ETV Bharat / state

ಸ್ಯಾಂಟ್ರೋ ರವಿ ವಿರುದ್ಧ ಪ್ರತಿಭಟನೆ: ಸ್ಯಾಂಟ್ರೋ ಕಾರು ತಂದು ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ - ಈಟಿವಿ ಭಾರತ ಕನ್ನಡ

ಯುವತಿ ಮೇಲೆ ಅತ್ಯಾಚಾರ ಆರೋಪ - ಸ್ಯಾಂಟ್ರೋ ರವಿ ವಿರುದ್ಧ ಯುವ ಕಾಂಗ್ರೆಸ್​ ಪ್ರತಿಭಟನೆ - ಸ್ಯಾಂಟ್ರೋ ಕಾರು ತಂದು ವಿಭಿನ್ನ ಪ್ರತಿಭಟನೆ

youth-congress-protest-by-bringing-santro-car
ಸ್ಯಾಂಟ್ರೋ ರವಿ ವಿರುದ್ಧ ಪ್ರತಿಭಟನೆ : ಸ್ಯಾಂಟ್ರೋ ಕಾರು ತಂದು ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್
author img

By

Published : Jan 12, 2023, 6:25 PM IST

ಸ್ಯಾಂಟ್ರೋ ರವಿ ವಿರುದ್ಧ ಪ್ರತಿಭಟನೆ : ಸ್ಯಾಂಟ್ರೋ ಕಾರು ತಂದು ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್

ಬೆಂಗಳೂರು : ಸ್ಯಾಂಟ್ರೋ ರವಿಯ ಬೆಂಬಲಕ್ಕೆ ಬಿಜೆಪಿ ಸರ್ಕಾರ ನಿಂತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಪ್ರತಿಭಟನೆಗೆ ಸ್ಯಾಂಟ್ರೋ ಕಾರು ತರಿಸಿದ ಕಾಂಗ್ರೆಸ್ ಕಾರ್ಯಕರ್ತರು ಅದರ ಮುಂದೆ ನಿಂತು ಪ್ರತಿಭಟನೆ ನಡೆಸಿದರು. ಈ ವೇಳೆ, ಸ್ಯಾಂಟ್ರೋ ಕಾರಿನ ಮೇಲೆ ಸ್ಯಾಂಟ್ರೋ ರವಿ ಮುಖವಾಡ ಧರಿಸಿದ ವ್ಯಕ್ತಿಯನ್ನು ಕೂರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು. ಯುವ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಸ್ ಮನೋಹರ್, ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿರುವುದು ಇಡಿ ದೇಶಕ್ಕೆ ಗೊತ್ತಿರುವ ವಿಚಾರ. ಆದರೆ, ಈಗ ವೇಶ್ಯಾವಾಟಿಕೆ, ವರ್ಗಾವಣೆ ಇಂತಹ ದಂಧೆಗಳಲ್ಲಿ ಭಾಗಿಯಾಗಿರುವ ಪಿಂಪ್ ರವಿಯನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ. ಇಂತಹ ಭ್ರಷ್ಟಾಚಾರದ ಸರ್ಕಾರ ತೊಲಗಬೇಕು ಎಂದು ಇಡೀ ರಾಜ್ಯವೇ ಒತ್ತಾಯಿಸುತ್ತಿದೆ. ಬಿಜೆಪಿ ಯಾವ ಮಟ್ಟಕ್ಕೆ ಬಂದಿದೆ ಎಂದರೆ ಸ್ಯಾಂಟ್ರೋ ರವಿ ನಾನೇ ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನೆ. ಆದರೂ ಅವನನ್ನು ಬಂಧಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಸ್ಯಾಂಟ್ರೋ ರವಿ ಬಂಧಿಸುವಂತೆ ನಾವು ಪೊಲೀಸರಿಗೆ, ರಾಜ್ಯಪಾಲರಿಗೆ ದೂರು ಕೊಟ್ಟಿದ್ದೇವೆ. ಮೂರು ಬಿಟ್ಟ ಪಕ್ಷ ಯಾವುದಾದರೂ ಇದ್ದರೆ, ಅದು ಬಿಜೆಪಿ ಪಕ್ಷ ಎಂದು ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದರು. ಪ್ರಧಾನಿ‌ ಮೋದಿ ಅವರು ರಾಜ್ಯಕ್ಕೆ ಬಂದಿದ್ದಾರೆ. ಅವರನ್ನು ಸ್ವಾಗತ ಕೊರುತ್ತೇವೆ. ಪಿಂಪ್ ಸ್ಯಾಂಟ್ರೋ ರವಿ ಬೆಂಬಲಕ್ಕೆ ರಾಜ್ಯ ಬಿಜೆಪಿ ನಾಯಕರು ನಿಂತಿದ್ದಾರೆ. ಇಂತವರನ್ನು ಸರ್ಕಾರದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಸ್ಯಾಂಟ್ರೋ ರವಿಗೆ ಬಿಜೆಪಿ ನಾಯಕರು ಜೊತೆ ಸಂಪರ್ಕ ಇದೆ ಎಂದು ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಆರೋಪಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಇದನ್ನು ಅಲ್ಲಗಳಿರುವ ಬಿಜೆಪಿ ಸರ್ಕಾರ ರವಿ ಬಂಧನಕ್ಕೆ ಸೂಚಿಸಿದೆ. ಪೊಲೀಸರು ವಿವಿಧ ತಂಡಗಳಾಗಿ ಸ್ಯಾಂಟ್ರೋ ರವಿ ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ. ಆಪರೇಷನ್ ಕಮಲ ಸಂದರ್ಭದಲ್ಲಿ ಮುಂಬೈಗೆ ತೆರಳಿದ್ದ ನಾಯಕರ ಜೊತೆ ಈತ ನಿಕಟ ಸಂಪರ್ಕ ಹೊಂದಿದ್ದ ಎಂದು ಆರೋಪಿಸಲಾಗುತ್ತಿದೆ.

ಇದೇ ಸಂಕ್ರಾಂತಿ ಸಮಯದಲ್ಲಿ ಮೂವರು ಸಚಿವರ ವಿಡಿಯೋ ಸಹ ಬಿಡುಗಡೆಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಒಟ್ಟಾರೆ ರಾಜ್ಯ ಬಿಜೆಪಿ ನಾಯಕರ ಜೊತೆ ಸ್ಯಾಂಟ್ರೋ ರವಿ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಆತನ ಬಂಧನದ ನಂತರವೇ ನಿಜ ಸಂಗತಿ ತಿಳಿದು ಬರಬೇಕಿದೆ.ಈವಾಗಲೇ ಕಾಂಗ್ರೆಸ್ ನಾಯಕರು ರವಿ ಬಂಧನಕ್ಕೆ ಒತ್ತಾಯಿಸುತ್ತಿದ್ದಾರೆ.

ಸ್ಯಾಂಟ್ರೋ ರವಿ ಯಾರು ? : ಯುವತಿಯೊಬ್ಬಳಿಗೆ ಕೆಲಸ ನೀಡುವ ಭರವಸೆ ನೀಡಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ಬಳಿಕ ಬಲವಂತವಾಗಿ ವಿವಾಹವಾಗಿ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಯುವತಿಯೊಬ್ಬರು ಕೆಲಸಕ್ಕೆ ಬಂದಾಗ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಆಕೆಗೆ ನೀಡಿ ಅತ್ಯಾಚಾರ ಎಸಗಿದ್ದ. ಬಳಿಕ ಈ ಚಿತ್ರಗಳನ್ನು ಸೆರೆ ಹಿಡಿದು ರವಿ ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ಆರೋಪಿಸಿ ಯುವತಿ ದೂರು ನೀಡಿದ್ದರು. ಸದ್ಯ ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಕೆಲಸದ ಆಮಿಷಯೊಡ್ಡಿ ಯುವತಿ ಮೇಲೆ ಅತ್ಯಾಚಾರ.. ಆರೋಪಿಗೆ ಬಿಜೆಪಿ ಸಚಿವರ ಸಂಪರ್ಕ ಇದೆ ಎಂದ ಹೆಚ್​ಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.