ETV Bharat / technology

ಆಂಡ್ರಾಯ್ಡ್ 15 ಅಪ್‌ಡೇಟ್ ಹೊರ ತಂದ ಗೂಗಲ್​: ಇದನ್ನು ಆ್ಯಕ್ಟಿವ್​ ಮಾಡಿಕೊಳ್ಳುವುದು ಮತ್ತಷ್ಟು ಸುಲಭ!

Android 15 Update: ಗೂಗಲ್​ ತನ್ನ ಬಳಕೆದಾರರಿಗೆ ಆಂಡ್ರಾಯ್ಡ್ 15 ಅಪ್‌ಡೇಟ್ ಹೊರ ತಂದಿದೆ. ಈ ಅಪ್​ಡೇಟ್​ ಯಾವ ಮೊಬೈಲ್​ಗಳಲ್ಲಿ ಲಭ್ಯವಿದೆ ಮತ್ತು ಇದನ್ನು ಆ್ಯಕ್ಟಿವ್​ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈ ಸುದ್ದಿಯಲ್ಲಿ ತಿಳಿಯೋಣ.

author img

By ETV Bharat Tech Team

Published : 3 hours ago

Updated : 38 minutes ago

ANDROID15 FEATURES AND CHANGES LIST  ANDROID 15 UPDATE FOR PIXEL  ANDROID 15 FOR GOOGLE PIXEL  ANDROID 15 FEATURES
ಆಂಡ್ರಾಯ್ಡ್ 15 ಅಪ್‌ಡೇಟ್ ತಂದ ಗೂಗಲ್ (Google)

Android 15 Update: ಆಂಡ್ರಾಯ್ಡ್ ಅಪ್​ಡೇಟ್​ಗಾಗಿ ಕಾಯುತ್ತಿರುವವರಿಗೆ ಗೂಗಲ್ ಗುಡ್ ನ್ಯೂಸ್ ನೀಡಿದೆ. ಆಂಡ್ರಾಯ್ಡ್ 15 ಸ್ಥಿರ ಆವೃತ್ತಿಯನ್ನು ಪಿಕ್ಸೆಲ್ ಫೋನ್‌ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಹೊಸ ಪಿಕ್ಸೆಲ್ 9 ಸರಣಿಯ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಆಯ್ದ ಪಿಕ್ಸೆಲ್ ಮೊಬೈಲ್‌ಗಳಿಗೆ ಆಂಡ್ರಾಯ್ಡ್ 15 ಅಪ್‌ಡೇಟ್ ಈಗ ಹೊರತರುತ್ತಿದೆ.

ಆಂಡ್ರಾಯ್ಡ್ 15 ಜೊತೆಗೆ, ಅಕ್ಟೋಬರ್ ಪಿಕ್ಸೆಲ್ ಡ್ರಾಪ್‌ನ ಭಾಗವಾಗಿ ಪಿಕ್ಸೆಲ್‌ಗಳಿಗೆ ಬರುವ ಹೊಸ ವೈಶಿಷ್ಟ್ಯಗಳ ಪಟ್ಟಿಯನ್ನು ಗೂಗಲ್ ಘೋಷಿಸಿದೆ. ಬಳಕೆದಾರರ ಗೌಪ್ಯತೆ ಮತ್ತು ಬಹುಕಾರ್ಯಕ ಸಾಮರ್ಥ್ಯಗಳನ್ನು ಹೆಚ್ಚಿಸುವ ಉದ್ದೇಶದಿಂದ ಗೂಗಲ್ ಇವುಗಳನ್ನು ಹೊರ ತಂದಿದೆ.

ಆಂಡ್ರಾಯ್ಡ್ 15 ನಲ್ಲಿನ ಪ್ರಮುಖ ಬದಲಾವಣೆಗಳು ಇವು: ಆಂಡ್ರಾಯ್ಡ್ 15 ನೊಂದಿಗೆ ಪಿಕ್ಸೆಲ್ ಮೊಬೈಲ್‌ಗಳಲ್ಲಿ ಬರುತ್ತಿರುವ ಕೆಲವು ಪ್ರಮುಖ ಬದಲಾವಣೆಗಳನ್ನು ಗೂಗಲ್ ವಿವರಿಸಿದೆ. ಇವುಗಳಲ್ಲಿ ಡಿಸೈನ್​ ಬದಲಾವಣೆಗಳು, ಥೆಫ್ಟ್​ ಡಿಟೆಕ್ಷನ್​ ಲಾಕ್, ಪ್ರೈವೇಟ್​ ಸ್ಪೇಸ್ ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

1. ಥೆಫ್ಟ್ ಡಿಟೆಕ್ಷನ್ ಲಾಕ್: ಗೂಗಲ್ ಇತ್ತೀಚೆಗೆ ಆಂಡ್ರಾಯ್ಡ್ ಬಳಕೆದಾರರಿಗೆ ಥೆಫ್ಟ್ ಪ್ರೊಟೆಕ್ಷನ್ ಅಡಿ 3 ಹೊಸ ಭದ್ರತಾ ವೈಶಿಷ್ಟ್ಯಗಳನ್ನು ತಂದಿದೆ. ಇವುಗಳು ಕಳ್ಳತನದ ಸಂದರ್ಭದಲ್ಲಿ ಫೋನ್​ನ ಸ್ಕ್ರೀನ್​ ಆಟೋಮೆಟಿಕ್​ ಆಗಿ ಲಾಕ್ ಮಾಡುತ್ತವೆ.

  • ಸ್ಮಾರ್ಟ್ ಲಾಕ್ ಫೀಚರ್: ಸ್ಮಾರ್ಟ್ ಫೋನ್ ಕಳ್ಳತನವಾದರೆ, ಈ ಫೀಚರ್ AI ತಂತ್ರಜ್ಞಾನದೊಂದಿಗೆ ಪತ್ತೆ ಮಾಡುತ್ತದೆ ಮತ್ತು ತಕ್ಷಣವೇ ಮೊಬೈಲ್​ನ ಸ್ಕ್ರೀನ್​ ಅನ್ನು ಆಟೋಮೆಟಿಕ್​ ಆಗಿ ಲಾಕ್ ಮಾಡುತ್ತದೆ.
  • ಆಫ್‌ಲೈನ್ ಡಿವೈಸ್​ ಲಾಕ್: ಮೇಲಿನ ಥೆಫ್ಟ್ ಲಾಕ್ ವೈಶಿಷ್ಟ್ಯವು ಕಳ್ಳತನ ಪತ್ತೆಹಚ್ಚಲು ವಿಫಲವಾದರೆ ಆಫ್‌ಲೈನ್ ಡಿವೈಸ್​ ಲಾಕ್, ರಿಮೋಟ್ ಲಾಕ್ ವೈಶಿಷ್ಟ್ಯಗಳು ಸಹಾಯಕ್ಕೆ ಬರುತ್ತವೆ. ಈ ಆಫ್‌ಲೈನ್ ಡಿವೈಸ್​ ಲಾಕ್ ವೈಶಿಷ್ಟ್ಯವು ನಿಮ್ಮ ಮೊಬೈಲ್ ಇಂಟರ್ನೆಟ್ ಆಫ್ ಆಗಿರುವಾಗಲೂ ಸಹ ಕಳ್ಳರು ನಿಮ್ಮ ಕದ್ದ ಮೊಬೈಲ್‌ನ ಸಂಪರ್ಕವನ್ನು ಕಡಿತಗೊಳಿಸಲು ಪ್ರಯತ್ನಿಸಿದಾಗ ಆಟೋಮೆಟಿಕ್​ ಆಗಿ ಸ್ಕ್ರೀನ್​ ಅನ್ನು ಲಾಕ್ ಮಾಡುತ್ತದೆ.
  • ರಿಮೋಟ್ ಲಾಕ್ ವೈಶಿಷ್ಟ್ಯ: ನಿಮ್ಮ ಕದ್ದ ಮೊಬೈಲ್ ಫೋನ್‌ನ ಸ್ಕ್ರೀನ್​ ಅನ್ನು ಮತ್ತೊಂದು ಸಾಧನದ ಮೂಲಕ ಲಾಕ್ ಮಾಡಲು ರಿಮೋಟ್ ಲಾಕ್ ವೈಶಿಷ್ಟ್ಯವನ್ನು ಬಳಸಬಹುದು. ಫೋನ್ ಕದ್ದಿದ್ದರೆ ಇದು android.com/lock ಲಿಂಕ್‌ಗೆ ಪ್ರವೇಶವನ್ನು ಅನುಮತಿಸುತ್ತದೆ. ಈ ವೈಶಿಷ್ಟ್ಯಗಳು ಈಗ ಇತ್ತೀಚಿನ ಆಂಡ್ರಾಯ್ಡ್ 15 ಆವೃತ್ತಿಗಳೊಂದಿಗೆ ಆಂಡ್ರಾಯ್ಡ್ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಗೂಗಲ್ ಹೇಳಿದೆ.

2. ಪ್ರೈವೇಟ್​ ಸ್ಪೇಸ್​: Google ಪ್ರಕಾರ.. Android 15 ನಲ್ಲಿನ ಈ ಪ್ರೈವೇಟ್​ ಸ್ಪೇಸ್ ವೈಶಿಷ್ಟ್ಯವು ಸೂಕ್ಷ್ಮ ಅಪ್ಲಿಕೇಶನ್‌ಗಳನ್ನು ಬಳಸಲು ತುಂಬಾ ಉಪಯುಕ್ತವಾಗಿದೆ. ಒಮ್ಮೆ ನಾವು ಈ ಪ್ರೈವೇಟ್ ಸ್ಪೇಸ್ ವೈಶಿಷ್ಟ್ಯ ಲಾಕ್ ಮಾಡಿದರೆ ಈ ಅಪ್ಲಿಕೇಶನ್‌ಗಳು ಇತರರಿಗೆ ಗೋಚರಿಸುವುದಿಲ್ಲ. ಇದರ ಹೊರತಾಗಿ, ಅಪ್ಲಿಕೇಶನ್ ಲಿಸ್ಟ್​, ಇತ್ತೀಚಿನ ಅಪ್ಲಿಕೇಶನ್‌ಗಳ ವೀಕ್ಷಣೆ, ಸೆಟ್ಟಿಂಗ್‌ಗಳು ಮತ್ತು ಅಧಿಸೂಚನೆಗಳನ್ನು ತೋರಿಸದಿರಲು ಈ ವೈಶಿಷ್ಟ್ಯವು ಉಪಯುಕ್ತವಾಗಿದೆ.

3. ಟ್ಯಾಬ್ಲೆಟ್‌ಗಳು ಮತ್ತು ಫೋಲ್ಡಬಲ್‌ಗಳಿಗೆ ಹೆಚ್ಚಿನ ಬೆಂಬಲ: ಪಿಕ್ಸೆಲ್ ಫೋಲ್ಡಬಲ್ ಅಥವಾ ಆಂಡ್ರಾಯ್ಡ್ 15 ನೊಂದಿಗೆ ಪಿಕ್ಸೆಲ್ ಟ್ಯಾಬ್ಲೆಟ್ ಹೊಂದಿರುವ ಬಳಕೆದಾರರು ಕಸ್ಟಮೈಸ್ ಮಾಡಿದ ಲೇಔಟ್‌ಗಾಗಿ ತಮ್ಮ ಟಾಸ್ಕ್ ಬಾರ್ ಅನ್ನು ಸ್ಕ್ರೀನ್​ ಮೇಲೆ ಪಿನ್ ಮಾಡಬಹುದು ಮತ್ತು ಅನ್‌ಪಿನ್ ಮಾಡಬಹುದು. ಇದಲ್ಲದೇ ಅಪ್ಲಿಕೇಶನ್‌ ಪೆಯರ್ಸ್​ ಅನ್ನು ಶಾರ್ಟ್‌ಕಟ್‌ಗಳಾಗಿ ಸಹ ಬಳಸಬಹುದು. ಇದು ಸ್ಪ್ಲಿಟ್-ಸ್ಕ್ರೀನ್ ಸೆಟಪ್‌ಗಳಲ್ಲಿ ಬಹುಕಾರ್ಯಕವನ್ನು ಸುಧಾರಿಸುತ್ತದೆ.

  • ಅಪ್ಲಿಕೇಶನ್‌ ಪೆಯರ್​: ಅಪ್ಲಿಕೇಶನ್ ಪೆಯರ್ ಸ್ಯಾಮ್‌ಸಂಗ್ ಮೊಬೈಲ್ ಸಾಧನಗಳ ವೈಶಿಷ್ಟ್ಯವಾಗಿದೆ. ಮಲ್ಟಿ- ವಿಂಡೋ ಸೆಷನ್‌ನಲ್ಲಿ ಎರಡು ಅಪ್ಲಿಕೇಶನ್‌ಗಳನ್ನು ಏಕಕಾಲದಲ್ಲಿ ತೆರೆಯಲು ಇದು ಉಪಯುಕ್ತವಾಗಿದೆ.

4. ಸ್ಯಾಟ್​ಲೈಟ್​ ಕಮ್ಯುನಿಕೇಶನ್​: ಆಂಡ್ರಾಯ್ಡ್ 15 ನೊಂದಿಗೆ ಕ್ಯಾರಿಯರ್ ಮೆಸೆಜಿಂಗ್ ಆ್ಯಪ್​ ಮೊಬೈಲ್ ಅಥವಾ ವೈ-ಫೈ ಸಂಪರ್ಕವಿಲ್ಲದೇ ಸಂದೇಶಗಳನ್ನು ಕಳುಹಿಸುವುದಕ್ಕೆ ಸ್ಯಾಟ್​ಲೈಟ್​ ಕಮ್ಯುನಿಕೇಶನ್ ಅನ್ನು ಬಳಸಬಹುದು ಎಂದು ಗೂಗಲ್ ಹೇಳಿದೆ.

5. ಇತರ ಬದಲಾವಣೆಗಳು: ಗಮನಾರ್ಹ ಬದಲಾವಣೆಗಳಲ್ಲಿ ಮರುವಿನ್ಯಾಸಗೊಳಿಸಲಾದ ಬಳಕೆದಾರ ಇಂಟರ್ಫೇಸ್ (UI) ಅಂಶಗಳು, ಪಾಸ್‌ಕೀಗಳಿಗೆ ಉತ್ತಮ ಬೆಂಬಲ, ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳಿಗಾಗಿ ಸುಧಾರಿತ ಕ್ಯಾಮೆರಾ ನಿಯಂತ್ರಣಗಳು ಸೇರಿವೆ.

ಆಂಡ್ರಾಯ್ಡ್ 15 ಕೆಲಸ ಮಾಡುವ ಪಿಕ್ಸೆಲ್ ಮೊಬೈಲ್‌ಗಳು: Pixel 6, Pixel 6 Pro, Pixel 6a, Pixel 7, Pixel 7 Pro, Pixel 7a, Pixel Fold, Pixel Tablet, Pixel 8, Pixel 8 Pro, Pixel 8a, Pixel 9, Pixel 9 Pro, Pixel 9 Pro XL, Pixel 9 Pro Fold.

ಪಿಕ್ಸೆಲ್ ಮೊಬೈಲ್‌ಗಳಲ್ಲಿ ಆಂಡ್ರಾಯ್ಡ್ 15 ಅನ್ನು ಇನ್‌ಸ್ಟಾಲ್ ಮಾಡುವುದು ಹೇಗೆ?:

  1. ಇದಕ್ಕಾಗಿ ಮೊದಲು ನೀವು ನಿಮ್ಮ ಪಿಕ್ಸೆಲ್ ಮೊಬೈಲ್‌ನಲ್ಲಿ ಸೆಟ್ಟಿಂಗ್‌ಗಳ ಅಪ್ಲಿಕೇಶನ್‌ಗೆ ಹೋಗಿ ಮತ್ತು ಸಿಸ್ಟಮ್ ಮೆನು ಆಯ್ಕೆಮಾಡಿಕೊಳ್ಳಿ.
  2. ಸಿಸ್ಟಮ್ ಮೆನುವನ್ನು ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಸಾಫ್ಟ್‌ವೇರ್ ಅಪ್​ಡೇಟ್​ ಮೇಲೆ ಕ್ಲಿಕ್ ಮಾಡಿ.
  3. ಸ್ಕ್ರೀನ್​ನ ಕೆಳಗಿನ ಬಲಭಾಗದಲ್ಲಿರುವ ಅಪ್​ಡೇಟ್​ಗಾಗಿ ಚೆಕ್ ಅನ್ನು ಟ್ಯಾಪ್ ಮಾಡಿ.
  4. ನಿಮ್ಮ ಪಿಕ್ಸೆಲ್ ಮೊಬೈಲ್‌ನಲ್ಲಿ Android 15 ಅಪ್‌ಡೇಟ್ ಲಭ್ಯವಿದ್ದರೆ, ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಆಯ್ಕೆಯನ್ನು ಒತ್ತಿ ಮತ್ತು ಸೂಚನೆಗಳನ್ನು ಅನುಸರಿಸಿ.

ಓದಿ: Instagram​-ಸ್ಪಾಟಿಫೈ ಬಳಕೆದಾರರಿಗೆ ಶುಭ ಸುದ್ದಿ, ಸ್ಟೋರಿ-ರೀಲ್ಸ್​ ಮತ್ತಷ್ಟು ಸುಲಭ

Last Updated : 38 minutes ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.