ ಅನ್ನೋ ಯೋಗ ಶಿಕ್ಷಕರ ಹತ್ತಿರ ಯೋಗಭ್ಯಾಸಕ್ಕೆ ಸೇರಿಕೊಂಡಿದ್ದ ಬಾಲಕಿ ಬಳಿಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಇದೀಗ ರಾಷ್ಟ್ರಮಟ್ಟದಲ್ಲಿ ಮಿಂಚಲು ರೆಡಿಯಾಗಿದ್ದಾಳೆ.
ಇತ್ತೀಚೆಗೆ ಮಹಾರಾಷ್ಟ್ರದ ರತ್ನಗಿರಿಯಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಯೋಗಾಸನದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ರತ್ನಗಿರಿಯಲ್ಲಿ ನಡೆದ ಯೋಗಾಸನದ ಸ್ಪರ್ಧೆಯಲ್ಲಿ ರುಚಿಕಾ ಆಸನ, ಸರ್ವಾಂಗೀಣ ಆಸನ, ವ್ಯಾಘ್ರಾಸನ ಸೇರಿ ವಿವಿಧ ಆಸನಗಳನ್ನ ಪ್ರದರ್ಶಿಸಿ ರಾಷ್ಟಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.