ETV Bharat / state

ಅರಭಾವಿ ಮಠದಲ್ಲೇ ಜೀವ ಬಿಟ್ಟಿದ್ದ ರಾಣಿ ಚನ್ನಮ್ಮನ ಪತಿ: ಮಲ್ಲಸರ್ಜ ಕಟ್ಟೆಗೆ ನಿತ್ಯವೂ ಪೂಜೆ

ವೀರರಾಣಿ ಚನ್ನಮ್ಮನ ಪತಿ ಮಲ್ಲಸರ್ಜನ ಸಮಾಧಿ ಸ್ಥಳ ನಿರ್ಲಕ್ಷ್ಯಕ್ಕೊಳಗಾಗಿದ್ದು, ಸರ್ಕಾರ ಇತ್ತ ಗಮನ ಹರಿಸಬೇಕಿದೆ.

ಅರಭಾವಿ ಮಠ, ಮಲ್ಲಸರ್ಜ  ಸಮಾಧಿ
ಅರಭಾವಿ ಮಠ, ಮಲ್ಲಸರ್ಜನ ಸಮಾಧಿ (ETV Bharat)
author img

By ETV Bharat Karnataka Team

Published : 2 hours ago

ಬೆಳಗಾವಿ: ಘಟಪ್ರಭೆ ಮಡಿಲಲ್ಲಿರುವ ಅರಭಾವಿಯು ದುರಂಡೀಶ್ವರ ಮಠದಿಂದಲೇ ಪ್ರಖ್ಯಾತಿ ಪಡೆದಿದೆ. ಈ ಮಠಕ್ಕೂ ಕಿತ್ತೂರು ಸಂಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ. ವೀರರಾಣಿ ಚನ್ನಮ್ಮನ ಪತಿ, ದೊರೆ ಮಲ್ಲಸರ್ಜ ಜೀವ ಬಿಟ್ಟಿದ್ದು ಕೂಡ ಇದೇ ಪುಣ್ಯಭೂಮಿಯಲ್ಲಿ. ಆದರೆ, ಇದಕ್ಕೆ ಸರ್ಕಾರದಿಂದ ನಿರೀಕ್ಷಿತ ಮಾನ್ಯತೆ ಸಿಕ್ಕಿಲ್ಲ. ದುರದುಂಡೀಶ್ವರ ಮಠವು ಉತ್ತರ ಕರ್ನಾಟಕದ ಸಾವಿರಾರು ಭಕ್ತರನ್ನು ಹೊಂದಿದೆ. ಅದರಲ್ಲೂ ಹಲವು ದೇಸಗತಿ ಮನೆತನಗಳು ಈ ಮಠದ ಪರಮಭಕ್ತರು. ಚನ್ನಮ್ಮ ಹಾಗೂ ಅವರ ಪತಿ ಕೂಡ ಈ ಮಠಕ್ಕೆ ನಡೆದುಕೊಳ್ಳುತ್ತಿದ್ದರು.

ಪೇಶ್ವೆಗಳು ಮಲ್ಲಸರ್ಜ ದೊರೆಯನ್ನು ಬಂಧಿಸಿ ಪುಣೆ ಕಾರಾಗೃಹದಲ್ಲಿಟ್ಟಿದ್ದರು. ಆದರೆ, ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತು. ನಾನು ದುರದುಂಡೀಶ್ವರ ಮಠದ ಸನ್ನಿಧಾನದಲ್ಲಿ ಜೀವ ಬಿಡಬೇಕು ಎಂದು ಕೇಳಿಕೊಂಡಾಗ ಪೇಶ್ವೆಗಳು ಅವರನ್ನು ಮಠಕ್ಕೆ ಕರೆತಂದು ಬಿಟ್ಟಿದ್ದರು. ದುರದುಂಡೀಶ್ವರರು ಮಲ್ಲಸರ್ಜ ಅವರ ಬಾಯಿಗೆ ಅಂಬಲಿ, ನೀರು ಹಾಕಿದ ನಂತರ ಜೀವ ಬಿಟ್ಟರು ಎಂದು ಇತಿಹಾಸ ಹೇಳುತ್ತದೆ. ಇದರ ನೆನಪಿಗಾಗಿ ಇದೇ ಮಠದ ಆವರಣದಲ್ಲಿ ಮಲ್ಲಸರ್ಜನ ಕಟ್ಟೆ ಕಟ್ಟಿ ಪೂಜಿಸಲಾಗುತ್ತಿದೆ. ಇದನ್ನು ವೀಕ್ಷಿಸಲು ನಾಡಿನ ವಿವಿಧೆಡೆಯಿಂದ ಚನ್ನಮ್ಮನ ಅಭಿಮಾನಿಗಳು ಆಗಮಿಸುತ್ತಾರೆ. ಆದರೆ, ಅವರು ಇದರ ಐತಿಹ್ಯ ತಿಳಿಯುತ್ತಿಲ್ಲ.

ನಿರ್ಲಕ್ಷ್ಯಕ್ಕೊಳಗಾದ ಮಲ್ಲಸರ್ಜನ ಸಮಾಧಿ ಸ್ಥಳ (ETV Bharat)

ಮಲ್ಲಸರ್ಜರ ಗದ್ದುಗೆ ಇರುವ ಸ್ಥಳವನ್ನು ಇತ್ತೀಚಿಗೆ ನವೀಕರಿಸಲಾಗಿದ್ದು, ಆಕರ್ಷಕವಾದ ಮಂಟಪ ಕಟ್ಟಲಾಗಿದೆ. ಆದರೆ, ಮಲ್ಲಸರ್ಜನ ಕಟ್ಟೆ ಕುರಿತು ಮಾಹಿತಿಗಾಗಿ ಚಿಕ್ಕ ನಾಮಫಲಕ ಅಳವಡಿಸಿದ್ದು ಬಿಟ್ಟರೆ ಬೇರೆ ಯಾವ ಕ್ರಮವನ್ನೂ ಸರ್ಕಾರ ತೆಗೆದುಕೊಂಡಿಲ್ಲ. ಮಠಕ್ಕೆ ಬಂದವರು ಮಲ್ಲಸರ್ಜ ರಾಜ ಜೀವ ಬಿಟ್ಟ ಸ್ಥಳವನ್ನು ಹುಡುಕುವಂತಾಗಿದೆ.

ಅರಭಾವಿ ಮಠ
ಅರಭಾವಿ ಮಠ (ETV Bharat)

ಮಲ್ಲಸರ್ಜ ದೊರೆ ಸಮಾಧಿ ಕುರಿತು ಗೊಂದಲ: ದುರದುಂಡೀಶ್ವರ ಮಠದ ಆವರಣದಲ್ಲಿ ಜೀವ ಬಿಡುವ ಮಲ್ಲಸರ್ಜ ಅವರ ಅಂತ್ಯಕ್ರಿಯೆನ್ನು ಇಲ್ಲಿಯೇ ನೆರವೇರಿಸಿ, ಸಮಾಧಿ ನಿರ್ಮಿಸಲಾಗಿದೆ ಎಂದು ಕೆಲ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದಿಷ್ಟು ಜನ ಕಿತ್ತೂರು ಮತ್ತು ವಣ್ಣೂರಿನಲ್ಲಿ ಸಮಾಧಿ ಇದೆ ಎಂದು ಪ್ರತಿಪಾದಿಸುತ್ತಿದ್ದಾರೆ. 2 ಶತಮಾನಗಳಿಂದಲೂ ಈ ಗೊಂದಲ ಮುಂದುವರಿದಿದೆ. ಈ ಬಗ್ಗೆ ಸಂಶೋಧನೆಯಾಗಿ ಸತ್ಯ ಹೊರತರಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಮಲ್ಲಸರ್ಜ ಸಮಾಧಿ
ಮಲ್ಲಸರ್ಜನ ಸಮಾಧಿ (ETV Bharat)

ಮಲ್ಲಸರ್ಜ ಆಡಳಿತದಲ್ಲಿ ಉತ್ತುಂಗಕ್ಕೇರಿದ್ದ ಕಿತ್ತೂರು: ಕಿತ್ತೂರು ಸಾಮ್ರಾಜ್ಯದಲ್ಲಿ 1782ರಿಂದ 1816ರವರೆಗೆ ಆಳ್ವಿಕೆ ನಡೆಸಿದ 11ನೇ ದೊರೆ ಮಲ್ಲಸರ್ಜ. ಅವರಿಗೆ ಇಬ್ಬರು ಪತ್ನಿಯರು. ರಾಣಿ ರುದ್ರಮ್ಮ ಮತ್ತು ರಾಣಿ ಚನ್ನಮ್ಮ. ಸಂಕಷ್ಟದ ಸಮಯದಲ್ಲಿ ಪತಿಯ ಬೆನ್ನಿಗೆ ನಿಂತು ಕಿತ್ತೂರನ್ನು ಶತ್ರುಗಳಿಂದ ರಕ್ಷಿಸಿದ ಕೀರ್ತಿ ಇಬ್ಬರೂ ರಾಣಿಯರಿಗೆ ಸಲ್ಲುತ್ತದೆ.

ಮಲ್ಲಸರ್ಜ ದೊರೆ ಆಳ್ವಿಕೆಯಲ್ಲಿ ಕಿತ್ತೂರು ವೈಭವಪೂರ್ಣವಾಗಿತ್ತು. ಸಂಸ್ಥಾನದ ವೈಭವ ಘನತೆಯ ಶಿಖರಕ್ಕೆ ಮುಟ್ಟಿತ್ತು. ಖಜಾನೆ ತುಂಬಿ ತುಳುಕುತ್ತಿತ್ತು. 1802ರಲ್ಲಿ 5 ಲಕ್ಷ ರೂ.‌ ಕಂದಾಯ ಉತ್ಪನ್ನವಿತ್ತು. ವ್ಯಾಪಾರ, ಉದ್ದಿಮೆ ಉತ್ತಮ ಸ್ಥಿತಿಯಲ್ಲಿದ್ದು, ಜನ ಸುಖದಿಂದ ಇದ್ದರು. ಒಟ್ಟು 34 ವರ್ಷ ರಾಜ್ಯಭಾರ ಮಾಡಿದ ಮಲ್ಲಸರ್ಜ ಕಿತ್ತೂರಿನ ರಾಜರಲ್ಲಿಯೇ ಅತ್ಯಂತ ಪ್ರಖ್ಯಾತ ಮತ್ತು ಗೌರವಾನ್ವಿತ ದೊರೆ. 'ಪ್ರತಾಪರಾವ ದೇಸಾಯಿ', 'ಶಮಶೇರ ಜಂಗಬಹದ್ದೂರ' ಬಿರುದುಗಳನ್ನು ಪಡೆದಿದ್ದರು.

ಅರಭಾವಿ ಮಠ
ಅರಭಾವಿ ಮಠ (ETV Bharat)

ಪೇಶ್ವೆ ಇವರಿಗೆ ನೀಡಿದ 'ಪ್ರತಾಪರಾವ' ಬಿರುದಿನ ಸಂಸ್ಮರಣೆಗಾಗಿ ಮಲ್ಲಸರ್ಜ ಅರಸ ನಂದಗಡ ಬಳಿ 'ಪ್ರತಾಪಗಡ' ಎಂಬ ಕೋಟೆ ಕಟ್ಟಿದ್ದ. ಧರ್ಮ ಸಹಿಷ್ಣುವಾಗಿದ್ದ ಮಲ್ಲಸರ್ಜ ಕಲೆ, ಸಾಹಿತ್ಯ, ನಾಟಕ, ನೃತ್ಯ, ಹಾಡು, ಬೈಲಾಟಗಳಿಗೆ ಪ್ರೋತ್ಸಾಹ ನೀಡಿ, ಕವಿ, ಸಾಹಿತಿಗಳಿಗೆ ಆಶ್ರಯ ನೀಡಿದ್ದರು ಎಂಬುದನ್ನು ಜಾನಪದ ವಿದ್ವಾಂಸ ಡಾ.ಸಿ.ಕೆ.ನಾವಲಗಿ ತಮ್ಮ "ಕಿತ್ತೂರು ಸಂಸ್ಥಾನ ಜನಕಥನ ಅನುಸಂಧಾನ" ಕೃತಿಯಲ್ಲಿ ದಾಖಲಿಸಿದ್ದಾರೆ. ಇಷ್ಟೇಲ್ಲಾ ಪರಾಕ್ರಮಿ, ದಕ್ಷ ಆಡಳಿತಗಾರ ಆಗಿದ್ದರೂ ಇತಿಹಾಸದಲ್ಲಿ ಮಲ್ಲಸರ್ಜರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಎಂಬ ಕೊರಗು ಇಲ್ಲಿನ ಜನರದ್ದು.

ಅರಭಾವಿ ಮಠದ ಪೀಠಾಧಿಪತಿ ಗುರು ಬಸವಲಿಂಗ ಸ್ವಾಮೀಜಿ 'ಈಟಿವಿ ಭಾರತ' ಜೊತೆಗೆ ಮಾತನಾಡಿ, ಮಲ್ಲಸರ್ಜ ದೊರೆ ತನ್ನ ಇಚ್ಛೆಯಂತೆ ನಮ್ಮ ಮಠದಲ್ಲೇ ಲಿಂಗೈಕ್ಯವಾಗಿದ್ದ. ಇಲ್ಲಿಯೇ ಸಮಾಧಿ ಕೂಡ ಮಾಡಲಾಗಿದೆ. ಸಮಾಧಿ ಕುರಿತು ಸಂಶೋಧಕ ಡಾ.ಸಿ.ಕೆ.ನಾವಲಗಿ ಗುರುತಿಸಿದ್ದಾರೆ. 1922ರಲ್ಲಿ ಶ್ರೀಮಠದಿಂದ ಪ್ರಕಟಿಸಿದ "ಕಿತ್ತೂರಿನ ಘತವೈಭವ" ಕೃತಿಯಲ್ಲೂ ಉಲ್ಲೇಖಿಸಲಾಗಿದೆ. ಅವರ ಸಮಾಧಿಗೆ ನಿತ್ಯವೂ ಪೂಜೆ ನಡೆಯುತ್ತದೆ ಎಂದರು.

ಅರಭಾವಿ ಮಠಕ್ಕೆ ಆಗಮಿಸಿದ್ದ ಭಕ್ತ ಬಸವರಾಜ ಪಾಟೀಲ ಮಾತನಾಡಿ, "ಅರಭಾವಿ ಮಠದಲ್ಲಿ ಜೀವ ಬಿಡುವ ಮಲ್ಲಸರ್ಜ ದೊರೆಯನ್ನು ಕಿತ್ತೂರಿನಲ್ಲೇ ಅಂತ್ಯಕ್ರಿಯೆ ಮಾಡಲಾಗಿದ್ದು, ಅಲ್ಲಿಯೇ ಅವರ ಸಮಾಧಿ ಇದೆ. ಇನ್ನು ರಾಣಿ ಚನ್ನಮ್ಮನಿಗೆ ಸಿಕ್ಕಷ್ಟು ಪ್ರಚಾರ ಮಲ್ಲಸರ್ಜ ದೊರೆಗೆ ಎಲ್ಲಿಯೂ‌ ಸಿಗುತ್ತಿಲ್ಲ. ಹಾಗಾಗಿ, ಮಲ್ಲಸರ್ಜ ರಾಜನ ಬಗೆಗಿನ ಇತಿಹಾಸವನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಯಾಕೆಂದರೆ ಮಲ್ಲಸರ್ಜ ಕಿತ್ತೂರು‌ ಅರಸರ ಪೈಕಿ‌ ಅತ್ಯಂತ ಶ್ರೇಷ್ಠನಾಗಿದ್ದ, ಹಾಗಾಗಿ ಅವರಿಗೆ ಸೂಕ್ತ ಗೌರವ ಸಿಗಬೇಕಿದೆ" ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಭಾರಿ ಮಳೆಯಿಂದ ಮೈಲಾರ ಮಹಾದೇವಪ್ಪ ಸ್ಮಾರಕ ಜಲಾವೃತ: ತಡೆಗೋಡೆ ನಿರ್ಮಾಣಕ್ಕೆ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.