ETV Bharat / technology

ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಜೀಪ್ ಮೆರಿಡಿಯನ್ SUV: ಇದರ ಬೆಲೆ, ವೈಶಿಷ್ಟ್ಯಗಳೇನು?

2025 Jeep Meridian: ಜೀಪ್ ಇಂಡಿಯಾ ತನ್ನ ಅಪ್​ಡೇಟ್ಡ್​ 2025 ಜೀಪ್ ಮೆರಿಡಿಯನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದಕ್ಕೆ ಹಲವು ಹೊಸ ವೈಶಿಷ್ಟ್ಯಗಳನ್ನು ನೀಡಲಾಗಿದ್ದು, ಈ ಜೀಪ್​ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

2025 JEEP MERIDIAN SPECIFICATIONS  2025 JEEP MERIDIAN  2025 JEEP MERIDIAN PRICE
ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಜೀಪ್ ಮೆರಿಡಿಯನ್ SUV (Jeep India)
author img

By ETV Bharat Tech Team

Published : 3 hours ago

2025 Jeep Meridian: ಜೀಪ್ ಇಂಡಿಯಾ ತನ್ನ 3 - ಸಾಲಿನ ಜೀಪ್ ಮೆರಿಡಿಯನ್ ಎಸ್‌ಯುವಿಯ ಮಿಡ್-ಲೈಫ್ ಅಪ್​ಡೇಟ್​ ಬಿಡುಗಡೆ ಮಾಡಿದೆ. ಇದನ್ನು 24.99 ಲಕ್ಷ ರೂ.(ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಅಪ್​ಡೇಟ್ಡ್​ ಜೀಪ್ ಮೆರಿಡಿಯನ್ ಅನ್ನು ಐದು ಮತ್ತು ಏಳು-ಆಸನಗಳ ಕಾನ್ಫಿಗರೇಶನ್‌ಗಳಲ್ಲಿ ನಾಲ್ಕು ರೂಪಾಂತರಗಳಲ್ಲಿ ಹೊರ ತಂದಿದೆ. ಅವುಗಳೆಂದರೆ ಲಾಂಗಿಟ್ಯೂಡ್, ಲಾಂಗಿಟ್ಯೂಡ್ ಪ್ಲಸ್, ಲಿಮಿಟೆಡ್ (O) ಮತ್ತು ಓವರ್‌ಲ್ಯಾಂಡ್.

ಹೇಗಿದೆ ಬಾಹ್ಯ ವಿನ್ಯಾಸ? : ನಾವು 2025 ಜೀಪ್ ಮೆರಿಡಿಯನ್‌ನ ಹೊರಭಾಗವನ್ನು ನೋಡೋದಾದರೆ, ಕಂಪನಿಯು ಇಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಇದು 7-ಸ್ಲ್ಯಾಟ್ ಗ್ರಿಲ್, DRL ಗಳೊಂದಿಗೆ ಸ್ಲಿಕ್​ LED ಹೆಡ್‌ಲ್ಯಾಂಪ್‌ಗಳು, ರೂಪಾಂತರವನ್ನು ಅವಲಂಬಿಸಿ ವಿಭಿನ್ನ ಮಾದರಿಗಳಲ್ಲಿ 18-ಇಂಚಿನ ಅಲಾಯ್​ ವ್ಹೀಲ್​ಗಳು ಮತ್ತು ಸ್ಲಿಕ್​ LED ಟೈಲ್‌ಲ್ಯಾಂಪ್‌ಗಳೊಂದಿಗೆ ಅದೇ ಆಕರ್ಷಕ ನೋಟ ಪಡೆಯುತ್ತದೆ.

2025 ಜೀಪ್ ಮೆರಿಡಿಯನ್ ವೈಶಿಷ್ಟ್ಯಗಳು: ಈ ಜೀಪ್​ನ ವೈಶಿಷ್ಟ್ಯಗಳ ಕುರಿತು ಮಾತನಾಡೋದಾದರೆ, ಹೊಸ ಮೆರಿಡಿಯನ್ ಲೆವೆಲ್ 2 ADAS ಸೂಟ್ ಮತ್ತು ಹೆಚ್ಚಿನ ಸಂಪರ್ಕ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಅನೇಕ ಹೊಸ ತಂತ್ರಜ್ಞಾನಗಳನ್ನು ಒದಗಿಸಲಾಗಿದೆ. ಈ ಕಾರು 10.1-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 10.2-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್ ಜೊತೆಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಕನೆಕ್ಟಿವಿಟಿ, ವೈರ್‌ಲೆಸ್ ಚಾರ್ಜರ್ ಮತ್ತು ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಹೊಂದಿದೆ.

ಇದಲ್ಲದೇ, ಇದು ಪನೋರಮಿಕ್ ಸನ್‌ರೂಫ್ ಮತ್ತು ಫಾರ್ವಾಡ್​ ವೆಂಟಿಲೇಟೆಡ್​ ಫ್ರಂಟ್​ ಸೀಟುಗಳನ್ನು ಹೊಂದಿದೆ. ಈಗ, ಪ್ರವೇಶ ಮಟ್ಟದ ಲಾಂಗಿಟ್ಯೂಡ್ ರೂಪಾಂತರವು ಐದು-ಆಸನಗಳ ರೂಪಾಂತರದಲ್ಲಿ ಮಾತ್ರ ಲಭ್ಯವಿದ್ದರೆ, ಎಲ್ಲಾ ಇತರ ರೂಪಾಂತರಗಳು ಏಳು-ಆಸನಗಳ ವಿನ್ಯಾಸವನ್ನು ಹೊಂದಿವೆ. ಗಮನಾರ್ಹವಾಗಿ, ಮೂಲ ರೂಪಾಂತರದಲ್ಲಿ ಫಾರ್ವಾಡ್​ ವೆಂಟಿಲೇಟೆಡ್​ ಫ್ರಂಟ್​ ಸೀಟ್​ಗಳು ಮತ್ತು ಸನ್‌ರೂಫ್‌ನಂತಹ ಕೆಲವು ವೈಶಿಷ್ಟ್ಯಗಳು ಲಭ್ಯವಿಲ್ಲ.

2025 Jeep Meridian ಬೆಲೆ:

ಮಾಡೆಲ್​ಗಳುಬೆಲೆ
Jeep Meridian Longitude (5-ಸೀಟರ್​)24.99 ಲಕ್ಷ ರೂ.
Jeep Meridian Longitude Plus27.5 ಲಕ್ಷ ರೂ.
Jeep Meridian Limited (O)30.49 ಲಕ್ಷ ರೂ.
Jeep Meridian Overland36.49 ಲಕ್ಷ ರೂ.
ಎಲ್ಲವೂ ಎಕ್ಸ್ ಶೋ ರೂಂ ಬೆಲೆಗಳು

2025 ಜೀಪ್ ಮೆರಿಡಿಯನ್ ಪವರ್‌ಟ್ರೇನ್: ಹೊಸ ನವೀಕರಿಸಿದ ಜೀಪ್ ಮೆರಿಡಿಯನ್‌ನ ಪವರ್‌ಟ್ರೇನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಅದೇ 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್​ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ 168bhp ಪವರ್ ಮತ್ತು 350Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದಲ್ಲದೇ ಮೊದಲಿನಂತೆ 4x2 ಮತ್ತು 4x4 ಆವೃತ್ತಿಗಳಲ್ಲಿಯೂ ಲಭ್ಯವಿದೆ.

ಓದಿ: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಹೊಂಡಾ ಕಂಪನಿಯಿಂದ ಫ್ಲೆಕ್ಸ್​ ಫ್ಯುಯಲ್ ಬೈಕ್​ ಅನಾವರಣ: ಬೆಲೆ ಎಷ್ಟು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.