ETV Bharat / state

ಯುವರಾಜನ ಬ್ಯಾಂಕ್​ ಖಾತೆಯಿಂದ ಸ್ಯಾಂಡಲ್​ವುಡ್​ ಸ್ವೀಟಿ ಖಾತೆಗೆ 1 ಕೋಟಿ ರೂ. ವರ್ಗಾವಣೆ..!?

ಸ್ಯಾಂಡಲ್ ವುಡ್ ನಟಿ ಹಾಗೂ ನಿರ್ಮಾಪಕಿ ರಾಧಿಕಾ‌ ಕುಮಾರಸ್ವಾಮಿಗೆ ಬ್ಯಾಂಕ್ ಖಾತೆಗೆ ಯುವರಾಜ್ ಒಂದು ಕೋಟಿ ಹಣ ವರ್ಗಾಯಿಸಿದ್ದಾನೆ ಎಂಬುದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.

Yuvraj
ಯುವರಾಜ್
author img

By

Published : Jan 6, 2021, 10:38 AM IST

ಬೆಂಗಳೂರು: ಕೋಟ್ಯಂತರ ರೂಪಾಯಿ ವಂಚನೆ ಆರೋಪದಡಿ ಬಂಧಿತನಾಗಿರುವ ಆರೋಪಿ ಯುವರಾಜನ ಮೋಸದ ಜಾಲ ಬಗೆದಷ್ಟು ಬಯಲಾಗುತ್ತಿದೆ. ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ನಿವೃತ್ತ ಜಡ್ಜ್ ಸೇರಿದಂತೆ ವಿವಿಧ ವರ್ಗದ ಜನರನ್ನು ವಂಚಿಸುತ್ತಿದ್ದ ವಂಚಕ ಇದೀಗ ಖ್ಯಾತ ನಟಿ ಬ್ಯಾಂಕ್ ಖಾತೆಗೆ ಕೋಟ್ಯಂತರ ರೂಪಾಯಿ ಹಣ ಹಾಕಿರುವ ಆರೋಪ ಕೇಳಿ ಬಂದಿದೆ‌.

ಸ್ಯಾಂಡಲ್ ವುಡ್ ನಟಿ ಹಾಗೂ ನಿರ್ಮಾಪಕಿ ರಾಧಿಕಾ‌ ಕುಮಾರಸ್ವಾಮಿಗೆ ಬ್ಯಾಂಕ್ ಖಾತೆಗೆ ಯುವರಾಜ್ ಒಂದು ಕೋಟಿ ಹಣ ವರ್ಗಾಯಿಸಿದ್ದಾನೆ ಎಂಬುದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ಸಿನಿಮಾ ನಿರ್ಮಾಣ, ವ್ಯವಹಾರಿಕ ದೃಷ್ಟಿಕೋನದಿಂದ ಹಣ ವರ್ಗಾವಣೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ‌. ಪರಿಶೀಲನೆ ಬಳಿಕ ರಾಧಿಕಾ ಕುಮಾರಸ್ವಾಮಿ ಅವರನ್ನು ವಿಚಾರಣೆ ಕರೆಯುವ ಸಾಧ್ಯತೆಯಿದೆ‌.‌ ಈ ಮೂಲಕ ಯುವರಾಜ್ ವಂಚನೆ ಪ್ರಕರಣ ರಾಧಿಕಾಗೆ ಸಂಕಷ್ಟ ಎದುರಾಗಲಿದೆಯಾ ಎಂಬ ಪ್ರಶ್ನೆ ಮೂಡಿದೆ.

ಈಗಾಗಲೇ ರಾಧಿಕಾ ಸಹೋದರ ರವಿರಾಜ್​​ನನ್ನು ಸಿಸಿಬಿ ವಿಚಾರಣೆ ನಡೆಸಿದೆ‌. ಯುವರಾಜ್ ಮೂಲತಃ ಶಿವಮೊಗ್ಗದವನಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ. ‌ತಾನು ಆರ್ ಎಸ್ ಎಸ್ ನಲ್ಲಿ ಟಾಪ್ ಲೀಡರ್ ಎಂದು ಬಿಂಬಿಸಿಕೊಳ್ಳುತಿದ್ದ. ಇದಕ್ಕಾಗಿ‌ ಆರ್ ಎಸ್ ಎಸ್ ಹಾಗೂ ಬಿಜೆಪಿ ಹಿರಿಯ ನಾಯಕರ ರೀತಿಯಲ್ಲೇ ವೇಷಭೂಷಣ ಮಾಡಿಕೊಳ್ಳುತಿದ್ದ. ಎಲ್ಲರೂ ನನಗೆ ಪರಿಚಯವಿದ್ದಾರೆ, ನಾವು ಅವರ ಬಳಿ ಕೆಲಸ ಮಾಡಿಸಿಕೊಡುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ.

ಓದಿ : ಬಿಜೆಪಿ ನಾಯಕರ ಹೆಸರು ಹೇಳಿಕೊಂಡು ದೋಖಾ : ಸದ್ಯ ಸಿಸಿಬಿ ಖೆಡ್ಡಾಕ್ಕೆ ಬಿದ್ದ ಆಸಾಮಿ

ವಿಮಾನ ಮಾರ್ಗವಾಗಿ ಅತಿ ಹೆಚ್ಚು ಬೆಂಗಳೂರು -ದೆಹಲಿ ನಡುವೆ ಸಂಚರಿಸುವ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಪರಿಚಯಿಸಿಕೊಂಡು ತಾನು ಪ್ರಭಾವಿ ಎಂದು ನಂಬಿಸುತ್ತಿದ್ದ. ನಂಬಿಕೆ ಗಳಿಸಿದ ಬಳಿಕ ಸರ್ಕಾರದ ಮಟ್ಟದಲ್ಲಿ ಕೆಲಸ ಕಾರ್ಯ ಮಾಡಿಕೊಡುತೇನೆ ಎಂದು ವಂಚಿಸುತಿದ್ದ. ಅದೇ ರೀತಿ ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳಿಗೆ ಹೇಳುವ ಜಾಗಕ್ಕೆ ಪೋಸ್ಟಿಂಗ್ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡುತ್ತಿದ್ದ. ವರ್ಗಾವಣೆ ಮಾಡಿಸದೇ, ಹಣವನ್ನೂ ನೀಡದೇ ಸತಾಯಿಸುತ್ತಿದ್ದ. ಕೆಲ ರಾಜಕಾರಣಿಗಳಿಗೆ ನಿಗಮ ಮಂಡಳಿ ಕೊಡಿಸುತ್ತೇನೆ ಎಂದು ನಂಬಿಸಿ ಹಣ ವಂಚಿಸಿದ್ದ ಎಂಬುವುದು ವಿಚಾರಣೆ ವೇಳೆ ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.