ETV Bharat / entertainment

'ಲಕ್ಷ್ಮೀ ನಿವಾಸ' ಧಾರಾವಾಹಿ ನಟ ಈಗ 'ಮಿಸ್ಟರ್​ ರಾಣಿ' ಚಿತ್ರದ ಹೀರೋ(ಯಿನ್) - MR RANI MOVIE TEASER

ತಮ್ಮ ಅಭಿನಯದ ಮೂಲಕ ಮನೆ ಮಾತಾಗಿರುವ ಲಕ್ಷ್ಮೀ ನಿವಾಸ ಧಾರಾವಾಹಿಯ ನಟ ದೀಪಕ್​ ಸುಬ್ರಹ್ಮಣ್ಯ ಅವರು ಮಿಸ್ಟರ್​ ರಾಣಿ ಚಿತ್ರದ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಲು ಸಿದ್ಧವಾಗಿದ್ದಾರೆ.

Mr. Rani Movie Poster
ಮಿಸ್ಟರ್​ ರಾಣಿ ಚಿತ್ರದ ಪೋಸ್ಟರ್​ (ETV Bharat)
author img

By ETV Bharat Karnataka Team

Published : Oct 22, 2024, 10:12 PM IST

Updated : Oct 22, 2024, 10:25 PM IST

ವಿಭಿನ್ನ ಪೋಸ್ಟರ್​ ಮೂಲಕ ಸಖತ್​ ಸುದ್ದಿ ಮಾಡಿದ್ದ 'ಮಿಸ್ಟರ್​ ರಾಣಿ' ಚಿತ್ರದ ಟೀಸರ್​ ಇತ್ತೀಚೆಗೆ ರಿಲೀಸ್​ ಆಗಿದೆ. ಸದ್ಯದ ಕ್ರೈಮ್, ಥ್ರಿಲ್ಲರ್, ಹಾರರ್, ಲವ್ ಸ್ಟೋರಿ ಎಲ್ಲವನ್ನೂ ಬದಿಗಿಟ್ಟು ವಿನೂತನ ಶೈಲಿಯ ಕಾಮಿಡಿ ಎಂಟರ್​ಟೈನರ್ ಚಿತ್ರವನ್ನು 'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಖ್ಯಾತಿಯ ನಿರ್ದೇಶಕ ಮಧುಚಂದ್ರ ಮಾಡಿದ್ದಾರೆ.

ಲಕ್ಷ್ಮಿ ನಿವಾಸ ಸೀರಿಯಲ್​ನಲ್ಲಿ ಜಯಂತ್ ಪಾತ್ರ ಮಾಡಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ದೀಪಕ್ ಸುಬ್ರಹ್ಮಣ್ಯ ಈ ಚಿತ್ರದ ಹೀರೋ(ಯಿನ್). ರಾಣಿ ರೋಲ್ ಮಾಡಿರೋದು ದೀಪಕ್ ಸುಬ್ರಹ್ಮಣ್ಯ ಅಂತ ಗೊತ್ತಾದಾಗ ತುಂಬಾ ಜನ ಶಾಕ್ ಆಗಿದ್ದಾರೆ. ಒಬ್ಬ ಹೊಸ ಹುಡುಗ ಈ ಲೆವೆಲ್​ನಲ್ಲಿ ಹುಡುಗಿ ಥರ ಚೇಂಜ್ ಓವರ್ ಮಾಡೋಕೆ ಸಾಧ್ಯನಾ ಅಂತ ಎಲ್ಲರೂ ಅಚ್ಚರಿಪಟ್ಟಿದ್ದಾರೆ. ರಾಣಿ ಪೋಸ್ಟರ್ ನೋಡಿ ನಮಗೆ ಇನ್ನೊಬ್ಬಳು ಹೀರೋಯಿನ್ ಕಾಂಪಿಟೇಷನ್ ಮಾಡೋಕೆ ಬಂದಳಲ್ಲ ಅಂತ ತುಂಬಾ ಜನ ಹೀರೋಯಿನ್‌ಗಳು ಕೂಡ ಹೊಟ್ಟೆಯುರಿ ಪಟ್ಟುಕೊಂಡಿದ್ದರಂತೆ. ಆದರೆ ಟೀಸರ್ ನೋಡಿ ಅಯ್ಯೋ ರಾಣಿ ಹುಡುಗಿ ಅಲ್ಲ. ಹುಡುಗ ಅಂತ ಗೊತ್ತಾಗಿ ಬೆಸ್ತು ಬಿದ್ದಿದ್ದಾರೆ ಅಂತ ಗಾಸಿಪ್ ಇದೆ.

Mr. Rani Movie Poster
ಮಿಸ್ಟರ್​ ರಾಣಿ ಚಿತ್ರದ ಪೋಸ್ಟರ್​ (ETV Bharat)

ಹೀರೋ ಆಗ್ಬೇಕು ಎಂದು ಸಿನಿಮಾರಂಗಕ್ಕೆ ಬಂದ ಹುಡುಗ ಆಕಸ್ಮಿಕವಾಗಿ ಹೀರೋಯಿನ್ ಆಗಿಬಿಡ್ತಾನೆ ಅನ್ನೋದೇ ಟೀಸರ್​ನಲ್ಲಿ ಹೇಳಿರೋ ಕಥೆ. ಸಿನಿಮಾ ಎಷ್ಟು ಡಿಫರೆಂಟಾಗಿರ್ಬೋದು ಎನ್ನುವುದನ್ನು ಟೀಸರೇ ಹೇಳುತ್ತದೆ. ಇನ್ನು ಟೀಸರ್ ನೋಡಿದರೆ ಚಿತ್ರ ಟೆಕ್ನಿಕಲ್ ಆಗಿ ವಿಭಿನ್ನವಾಗಿ ಮೂಡಿ ಬಂದಿರುವುದು ಎದ್ದು ಕಾಣುತ್ತದೆ. ಟೀಸರ್ ಒಪನಿಂಗ್​ನಲ್ಲಿ ಬರುವ ಅನಿಮೇಷನ್‌ ನೋಡಿದಾಗ ಇದು ಯಾವುದೋ ಹಾಲಿವುಡ್ ಚಿತ್ರವಿರಬೇಕೆಂದು ಅನ್ನಿಸುವುದರಲ್ಲಿ ಸಂಶಯವಿಲ್ಲ.

ಇದೊಂದು ವಿಭಿನ್ನ ರೀತಿಯ ಥಿಯೇಟರ್ ಎಕ್ಸ್​ಪೀರಿಯೆನ್ಸ್ ಕೊಡುವಂತಹ ಚಿತ್ರ ಎನಿಸುತ್ತದೆ. ಕಂಪ್ಲೀಟ್ ಕಾಮಿಡಿ ಪ್ಯಾಕೇಜ್ ಇರುವ ಈ ಚಿತ್ರ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ: ಯಲಾಕುನ್ನಿ ತೆರೆಗಪ್ಪಳಿಸಲು ಕೌಂಟ್​ಡೌನ್​ ಶುರು; ವಜ್ರಮುನಿ ಲುಕ್ ನಲ್ಲಿ ಪ್ರೇಕ್ಷಕರ ಮನ ಗೆಲ್ಲಲು ಕೋಮಲ್ ಸಜ್ಜು

Last Updated : Oct 22, 2024, 10:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.