ETV Bharat / state

ಮತ್ತೆ ಬಿಜೆಪಿ ಸರ್ಕಾರ ರಚನೆಯ ಸುಳಿವು ಕೊಟ್ಟರಾ ಯಡಿಯೂರಪ್ಪ?

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತೆ ಆಪರೇಷನ್​ ಕಮಲಕ್ಕೆ ಕೈ ಹಾಕಿದ್ರಾ? ಇಂದು ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಆಡಿದ ಮಾತುಗಳು ಇಂತಹದ್ದೊಂದು ಸುಳಿವು ನೀಡಿದೆ.

ಸಂಗ್ರಹ ಚಿತ್ರ
author img

By

Published : Jun 29, 2019, 4:37 PM IST

ಬೆಂಗಳೂರು: ಯಾವಾಗ ಬೇಕಾದ್ರೂ ಈ ಸರ್ಕಾರ ಬೀಳಬಹುದು. ನಾವಾಗಿ ಅವರ ಶಾಸಕರನ್ನು ಕರೀತಿಲ್ಲ. ಅವರಾಗಿ ಬಂದರೆ ನಾವು ಜವಾಬ್ದಾರರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮತ್ತೆ ತಮ್ಮ ಸರ್ಕಾರ ರಚನೆಯ ಸುಳಿವು ಕೊಟ್ಟಿದ್ದಾರೆ.

ವಿಜಯನಗರದಲ್ಲಿ ನಡೆದ ಲೋಕಸಭಾ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ದೊಡ್ಡ ಅಂತರದಿಂದ ಗೆದ್ದಿದ್ದೇವೆ. ಒಂದೇ ಒಂದು ಕೊರತೆ ಇದೆ. ಇಂಥ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಬೇಕಿತ್ತು ಅನ್ನೋ ಕೊರಗು ಅದು. ಬಿಜೆಪಿ ಸರ್ಕಾರ ರಚನೆ ಯಾವಾಗ ಅಂತ ಜನ ಹೋದಲ್ಲಿ ಬಂದಲ್ಲಿ ಕೇಳುತ್ತಿದ್ದಾರೆ. ಸರ್ಕಾರ ರಚನೆಗೆ ಕಾಲ ಕೂಡಿ ಬರಬೇಕು ಎಂದು ಸೂಚ್ಯವಾಗಿ ತಿಳಿಸಿದರು.

ರಾಜ್ಯದಲ್ಲಿ ಚುನಾವಣೆ ಯಾವಾಗ ಬೇಕಾದರೂ ಬರಲಿ. ಬೆಂಗಳೂರಿನಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ . ಚುನಾವಣೆ ಯಾವಾಗಾದರೂ ಬರಲಿ, ನಾವು ಬೆಂಗಳೂರಿನಲ್ಲಿ 22 ಸ್ಥಾನ ಗೆಲ್ಲಬೇಕು. ಸಂಸದರು ಅದಕ್ಕೆ ಪಣ ತೊಡಬೇಕು ಎಂದು ಕರೆ ನೀಡಿದರು.

ಸಿಎಂ ಅಮೆರಿಕ ಪ್ರವಾಸಕ್ಕೆ ಕಿಡಿ:

ಇದೇ ವೇಳೆ, ಮುಖ್ಯಮಂತ್ರಿಗಳ ಅಮೆರಿಕ ಪ್ರವಾಸಕ್ಕೆ ಯಡಿಯೂರಪ್ಪ, ವಿರೋಧ ವ್ಯಕ್ತಪಡಿಸಿದರು. ಇಂಥ ಸಂದರ್ಭದಲ್ಲಿ ವಿದೇಶ ಪ್ರವಾಸ ಬೇಕಿತ್ತಾ? ನಾನು ವಿದೇಶ ಪ್ರವಾಸ ಬೇಡ ಅನ್ನಲ್ಲ. ಬರ ಇರುವಾಗ ವಿದೇಶ ಪ್ರವಾಸ ಬೇಡ. ಗ್ರಾಮೀಣ ಭಾಗದಲ್ಲಿ ಜನ ಬದುಕಿದ್ದಾರಾ ಇಲ್ವಾ ಅಂತ ನೋಡುವುದಕ್ಕೆ ಮುಖ್ಯಮಂತ್ರಿಗೆ, ಸಚಿವರಿಗೆ ಪುರುಸೊತ್ತಿಲ್ಲ ಎಂದು ಕಿಡಿ‌ಕಾರಿದರು.

ಕೆಲಸ ನಮ್ಮದು ವೋಟು ಬಿಜೆಪಿಗೆ ಅಂತ ಸಿಎಂ ಹೇಳುತ್ತಾರೆ. ಇದು ಸೊಕ್ಕು, ಧಿಮಾಕಿನ ಮಾತು. ಮುಂದಿನ ದಿನಗಳಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ಕರ್ನಾಟಕದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಅಧಿಕಾರ ಆದ್ರೆ ಮಾಡಿ ಇಲ್ಲ ಬಿಟ್ಟು ಹೋಗಿ:

ದೇವೇಗೌಡರ ಮಧ್ಯಂತರ ಚುನಾವಣೆ ಹೇಳಿಕೆಗೂ ಯಡಿಯೂರಪ್ಪ ಕಿಡಿ ಕಾರಿದರು. ಅವರಾಗಿಯೇ ಮಧ್ಯಂತರ ಚುನಾವಣೆ ಬಗ್ಗೆ ಮಾತಾಡುತ್ತಿದ್ದಾರೆ. ಯಾರಿಗೆ ಬೇಕಿದೆ ಈ ಮಧ್ಯಂತರ ಚುನಾವಣೆ? ಅಧಿಕಾರ ಮಾಡುವುದಾದರೆ ಮಾಡಿ, ಇಲ್ಲ ಬಿಟ್ಟು ಹೋಗಿ ಎಂದು ವಾಗ್ದಾಳಿ ನಡೆಸಿದರು.

Intro:BsyBody:KN_BNG_01_GOVERNAMENTFORMATION_BSY_SCRIPT_7201951

ಮತ್ತೆ ಬಿಜೆಪಿ ಸರ್ಕಾರ ರಚನೆಯ ಸುಳಿವು ಕೊಟ್ಟರಾ ಯಡಿಯೂರಪ್ಪ?

ಬೆಂಗಳೂರು: ಯಾವಾಗ ಬೇಕಾದ್ರೂ ಈ ಸರ್ಕಾರ ಬೀಳಬಹುದು. ನಾವಾಗಿ ಅವರ ಶಾಸಕರನ್ನು ಕರೀತಿಲ್ಲ. ಅವರಾಗಿ ಬಂದರೆ ನಾವು ಜವಾಬ್ದಾರರಲ್ಲ ಎಂದು ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಿಜೆಪಿ ಸರ್ಕಾರ ರಚನೆಯ ಸುಳಿವು ಕೊಟ್ಟಿದ್ದಾರೆ.

ವಿಜಯನಗರದಲ್ಲಿ ನಡೆದ ಲೋಕಸಭಾ ಸದಸ್ಯರಿಗಾಗಿನ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ದೊಡ್ಡ ಅಂತರದಿಂದ ಗೆದ್ದಿದ್ದೇವೆ. ಒಂದೇ ಒಂದು ಕೊರತೆ ಇದೆ. ಇಂಥ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಬೇಕಿತ್ತು ಅನ್ನೋ ಕೊರಗು ಅದು. ಬಿಜೆಪಿ ಸರ್ಕಾರ ರಚನೆ ಯಾವಾಗ ಅಂತ ಜನ ಹೋದಲ್ಲಿ ಬಂದಲ್ಲಿ ಕೇಳ್ತಿದಾರೆ. ಸರ್ಕಾರ ರಚನೆಗೆ ಕಾಲ ಕೂಡಿ ಬರಬೇಕು ಎಂದು ಸೂಚ್ಯವಾಗಿ ತಿಳಿಸಿದರು.

ರಾಜ್ಯದಲ್ಲಿ ಚುನಾವಣೆ ಯಾವಾಗ ಬೇಕಾದರೂ ಬರಲಿ. ಬೆಂಗಳೂರಿನಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ . ಚುನಾವಣೆ ಯಾವಾಗಾದರಯ ಬರಲಿ, ನಾವು ಬೆಂಗಳೂರಿನಲ್ಲಿ 22 ಸ್ಥಾನ ಗೆಲ್ಲಬೇಕು. ಸಂಸದರು ಅದಕ್ಕೆ ಪಣ ತೊಡಬೇಕು ಎಂದು ಕರೆ ನೀಡಿದರು.

ಸಿಎಂ ಅಮೆರಿಕಾ ಪ್ರವಾಸಕ್ಕೆ ಕಿಡಿ:

ಇದೇ ವೇಳೆ ಯಡಿಯೂರಪ್ಪ ಅವರು, ಸಿಎಂ ಅಮೆರಿಕ ಪ್ರವಾಸಕ್ಕೆ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದರು.

ಇಂಥ ಸಂದರ್ಭದಲ್ಲಿ ವಿದೇಶ ಪ್ರವಾಸ ಬೇಕಿತ್ತಾ?. ನಾನು ವಿದೇಶ ಪ್ರವಾಸ ಬೇಡ ಅನ್ನಲ್ಲ. ಬರ ಇರುವಾಗ ವಿದೇಶ ಪ್ರವಾಸ ಬೇಡ. ಗ್ರಾಮೀಣ ಭಾಗದಲ್ಲಿ ಜನ ಬದುಕಿದ್ದಾರಾ ಇಲ್ವಾ ಅಂತ ನೋಡುವುದಕ್ಕೆ ಸಿಎಂಗೆ, ಸಚಿವರಿಗೆ ಪುರುಸೊತ್ತಿಲ್ಲ ಎಂದು ಕಿಡಿ‌ಕಾರಿದರು.

ಕೆಲಸ ನಮ್ಮದು ಓಟು ಬಿಜೆಪಿಗೆ ಅಂತ ಸಿಎಂ ಹೇಳುತ್ತಾರೆ. ಇದು ಸೊಕ್ಕು ಧಿಮಾಕಿನ ಮಾತು. ಮುಂದಿನ ದಿನಗಳಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸ್ತಾರೆ. ಕರ್ನಾಟಕದಲ್ಲಿ ತುಘಲಕ್ ದರ್ಬಾರ್ ನಡೀತಿದೆ ಎಂದು ವಾಗ್ದಾಳಿ ನಡೆಸಿದರು.

ಅಧಿಕಾರ ಆದ್ರೆ ಮಾಡಿ ಇಲ್ಲಾ ಬಿಟ್ಟು ಹೋಗಿ:

ದೇವೇಗೌಡರ ಮಧ್ಯಂತರ ಚುನಾವಣೆ ಹೇಳಿಕೆಗೂ ಯಡಿಯೂರಪ್ಪ ಕಿಡಿ ಕಾರಿದರು.

ಅದಾಗಲೇ ಮಧ್ಯಂತರ ಚುನಾವಣೆ ಬಗ್ಗೆ ಮಾತಾಡ್ತಾರೆ. ಯಾರಿಗೆ ಬೇಕಿದೆ ಮಧ್ಯಂತರ ಚುನಾವಣೆ?. ಅಧಿಕಾರ ಮಾಡುವುದಕ್ಕೆ ಆದರೆ ಮಾಡಿ. ಇಲ್ಲ ಬಿಟ್ಟು ಹೋಗಿ ಎಂದು ವಾಗ್ದಾಳಿ ನಡೆಸಿದರು.Conclusion:Venkat
ETV Bharat Logo

Copyright © 2024 Ushodaya Enterprises Pvt. Ltd., All Rights Reserved.