ಬೆಂಗಳೂರು: ಕೋಡಿಂಗ್ ನಮ್ಮ ಜೀವನವನ್ನು ಮುನ್ನಡೆಸಲು ಮತ್ತು ಸರಾಗಗೊಳಿಸುವ ಆಧುನಿಕ ದಿನದ ಟೂಲ್ಕಿಟ್ ಆಗಿ ಮಾರ್ಪಟ್ಟಿದೆ. ಮೀಮ್‌ಗಳನ್ನು ಹಂಚಿಕೊಳ್ಳುವುದು, ಚಲನಚಿತ್ರ ಟಿಕೆಟ್‌ಗಳನ್ನು ಕಾಯ್ದಿರಿಸುವುದು ಸೇರಿದಂತೆ ಕೋಡಿಂಗ್ ಮೂಲಕ ಬಹುತೇಕ ಈಗ ಎಲ್ಲವೂ ಸಾಧ್ಯವಾಗಿದೆ. ಇಂದಿನ ಮಕ್ಕಳಿಗೂ ಸಹ ಕೊಡಿಂಗ್ ತಿಳಿದಿದೆ. ಈ ಕಾರಣಕ್ಕಾಗಿಯೇ ಕೋಡಿಂಗ್ ಎನ್ನುವುದು ದೇಶಾದ್ಯಂತದ ತರಗತಿಗಳಲ್ಲಿ ಒಂದು ಬಝ್‌ವರ್ಡ್ ಆಗಿದೆ. ಅನೇಕ ವಿದ್ಯಾರ್ಥಿಗಳು ಇಂಗ್ಲಿಷ್, ಗಣಿತ ಮತ್ತು ವಿಜ್ಞಾನದಂತಹ ವಿಷಯಗಳ ಜೊತೆಗೆ ತಂತ್ರಜ್ಞಾನದ ಶಿಕ್ಷಣ ಅಗತ್ಯವೆಂದು ಪರಿಗಣಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ನಗರದ ಖಾಸಗಿ ಶಾಲೆಯ ಇಬ್ಬರು ಮಕ್ಕಳಾದ ನಿರಂತ್ ಮತ್ತು ಹರ್ಷವರ್ಧನ್ ಆರೋಗ್ಯ ಕ್ಷೇತ್ರಕ್ಕೆ ಒಂದು ನವೀನ ಸಾರಿಗೆ ಮಾದರಿಯನ್ನು ಸೃಷ್ಟಿಸಿದ್ದಾರೆ. ಇಬ್ಬರ ಕೋಡಿಂಗ್ ಸಾಧನೆ ಸರಿಯಾಗಿ ಬಳಸಿಕೊಂಡರೆ ಆರೋಗ್ಯ ಕ್ಷೇತ್ರಕ್ಕೆ ಸಹಾಯಕವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಆರೋಗ್ಯ ಕ್ಷೇತ್ರದಲ್ಲಿ ರೂಪುಗೊಳ್ಳಲಿರುವ ಉಜ್ವಲ ಭವಿಷ್ಯ: ನಿರಂತ್ ಮತ್ತು ಹರ್ಷವರ್ಧನ್ರ ಆವಿಷ್ಕಾರಕ ಕೋಡಿಂಗ್ ಬಳಸಿದರೆ ಆರೋಗ್ಯ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯ ರೂಪುಗೊಳ್ಳಲಿದೆ. ಈ ಇಬ್ಬರು ಮಕ್ಕಳು ಕೋವಿಡ್ ಸಮಯದಲ್ಲಿ ಉಂಟಾಗಿದ್ದ ಸಮಸ್ಯೆ/ಕಷ್ಟಗಳನ್ನು ಗಣನೆಗೆ ತೆಗೆದುಕೊಂಡು ವಿನೂತನ ಮಾದರಿಯೊಂದನ್ನು ರಚಿಸಿದ್ದಾರೆ. ಆಸ್ಪತ್ರೆಗಳಲ್ಲಿನ ಸಿಬ್ಬಂದಿ ಕೊರತೆ ಮತ್ತು ತುರ್ತು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್‌ಗಳು ಲಭ್ಯವಿಲ್ಲದಿರುವುದು ಸೇರಿದಂತೆ ಎಲ್ಲದಕ್ಕೂ ಪರಿಹಾರ ನೀಡಿದ್ದಾರೆ.
ಮಾನವ ಹಸ್ತಕ್ಷೇಪವಿಲ್ಲ: ನಗರದ ಗೀತಾಂಜಲಿ ವಿದ್ಯಾಲಯದ 7ನೇ ತರಗತಿಯ 13 ವರ್ಷದ ಹರ್ಷವರ್ಧನ್ ಮತ್ತು ಫ್ರೀಡಂ ಇಂಟರ್ ನ್ಯಾಷನಲ್ ಸ್ಕೂಲ್ ನ 4ನೇ ತರಗತಿಯ ಬಿ ನಿರಂತ್ ಇವರಿಬ್ಬರೂ ಎಸ್.ಪಿ ರೋಬೋಟಿಕ್ ವರ್ಕ್ಸ್ನ ವಿದ್ಯಾರ್ಥಿಗಳಾಗಿದ್ದಾರೆ. ಇಬ್ಬರೂ ರೋಬೋಟಿಕ್ಸ್ನಲ್ಲಿ ಪರಿಣತಿ ಪಡೆದು ತುರ್ತು ಬಳಕೆಗಾಗಿ ನವೀನ ಸಾರಿಗೆ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದಾರೆ. ವೈದ್ಯಕೀಯ ಕಾರ್ಟ್ಗಳನ್ನು ಮಾನವ ಹಸ್ತಕ್ಷೇಪವಿಲ್ಲದೇ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಮುಂದಾಗಿದ್ದಾರೆ.
ಹಲವು ಸಮಸ್ಯೆಗಳಿಗೆ ಪರಿಹಾರ: ಹರ್ಷವರ್ಧನ್ ರೋಬೋಟಿಕ್ಸ್ ಮೇಕರ್ ಲ್ಯಾಬ್ ನಲ್ಲಿ ವೈದ್ಯಕೀಯ ಬೆಂಬಲಿತ ಸಾರಿಗೆ ರೋಬೋಟ್ನ್ನು ರಚಿಸಿದ್ದು, ಕೋವಿಡ್ ಸಂದರ್ಭದಲ್ಲಿ ಕಳೆದ ಎರಡು ವರ್ಷಗಳಲ್ಲಿ ಅನುಭವಿಸಿದ ಹಲವಾರು ಸಮಸ್ಯೆಗಳಿಗೆ ಪರಿಹಾರದ ದಾರಿ ದೊರೆಕಿದಂತಾಗಿದೆ.
ಓದಿ: ಹರ್ ಘರ್ ದಸ್ತಕ್ 2.0 ಪ್ರಾರಂಭಿಸಿದ ಕೇಂದ್ರ ಆರೋಗ್ಯ ಸಚಿವಾಲಯ
ಸ್ವಯಂಚಾಲಿತ ಸಾರಿಗೆ ವ್ಯವಸ್ಥೆ: ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಪ್ರತಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆಯ ಪರಿಣಾಮಗಳನ್ನು ನಾನು ನೋಡಿದ್ದೇನೆ. ಯಾವುದೇ ಬೆಂಬಲವಿಲ್ಲದೇ ಹೆಣಗಾಡುತ್ತಿದ್ದದ್ದನ್ನು ಕಂಡೀದ್ದೀನಿ. ಹೀಗಾಗಿ ವೈದ್ಯರು ಮತ್ತು ದಾದಿಯರಿಗೆ ಸಹಾಯ ಮಾಡುವ ರೋಬೋಟ್ ರಚಿಸಲು ಮುಂದಾದೆವು. ರೋಗಿಗಳನ್ನು ನೋಡಿಕೊಳ್ಳುವಾಗ ಅತ್ಯಗತ್ಯವಾದ ವೈದ್ಯಕೀಯ ವಸ್ತುಗಳನ್ನು ಎಳೆಯುವುದು ಮತ್ತು ತಳ್ಳುವುದರಿಂದ ಸಮಯವನ್ನು ವ್ಯರ್ಥವಾಗುತ್ತಿರುವ ಕುರಿತು ಗಮನಿಸಿದೆವು. ಹೀಗಾಗಿ ಸ್ವಯಂಚಾಲಿತವಾಗಿ ಜನರನ್ನು ಹಿಂಬಾಲಿಸುವ ಸಾರಿಗೆ ವ್ಯವಸ್ಥೆ ರಚಿಸಿದ್ದೇವೆ ಎಂದು ಹರ್ಷವರ್ಧನ್ ಹೇಳಿದ್ದಾರೆ.
ಪ್ರತ್ಯೇಕ ಕೆಲಸಗಾರನ ಅಗತ್ಯವಿಲ್ಲ: ಈ ವ್ಯವಸ್ಥೆಯಲ್ಲಿ ರೋಬೋಟ್ ನರ್ಸ್ ಹೋದಲ್ಲೆಲ್ಲಾ ಹಿಂಬಾಲಿಸುವುದರಿಂದ ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ಅಗತ್ಯವಿಲ್ಲ ಎಂದು 7ನೇ ತರಗತಿ ಓದುತ್ತಿರುವ ಹರ್ಷವರ್ಧನ್ ಹೇಳಿದ್ದಾರೆ.
ಸಾಕಷ್ಟು ಜೀವಗಳನ್ನು ಉಳಿಸಬಹುದು: ಈ ಯೋಜನೆಯಿಂದ ರೋಗಿಗಳಿಗೆ ಸಹಾಯ ಮಾಡಲು ವೈದ್ಯರು ಮತ್ತು ದಾದಿಯರನ್ನು ಉತ್ತಮವಾಗಿ ಬಳಸಿಕೊಳ್ಳುವುದು. ಕೋವಿಡ್ ವಿಪತ್ತಿನ ಸಮಯದಲ್ಲಿ ಚಿಕಿತ್ಸೆ ನೀಡಲು ಸಿಬ್ಬಂದಿಯ ಅಲಭ್ಯತೆಯಿಂದಾಗಿ ಉಂಟಾಗಬಹುದಾದ ಸಾಕಷ್ಟು ಜೀವಗಳನ್ನು ಉಳಿಸಬಹುದು ಎಂದು ಹೇಳಿದ್ದಾರೆ.

ರೋಗಿಗಳನ್ನು ಆಸ್ಪತ್ರೆಗೆ ತಲುಪಿಸುವ ವ್ಯವಸ್ಥೆ: ಆವಿಷ್ಕಾರದ ಕುರಿತು ಮಾತನಾಡಿದ ನಿರಂತ್, ನನ್ನ ಗಮನವು ತುರ್ತು ರಕ್ಷಣಾ ಘಟಕದ ಮೇಲೆ ಇತ್ತು. ಎಲ್ಲರಿಗೂ ತಿಳಿದಿರುವಂತೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದ ಸಾರಿಗೆ ವ್ಯವಸ್ಥೆ ಹೆಚ್ಚಿನ ಬೇಡಿಕೆಯನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದೇವೆ.
ಶಾಲೆಗಳು ಮತ್ತು ಆಸ್ಪತ್ರೆಗಗಳಿಗೆ ಸಾರಿಗೆ ವ್ಯವಸ್ಥೆ ಬಹಳ ಮುಖ್ಯ. ಈ ಹಿನ್ನೆಲೆ ನಾನು ಆಸ್ಪತ್ರೆಯ ಸಾರಿಗೆ ವ್ಯವಸ್ಥೆಯ ಸಿಮ್ಯುಲೇಶನ್ ಅನ್ನು ರಚಿಸಿದ್ದು, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳನ್ನು ಆಯ್ಕೆಮಾಡಿಕೊಂಡು ತುರ್ತು ಸಂದರ್ಭಗಳಲ್ಲಿ ಆಯಾ ಆಸ್ಪತ್ರೆಗಳಲ್ಲಿ ತಲುಪಿಸುವ ವ್ಯವಸ್ಥೆ ಮಾಡಿದ್ದೇನೆ. ರಸ್ತೆಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಯಾವುದೇ ಪ್ರಾಣಹಾನಿಯಾಗದಂತೆ ನೋಡಿಕೊಳ್ಳಲು ಬಯಸಿದ್ದೇನೆ ಎಂದು ನಿರಂತ್ ಹೇಳಿದ್ದಾರೆ.

ಕೋಡಿಂಗ್ ವಿಡಿಯೋ ಗೇಮ್ ಆಡಿದಂತೆ: ಮುಂದುವರೆದು ಮಾತನಾಡಿದ ನಿರಂತ್, ಆರಂಭದಲ್ಲಿ ರೋಬೋಟಿಕ್ಸ್ನಲ್ಲಿ ಎಲ್ಲವೂ ಯಾಂತ್ರಿಕ ವಿಷಯಗಳ ಬಗ್ಗೆ ಎಂದು ಭಾವಿಸಿದ್ದೆ. ಆದರೆ, ಇದು ಎಲೆಕ್ಟ್ರಾನಿಕ್ಸ್, ಪ್ರೋಗ್ರಾಮಿಂಗ್ ಮತ್ತು ಪ್ರಾಜೆಕ್ಟ್ ಪ್ಲಾನಿಂಗ್ನ ಪರಿಣತಿಯಾಗಿದೆ. ಆದರೆ ಕೋಡಿಂಗ್ ಕಲಿಕೆಯು ನನಗೆ ತುಂಬಾ ಆಸಕ್ತಿದಾಯಕ ಎನ್ನಿಸಿದೆ. ಒಂದು ರೀತಿಯಯಲ್ಲಿ ವೀಡಿಯೊ ಗೇಮ್ ಆಡಿದಂತೆ. ನಾನು ಈಗ ಸಾಕಷ್ಟು ಪ್ರೋಗ್ರಾಮಿಂಗ್ ಕಲಿತಿದ್ದೇನೆ. ಕೋಡ್ನಲ್ಲಿ ತಪ್ಪುಗಳನ್ನು ಕಂಡುಹಿಡಿಯಲು ಮತ್ತು ಅದನ್ನು ಸರಿಪಡಿಸಲು ಕಲಿತಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.