ETV Bharat / business

ಏನಿವು ನೀಲಿ, ಕೆಂಪು, ಹಸಿರು ಕೋಚ್​​ಗಳು? - ರೈಲು ಬೋಗಿಗಳ ಬಣ್ಣಕ್ಕೆ ಇರುವ ವಿಶೇಷ ಕಾರಣ, ಮಹತ್ವ ಏನು?

- ಭಾರತೀಯ ರೈಲು ಕೋಚ್‌ಗಳಿಗೆ ವಿಶಿಷ್ಟ ಬಣ್ಣದ ಕೋಡ್‌ಗಳು ಇರುವುದು ಏಕೆ ಏಕೆ? - ಹಳದಿ, ಬಿಳಿ, ನೇರಳೆ, ಕಂದು, ಕಿತ್ತಳೆ, ಕೆನೆ ಮತ್ತು ನೀಲಿ ಬಣ್ಣದ ಕೋಚ್‌ಗಳ ಅರ್ಥವೇನು?

DECODING TRAIN COACH COLORS
ರೈಲು ಬೋಗಿಗಳ ಬಣ್ಣ (IANS)
author img

By ETV Bharat Karnataka Team

Published : Oct 22, 2024, 8:16 AM IST

ಭಾರತೀಯ ರೈಲ್ವೆ ನಿತ್ಯ ಕೋಟಿಗಟ್ಟಲೆ ಜನರನ್ನು ಅವರವರ ಊರುಗಳಿಗೆ ತಲುಪಿಸುವ ಸುವ್ಯವಸ್ಥಿತ ಸೇವೆ ಸಲ್ಲಿಸುತ್ತಿದೆ. ಪ್ರಯಾಣಿಕರು ಆರಾಮವಾಗಿ ಪ್ರಯಾಣಿಸಲು ಇದು ಅನೇಕ ಸೌಲಭ್ಯಗಳನ್ನು ಒದಗಿಸುತ್ತದೆ. ಹೌದು ಇಂತಹ ಸೇವೆ ಸಲ್ಲಿಸುವ ರೈಲ್ವೆ ಕೋಚ್​ಗಳಿಗೆ ವಿವಿಧ ಬಣ್ಣಗಳು ಇರುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಭಾರತೀಯ ರೈಲು ಕೋಚ್‌ಗಳು ವಿವಿಧ ಬಣ್ಣಗಳಲ್ಲಿ ಇರಲು ಹೀಗಿವೆ ಕಾರಣಗಳು. ಆ ಬಗ್ಗೆ ಈಗ ತಿಳಿದುಕೊಳ್ಳೋಣ.

ವಾಸ್ತವವಾಗಿ ರೈಲು ಕೋಚ್‌ಗಳನ್ನು ವಿವಿಧ ಬಣ್ಣಗಳಲ್ಲಿ ಚಿತ್ರಿಸಲು ಕಾರಣ ಕೇವಲ ಸೌಂದರ್ಯಕ್ಕಾಗಿ ಅಲ್ಲ. ಈ ಬಣ್ಣದ ಸಂಕೇತಗಳು ವಿಶೇಷ ಅರ್ಥವನ್ನು ಹೊಂದಿವೆ. ಈ ಬಣ್ಣಗಳು ಅದರಲ್ಲಿ ನೀಡಲಾದ ಸೌಕರ್ಯದ ಮಟ್ಟವನ್ನು ಸೂಚಿಸುತ್ತವೆ. ಅಂದರೆ, ಬಣ್ಣಗಳ ಆಧಾರದ ಮೇಲೆ ಹವಾನಿಯಂತ್ರಣ ಸೇರಿದಂತೆ ಅತ್ಯಂತ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಕೋಚ್‌ಗಳ ಬಗ್ಗೆ ಈ ಬಣ್ಣಗಳು ನಮಗೆ ದಾರಿ ತೋರುತ್ತವೆ.

ನೀಲಿ ಬಣ್ಣದ ಕೋಚ್‌ಗಳು ಏನನ್ನು ಸೂಚಿಸುತ್ತವೆ?: ಈ ನೀಲಿ ಬಣ್ಣದ ಕೋಚ್‌ಗಳು ಮುಖ್ಯವಾಗಿ ರಾಜಧಾನಿ ಮತ್ತು ಶತಾಬ್ದಿ ಎಕ್ಸ್‌ಪ್ರೆಸ್‌ನಂತಹ ರೈಲುಗಳಲ್ಲಿ ಕಂಡುಬರುತ್ತವೆ. ಅವುಗಳನ್ನು ವೇಗವಾಗಿ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಈ ನೀಲಿ ಬಣ್ಣದ ಕೋಚ್‌ಗಳನ್ನು ಹೊಂದಿರುವ ರೈಲುಗಳು ಗಂಟೆಗೆ 70 - 140 ಕಿ.ಮೀ ವೇಗದಲ್ಲಿ ಚಲಿಸುತ್ತವೆ. ಈ ಕೋಚ್‌ಗಳು ಉಕ್ಕಿನಿಂದ ಮಾಡಲ್ಪಟ್ಟಿವೆ. ಇವು ಏರ್ ಬ್ರೇಕ್​​ಗಳನ್ನು ಹೊಂದಿವೆ. ಈ ನೀಲಿ ಕೋಚ್‌ಗಳ ಆಸನಗಳು ವಿಶಾಲವಾದ ಮತ್ತು ಆರಾಮದಾಯಕವಾಗಿವೆ. ಅಡುಗೆ ಸೇವೆಯೂ ಲಭ್ಯವಿದೆ. ಆರಾಮದಾಯಕ ಪ್ರಯಾಣವನ್ನು ಬಯಸುವವರಿಗೆ ಈ ನೀಲಿ ಕೋಚ್‌ಗಳು ಸೂಕ್ತವಾಗಿವೆ. ಆದರೆ, ಈ ಟ್ರೈನ್​​ಗಳ ಟಿಕೆಟ್ ದರ ಸ್ವಲ್ಪ ಹೆಚ್ಚು.

ಕೆಂಪು ಬಣ್ಣದ ಕೋಚ್​ಗಳ ಅರ್ಥವೇನು?: ರೆಡ್ ಕೋಚ್‌ಗಳನ್ನು ಲಿಂಕ್ ಹಾಫ್‌ಮನ್ ಬುಷ್ ಕೋಚ್‌ಗಳು ಎಂದೂ ಕರೆಯಲಾಗುತ್ತದೆ. 2000ನೇ ದಶಕದ ಆರಂಭದಲ್ಲಿ ಈ ಕೋಚ್‌ಗಳನ್ನು ಭಾರತೀಯ ರೈಲುಗಳಲ್ಲಿ ಪರಿಚಯಿಸಲು ಪ್ರಾರಂಭಿಸಲಾಯಿತು. ಈ ಕೆಂಪು ಕೋಚ್‌ಗಳನ್ನು ಪಂಜಾಬ್‌ನ ಕಪುರ್ತಲಾದಲ್ಲಿ ನಿರ್ಮಿಸಲಾಗಿದೆ. ಅಲ್ಯೂಮಿನಿಯಂನಿಂದ ತಯಾರಿಸಲ್ಪಟ್ಟ ಈ ಕೋಚ್‌ಗಳು ತುಂಬಾ ಹಗುರವಾಗಿರುತ್ತವೆ. ಈ ಕೋಚ್​ಗಳನ್ನು ಹೊಂದಿರುವ ಟ್ರೈನ್​ಗಳು ಗಂಟೆಗೆ 200 ಕಿಮೀ ವೇಗದಲ್ಲಿ ಚಲಿಸುತ್ತವೆ. ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಕೋಚ್‌ಗಳು ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿವೆ. ಈ ಕೆಂಪು ಬಣ್ಣದ ಕೋಚ್‌ಗಳಲ್ಲಿ ಪ್ರೀಮಿಯಂ ಸೇವೆಗಳನ್ನು ಒದಗಿಸಲಾಗಿದೆ. ಸಾಮಾನ್ಯವಾಗಿ ರಾಜಧಾನಿ ಮತ್ತು ಶತಾಬ್ದಿ ರೈಲುಗಳಲ್ಲಿ ಈ ಬೋಗಿಗಳಿರುತ್ತವೆ. ಐಷಾರಾಮಿ, ಸೌಕರ್ಯ ಮತ್ತು ವೇಗದಲ್ಲಿ ಪ್ರಯಾಣಿಸಲು ಬಯಸುವವರಿಗೆ ಈ ಕೆಂಪು ಕೋಚ್‌ಗಳು ಸೂಕ್ತವಾಗಿವೆ.

ಹಸಿರು ಬಣ್ಣದ ಕೋಚ್‌ಗಳು: ಹಸಿರು, ಕೆಂಪು ಮತ್ತು ನೀಲಿ ಕೋಚ್‌ಗಳಂತೆ ಇಲ್ಲಿಯೂ ಏರ್​ ಕಂಡಿಷನ್​ ಸೌಲಭ್ಯ ಉಂಟು. ಆದರೆ, ಇತರ ಕೋಚ್​​ಗಳಿಗೆ ಹೋಲಿಸಿದರೆ ಈ ಹಸಿರು ಕೋಚ್‌ಗಳಲ್ಲಿ ಪ್ರಯಾಣಿಸುವ ವೆಚ್ಚ ಸಾಕಷ್ಟು ಕಡಿಮೆ. ಈ ಹಸಿರು ಕೋಚ್‌ಗಳು ವಿವಿಧ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಕಂಡುಬರುತ್ತವೆ. ಕಡಿಮೆ ಬಜೆಟ್‌ನಲ್ಲಿ ರೈಲಿನಲ್ಲಿ ಆರಾಮವಾಗಿ ಪ್ರಯಾಣಿಸಲು ಬಯಸುವವರಿಗೆ ಈ ಹಸಿರು ಬಣ್ಣದ ಕೋಚ್‌ಗಳು ಸೂಕ್ತವಾಗಿವೆ.

ಈ ಬಣ್ಣಗಳ ಮಹತ್ವವೇನು?: ಭಾರತೀಯ ರೈಲುಗಳು ಅನೇಕ ಬಣ್ಣದ ಕೋಚ್‌ಗಳನ್ನು ಹೊಂದಿವೆ. ಹಳದಿ ಕೋಚ್‌ಗಳು ಹವಾನಿಯಂತ್ರಣವನ್ನು ಹೊಂದಿರುವುದಿಲ್ಲ. ಹಾಗಾಗಿ ಅವುಗಳ ಟಿಕೆಟ್ ದರ ಕಡಿಮೆ. ಬ್ರೌನ್ ಕೋಚ್‌ಗಳು ಸ್ಲೀಪರ್ ಬರ್ತ್‌ಗಳನ್ನು ಹೊಂದಿದ್ದು ರಾತ್ರಿಯ ಪ್ರಯಾಣಕ್ಕೆ ಸೂಕ್ತವಾಗಿದೆ. ಉದಾ (ನೇರಳೆ) ಬಣ್ಣದ ಕೋಚ್‌ಗಳು ಹೆಚ್ಚಾಗಿ ತೇಜಸ್ ಎಕ್ಸ್‌ಪ್ರೆಸ್‌ನಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳಿವೆ.

ಬಿಳಿ ಬಣ್ಣದ ಕೋಚ್‌ಗಳು ಸಾಮಾನ್ಯವಾಗಿ ಹೆಚ್ಚಿನ ಪ್ರಾಮುಖ್ಯತೆಯ ಸ್ಥಳಗಳಿಗೆ ಪ್ರಯಾಣಿಸುತ್ತವೆ. ಆರೆಂಜ್ ಬಣ್ಣದ ಕೋಚ್‌ಗಳು ನಗರಗಳು ಮತ್ತು ಪಟ್ಟಣಗಳಲ್ಲಿನ ಕಡಿಮೆ ದೂರದ ನಿಲ್ದಾಣಗಳಿಗೆ ಪ್ರಯಾಣಿಸಲು ಸೂಕ್ತವಾಗಿದೆ. ಕ್ರೀಮ್ ಮತ್ತು ನೀಲಿ ಕೋಚ್‌ಗಳು ಎರಡನೇ ದರ್ಜೆಯ ವಸತಿ ಸೌಕರ್ಯಗಳನ್ನು ಹೊಂದಿವೆ. ಕಡಿಮೆ ಬಜೆಟ್‌ನಲ್ಲಿ ಪ್ರಯಾಣಿಸಲು ಬಯಸುವವರಿಗೆ ಇವು ಉಪಯುಕ್ತವಾಗಿವೆ. ಈ ಬಣ್ಣದ ಕೋಡ್‌ಗಳ ಬಗ್ಗೆ ನಮಗೆ ತಿಳಿದಿದ್ದರೆ, ನಮ್ಮ ಬಜೆಟ್‌ನಲ್ಲಿ ನಾವು ಯಾವ ರೀತಿಯ ಕೋಚ್‌ನಲ್ಲಿ ಹತ್ತಬಹುದು ಮತ್ತು ಆರಾಮವಾಗಿ ಪ್ರಯಾಣಿಸಬಹುದು ಎಂಬುದನ್ನು ತಿಳಿದುಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.

ಇವುಗಳನ್ನು ಓದಿ: ದಿನಕ್ಕೆ ಜಸ್ಟ್​​ 100 ರೂ ಹೂಡಿಕೆ ಮಾಡಿ 5 ಕೋಟಿ ನಿಧಿ ಪಡೆಯಿರಿ; ಈ ಹೂಡಿಕೆ ತಂತ್ರದ ಬಗ್ಗೆ ನಿಮಗೆ ಗೊತ್ತಾ?

2024-25ರಲ್ಲಿ 341.55 ದಶಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದಿಸುವ ಗುರಿ

ಬೆಂಗಳೂರು ಟು ಲಂಡನ್​​ ನೇರ ವಿಮಾನ ಸೇವೆ: ಅದರ ವೇಳಾಪಟ್ಟಿ ಹೀಗಿದೆ

₹750 ಏರಿಕೆಯೊಂದಿಗೆ 80 ಸಾವಿರ ದಾಟಿದ ಚಿನ್ನ, ₹1 ಲಕ್ಷ ಸನಿಹದಲ್ಲಿ ಕೆಜಿ ಬೆಳ್ಳಿ!

ಮದ್ಯಪ್ರಿಯರಿಗೆ ಬಿಗ್​ ಲಾಟರಿ: ಕೇವಲ 99 ರೂಗೆ ಯಾವುದೇ ಬ್ರಾಂಡ್​​ನ ಬಾಟಲಿಗಳು ಲಭ್ಯ; ಏನಿದು ಹೊಸ ನೀತಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.